ಕಾಣಿಯೂರು:ಇಲ್ಲಿನ ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ವತಿಯಿಂದ 32ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ಸೆ.2, ಮತ್ತು 3 ರಂದು ನಡೆಯಲಿದೆ.
ಸೆ.02ನೇ ಸೋಮವಾರ ಬೆಳಿಗ್ಗೆ ಮಹಾಗಣಪತಿ ಪ್ರತಿಷ್ಠೆ ನಡೆದು ನಂತರ ಸಾರ್ವಜನಿಕ ಗಣಹೋಮ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನದ ನಂತರ ಚುಕ್ಕಿ ರಂಗೋಲಿ ಸ್ಪರ್ಧೆ, ಗಣಪತಿ ದೇವರ ಚಿತ್ರ ಬಿಡಿಸುವ ಸ್ಪರ್ಧೆ, ಭಕ್ತಿ ಗೀತೆ ಸ್ಪರ್ಧೆ, ಚೀಟಿ ಎತ್ತಿ ಅಭಿನಯ ಮತ್ತು ಆಶುಬಾಷಣ ಸ್ಪರ್ಧೆ ನಡೆಯಲಿದೆ. ಸಂಜೆ ಭಜನಾ ಕಾರ್ಯಕ್ರಮ,ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ನಡೆಯುವ ಧಾರ್ಮಿಕ ಸಭೆಯಲ್ಲಿ ಸಾಂದಿಪನಿ ವಿದ್ಯಾಸಂಸ್ಥೆಯ ಶಿಕ್ಷಕರಾದ ಶ್ರೀಪ್ರಸಾದ್ ಧಾರ್ಮಿಕ ಭಾಷಣ ಮಾಡಲಿದ್ದು, ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಜನಾ ಮಂಡಳಿಯ ಗೌರವ ಅಧ್ಯಕ್ಷರಾದ ಚಿದಾನಂದ ಉಪಾಧ್ಯಾಯ ಕಲ್ಪಡ ವಹಿಸಲಿದ್ದಾರೆ. ನಂತರ ರಾತ್ರಿ 12ರ ತನಕ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸೆ 03ರ ಮಂಗಳವಾರ ದಂದು ಬೆಳಿಗ್ಗೆ ಮಹಾಪೂಜೆ, ಗಣಹೋಮ ನಡೆದು ನಂತರ ವಿಷ್ಣು ಪ್ರಿಯ ಭಜನಾ ಮಂಡಳಿ ಕಾಣಿಯೂರು ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ನಂತರ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಮಹಾಪೂಜೆ ನಡೆದು ವಿಗ್ರಹ ವಿಸರ್ಜನಾ ಮೆರವಣಿಗೆ ಭಜನಾ ಮಂದಿರದಿಂದ ಹೊರಟು ಕೂಡುರಸ್ತೆಗಾಗಿ ಕಾಣಿಯೂರಿನ ಪ್ರಮುಖ ರಸ್ತೆಯಲ್ಲಿ ಸಾಗಿ ಕಜೆ ಬಾಗಿಲು ಎಂಬಲ್ಲಿ ಜಲಸ್ತಂಭನ ಗೊಳ್ಳಲಿದೆ.
ಕೋವಿಡ್-19 ಈಗ ನಮ್ಮ ಜೀವನದ ಭಾಗ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್…
ದಕ್ಷಿಣಕನ್ನಡ, ಉಡುಪಿ, ಮಡಿಕೇರಿ ಸೇರಿದಂತೆ ಕೊಡಗು ಜಿಲ್ಲೆಯ ಬಹುತೇಕ ಕಡೆ ಧಾರಾಕಾರ ಮಳೆಯಾಗುತ್ತಿದೆ.…
ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮುಂದಿನ 2 ಅಥವಾ 3…
ಕಳೆದ 16 ವರ್ಷಗಳ ದಾಖಲೆಗಳ ಪ್ರಕಾರ ನಿಗದಿತ ದಿನಕ್ಕಿಂತ ಮೊದಲೇ ಈ ಬಾರಿ…
ಉತ್ತಮ ಮಳೆಗೆ ಅರಣ್ಯ ಪ್ರದೇಶವೆಲ್ಲ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ, ಮಳೆ ಹನಿಗಳಿಗೆ ಮೈಯೊಡ್ಡಿದ…
ರಾಜ್ಯದ ಅಡಿಕೆ ಬೆಳೆ ಅತ್ಯಂತ ಉತ್ಕೃಷ್ಟ ಗುಣಮಟ್ಟದ್ದಾಗಿದ್ದು, ಇದರಲ್ಲಿ ಯಾವುದೇ ರಾಸಾಯನಿಕ ಇಲ್ಲ.…