ಬೆಳ್ಳಾರೆ: ಕಳಂಜ ಗ್ರಾಮ ಪಂಚಾಯತ್ ನ 2019-20ನೇ ಸಾಲಿನ ಪ್ರಥಮ ಹಂತದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ ನೋಡೆಲ್ ಅಧಿಕಾರಿ ದೇವರಾಜ್ ಮುತ್ಲಾಜೆ ಅಧ್ಯಕ್ಷತೆಯೊಂದಿಗೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಸಾಮಾಜಿಕ ಲೆಕ್ಕ ಪರಿಶೋಧನಾ ತಾಲೂಕು ಸಂಯೋಜನಾಧಿಕಾರಿ ರೋಹಿತ್ ನರೇಗಾ ಯೋಜನೆಯ ಬಗ್ಗೆ ಮಾಹಿತಿ ನೀಡಿ, ಕೇಂದ್ರ ಸರ್ಕಾರದ ಅತೀ ದೊಡ್ಡ ಯೋಜನೆ ಇದಾಗಿದೆ. ನರೇಗಾ ಯೋಜನೆಯ ಫಲವನ್ನು ಗರಿಷ್ಠ ಮಟ್ಟದಲ್ಲಿ ಗ್ರಾಮದ ಜನರು ಬಳಸಿಕೊಳ್ಳಬೇಕು ಎಂದರು.
ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀಧರ್ ಕೆ.ಆರ್ ಮಾಹಿತಿ ನೀಡುತ್ತಾ 2019-20ನೇ ಸಾಲಿನಲ್ಲಿ ಸರಕಾರದಿಂದ ದೊರೆಯುವ ಅನುದಾನದ ಪಟ್ಟಿ ವಾಚಿಸುತ್ತಾ ಬಾವಿ ನಿರ್ಮಾಣಕ್ಕೆ 1 ಲಕ್ಷದ 28 ಸಾವಿರ ರೂಪಾಯಿ, ಜಲಮರುಪೂರಣ ಘಟಕ ನಿರ್ಮಾಣಕ್ಕೆ 22 ಸಾವಿರ ರೂಪಾಯಿ, ದನದ ಹಟ್ಟಿ ನಿರ್ಮಾಣಕ್ಕೆ 23 ಸಾವಿರ ರೂಪಾಯಿ, ಕೃಷಿಹೊಂಡ ನಿರ್ಮಾಣಕ್ಕೆ 85ಸಾವಿರ ರೂಪಾಯಿ, ಆಡು ಮತ್ತು ಕುರಿ ಶೆಡ್ ನಿರ್ಮಾಣಕ್ಕೆ 19600 ರೂಪಾಯಿ, ಕೋಳಿ ಶೆಡ್ ನಿರ್ಮಾಣಕ್ಕೆ 50 ಸಾವಿರ ರೂಪಾಯಿ, ಶೌಚಾಲಯ ನಿರ್ಮಾಣಕ್ಕೆ 12 ಸಾವಿರ ರೂಪಾಯಿ ದೊರೆಯವುದೆಂದು ಹೇಳಿದರು.
ತೋಟಗಾರಿಕಾ ತಾಂತ್ರಿಕ ಸಹಾಯಕಿ ನಿಶಾ ಮಾಹಿತಿ ನೀಡುತ್ತಾ ಅಡಿಕೆ ಪುನಶ್ಚೇತನಕ್ಕೆ ಹಾಗು ಬಾಳೆಕೃಷಿಗೆ ಇಲಾಖೆಯಿಂದ ಸಹಕಾರವಿದೆ ಎಂದರು. ಅಡಿಕೆ ಒಂದು ಗುಂಡಿ 2.30 ಫೀಟು ಉದ್ದ ಅಗಲ ಇದ್ದರೆ 310 ರೂಪಾಯಿಗಳಂತೆ, 3ಫೀಟು ಉದ್ದ ಮತ್ತು ಅಗಲದ ತೆಂಗು ಗುಂಡಿಯೊಂದಕ್ಕೆ 310 ರೂಪಾಯಿಗಳಂತೆ, 1.30 ಫೀಟು ಆಳದ ಕಾಳು ಮೆಣಸು ಗುಂಡಿಗೆ 50ರೂಪಾಯಿ, ವೀಳ್ಯದೆಲೆಗೆ 40ರೂಪಾಯಿ, ಗೇರು ಕೃಷಿಯಲ್ಲಿ 3ಫೀಟು ಉದ್ದ ಮತ್ತು ಅಗಲದ ಗುಂಡಿಯೊಂದಕ್ಕೆ 70ರೂಪಾಯಿಯಂತೆ ಇಲಾಖೆಯಿಂದ ನೀಡಲಾಗುವುದು ಎಂದರು.
ವೇದಿಕೆಯಲ್ಲಿ ಕಳಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋಧ .ಎಂ, ಸದಸ್ಯರಾದ ಲಕ್ಷ್ಮೀಶ ಕಜೆಮೂಲೆ, ಸೌಮ್ಯ.ಕೆ ಉಪಸ್ಥಿತರಿದ್ದರು.
ಪಿಡಿಒ ಶ್ರೀಧರ್ ಕೆ.ಆರ್ ಸ್ವಾಗತಿಸಿ ವಂದಿಸಿದರು. ದಿವ್ಯ ವರದಿ ವಾಚಿಸಿದರು. ಜಯರಾಮ್ ನಿರೂಪಿಸಿದರು.
ಹವಾಮಾನ ಬದಲಾವಣೆಯು 2050 ರ ದಶಕದಲ್ಲಿ ಮಳೆಯಾಶ್ರಿತ ಅಕ್ಕಿ ಇಳುವರಿಯನ್ನು 20% ಮತ್ತು…
ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ದೈವ ಶಾಪ ದೋಷ ಎಂಬುದು ಗತ ಜನ್ಮದ ಕರ್ಮದಿಂದ…
ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದು ನದಿಗಳು ತುಂಬಿ ಹರಿಯುತ್ತಿವೆ. ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಕೊಡಗಿನ…
ನಿರಂತರ 170 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ನೀಡಿದ ಮಂಗಳೂರಿನ ರೆಮೋನಾ ಪಿರೇರಾ,…
ಕಳೆದ 11 ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆಯಾಗಿದ್ದು, ಕೃಷಿಕರ ಹಿತದೃಷ್ಟಿಯಿಂದ ಕೇಂದ್ರ…
ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ದೆಹಲಿಯಲ್ಲಿ ʻಭಾರತ್ ಸಂಚಾರ್ ನಿಗಮ್ ಲಿಮಿಟೆಡ್ʼನ-…