ಸಂಪಾಜೆ: ಕನ್ನಡ ಸಾಹಿತ್ಯ ಪರಿಷತ್ತು ಸಂಪಾಜೆ ಹೋಬಳಿ ಘಟಕದ ಸಭೆ ಸಂಪಾಜೆ ಪಯಸ್ವಿನಿ ಸಹಕಾರಿ ಸದನದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಹೋಬಳಿ ಮಟ್ಟದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಪಾಜೆ ಹೋಬಳಿ ಘಟಕ ಕಸಾಪ ಸಮಿತಿಯ ಅಧ್ಯಕ್ಷರಾಗಿ ಸಂಪಾಜೆ ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅನಂತ ಉರುಬೈಲು, ಕಾರ್ಯದರ್ಶಿಗಳಾಗಿ ಯಕ್ಷಗಾನ ಭಾಗವತರಾದ ಬಿ.ಜೆ.ಯಶೋಧರ, ಸಾಹಿತಿ ಸಹನಾ ಕಾಂತಬೈಲು, ಕೋಶಾಧಿಕಾರಿಯಾಗಿ ಕೊಡಗು ಸಂಪಾಜೆ ಗ್ರಾ.ಪಂ.ಅಧ್ಯಕ್ಷ ಕುಮಾರ್ ಚೆದ್ಕಾರ್, ಗೌರವ ಸಲಹೆಗಾರರಾಗಿ ವೆಂಕಪ್ಪ ಮಾಸ್ತರ್ ಮತ್ತು ಜಿಲ್ಲಾ ಸಮಿತಿ ಸದಸ್ಯರಾಗಿ ಲೋಕನಾಥ್ ಅಮೆಚೂರ್ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರನ್ನೂ ಆಯ್ಕೆ ಮಾಡಲಾಯಿತು.
Advertisement
ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಂದರ ಬಿಸಿಲುಮನೆ, ನಿವೃತ ಶಿಕ್ಷಕ ಇಬ್ರಾಹಿಂ ಮಾಸ್ತರ್, ಜಾನಪದ ಕಲಾವಿಧ ದೇವಪ್ಪ ಕೊಯನಾಡು, ಲೋಕನಾಥ್ ಅಮೆಚೂರ್ ಮತ್ತಿತರರು ಉಪಸ್ಥಿತರಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement