ಕಾಣಿಯೂರು : ಇಲ್ಲಿನ ಶ್ರೀ ರಾಮತೀರ್ಥ ಮಠದಲ್ಲಿ ಶ್ರೀ ನರಸಿಂಹ ಜಯಂತಿ ಪ್ರಯುಕ್ತ ಶನಿವಾರ ನಡೆದ ಶ್ರೀನೃಸಿಂಹ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಧೀ ಶಕ್ತಿ ಮಹಿಳಾ ಯಕ್ಷ ಬಳಗ ಪುತ್ತೂರು ಇವರಿಂದ ಭಕ್ತ ಪ್ರಹ್ಲಾದ ಯಕ್ಷಗಾನ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಅಮೃತಾ ಅಡಿಗ,ಸತ್ಯನಾರಾಯಣ ಅಡಿಗ,ಕೌಶಿಕ್ ರಾವ್ ಪುತ್ತಿಗೆ,ಅನನ್ಯ ಅಡಿಗ ಮತ್ತು ಮುಮ್ಮೇಳದಲ್ಲಿ ಪದ್ಮಾ ಕೆ.ಆರ್ ಆಚಾರ್ಯ,ವೀಣಾ ನಾಗೇಶ್ ತಂತ್ರಿ, ಜಯಲಕ್ಷ್ಮೀ ವಿ.ಭಟ್, ಆಶಾಲತಾ ಕಲ್ಲೂರಾಯ, ಅಶ್ವಿನಿ ನಿಡ್ವಣ್ಣಾಯ ಭಾಗವಹಿಸಿದರು.
ಕಲಾವಿದರನ್ನು ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಫಲ ಮಂತ್ರಾಕ್ಷತೆ ನೀಡಿ ಹರಸಿದರು.ಮಠದ ವ್ಯವಸ್ಥಾಪಕ ನಿರಂಜನ್ ಆಚಾರ್ ಸಹಕರಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel