ಸುಳ್ಯ: ಸರಳಿಕುಂಜದಲ್ಲಿರುವ ಧರ್ಮಾರಣ್ಯದ ಗುರುಗಣಪತಿ ಸಭಾಭವನದಲ್ಲಿ ಭಾನುವಾರ ಸುಳ್ಯ ಹವ್ಯಕ ವಲಯ ದ ವತಿಯಿಂದ ಸಂಧ್ಯಾ ಕುಮಾರ್ ಉಬರಡ್ಕ ಅವರ ಸ್ವರಚಿತ ಕವನ ಸಂಕಲನ ‘ಉಷಾಕಿರಣ’ದ ಬಿಡುಗಡೆ ಸಮಾರಂಭವು ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ಹವ್ಯಕ ವಲಯದ ಅಧ್ಯಕ್ಷ ಈಶ್ವರ ಕುಮಾರ್ ಭಟ್ ವಹಿಸಿದ್ದರು. ಕವನ ಸಂಕಲನ ಬಿಡುಗಡೆ ಮಾಡಿದ ತಾಲುಕು ಕಸಾಪ ಅಧ್ಯಕ್ಷ ಡಾ| ಹರಪ್ರಸಾದ ತುದಿಯಡ್ಕ ಮಾತನಾಡಿ ಕವನ ಸಂಕಲನಕ್ಕೆ ಶುಭ ಹಾರೈಸಿ ಸಾಹಿತ್ಯಾಸಕ್ತರನ್ನು ಹುರಿದುಂಬಿಸಿದರು.
ಪ್ರಧಾನ ಭಾಷಣಕಾರರಾದ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇಲ್ಲಿನ ಉಪನ್ಯಾಸಕ ರಾಧೇಶ್ ತೋಳ್ಪಾಡಿ, ‘ಉಷಾಕಿರಣ’ದ ಕವನಗಳ ಕಿರುಚಿತ್ರಣ ನೀಡಿ, ವಿಮರ್ಶಿಸಿ ,ಶುಭ ಹಾರೈಸಿದರು. ಮೈತ್ರಿ ಯು. ಇವರು ‘ಉಷಾಕಿರಣ’ ಕವನ ಸಂಕಲನದಿಂದ ಆಯ್ದ ಎರಡು ಕವನಗಳನ್ನು ರಾಗಬದ್ಧವಾಗಿ ಹಾಡಿದರು.
ಮುಖ್ಯ ಅತಿಥಿಗಳಾದ ಪ್ರೊ| ಟಿ. ಶ್ರೀಕೃಷ್ಣಭಟ್ ಕವನ ಸಂಕಲನಕ್ಕೆ ಶುಭ ಕೋರಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಬಗ್ಗೆ ಮಾಹಿತಿ ನೀಡಿದರು.ವೇದಿಕೆಯಲ್ಲಿ ಶಿಕ್ಷಕಿ ಸಂಧ್ಯಾ ಕುಮಾರ್ ಉಪಸ್ಥಿತರಿದ್ದರು.
ಶ್ರುತಿ ಯು. ಪ್ರಾರ್ಥಿಸಿದರು. ವಿಷ್ಣು ಕಿರಣ ನೀರಬಿದ್ರೆ ಸ್ವಾಗತಿಸಿ, ಗೋಪಾಲಕೃಷ್ಣ ಭಟ್ ಶಿವ ನಿವಾಸ ವಂದಿಸಿದರು. ಶ್ರುತಿ ಹಾಗೂ ಪ್ರೀತಿ ಯು ಕಾರ್ಯಕ್ರಮ ನಿರೂಪಿಸಿದರು.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…