ಸುಳ್ಯ: ಮಹಾ ಪ್ರವಾಹಕ್ಕೆ ಸಿಲುಕಿ ಹಾನಿಗೀಡಾದ ಚಿಕ್ಕಮಂಗಳೂರಿನ ಕಾಂಡ್ಯಾ ಎಂಬಲ್ಲಿನ ತೂಗು ಸೇತುವೆಯನ್ನು ದುರಸ್ಥಿ ಪಡಿಸಬೇಕೆಂದು ಶಾಸಕ ಸಿ.ಟಿ.ರವಿ ದೂರವಾಣಿ ಕರೆ ಮಾಡಿ ಗಿರೀಶ್ ಭಾರದ್ವಾಜ್ ಅವರಿಗೆ ಕೇಳಿಕೊಂಡಿದ್ದಾರೆ. ಪ್ರವಾಹಕ್ಕೆ ಸಿಲುಕಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಗಿರೀಶ್ ಭಾರದ್ವಾಜ್ ನಿರ್ಮಿಸಿದ 10 ತೂಗು ಸೇತುವೆಗಳಿಗೆ ಹಾನಿ ಸಂಭವಿಸಿತ್ತು. ತೂಗು ಸೇತುವೆಗಳು ಹಾನಿಗೀಡಾಗಿರುವುದಕ್ಕೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಾಜ್ ತೀವ್ರ ನೋವು ತೋಡಿ ಕೊಂಡಿದ್ದರು. ಕಾಂಡ್ಯಾದ ತೂಗು ಸೇತುವೆ ದುರಸ್ಥಿ ಪಡಿಸುವಂತೆ ಅಲ್ಲಿನ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗಳು ಕೂಡ ಕರೆ ಇವರಿಗೆ ಮಾಡಿದ್ದಾರೆ.
ಮಳೆ ಕಡಿಮೆಯಾಗಿ ನೀರು ಇಳಿದ ಮೇಲೆ ದುರಸ್ಥಿ ಕಾರ್ಯ ನಡೆಸಬಹುದು ಎಂದು ಭಾರದ್ವಾಜ್ ತಿಳಿಸಿದ್ದಾರೆ.
ಮುಂಗಾರು ಮತ್ತಷ್ಟು ದುರ್ಬಲಗೊಳ್ಳತ್ತಿದ್ದು, ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಆಗಸ್ಟ್ ತಿಂಗಳಲ್ಲಿ…
ದ ರೂರಲ್ ಮಿರರ್.ಕಾಂ ನಲ್ಲಿ "ಹೊಸರುಚಿ" ಯ ಮೂಲಕ ಹಲಸು ಅಡುಗೆಯ ಮೂಲಕ…
ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ವತಿಯಿಂದ…
ವಿಶ್ವದಲ್ಲಿ ಅಡಿಕೆ ಉತ್ಪಾದನೆ ಆಗುವ ಎಲ್ಲಾ ರಾಷ್ಟ್ರಗಳಲ್ಲಿ ಅದರ ಬಳಕೆಯೂ ಆಗುತ್ತಿದೆ.ಇದರೊಂದಿಗೆ ಈ…
ಪ್ಲಾಸ್ಟಿಕ್ ಮಾಲಿನ್ಯವು ಪರಿಸರ ವಿನಾಶದ ಅಂಶಗಳಲ್ಲಿ ಒಂದಾಗಿದೆ. ನಮ್ಮ ಸಾಗರಗಳು ಮತ್ತು ಕರಾವಳಿಗಳಲ್ಲಿ…
ವಿಯೆಟ್ನಾಂ 2030 ರ ವೇಳೆಗೆ ಕೃಷಿಯಲ್ಲಿ ಹೊರಸೂಸುವ ಮೀಥೇನ್ ಅನ್ನು 30% ರಷ್ಟು…