ಸುಳ್ಯ: ಕಾನೂನು ಸಮಾಜದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುತ್ತದೆ. ಹಾಗಾಗಿ ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅಗತ್ಯ. ತಮ್ಮ ಕರ್ತವ್ಯವನ್ನು ಅರಿತಾಗ ಹಕ್ಕುಗಳು ತನ್ನಿಂದ ತಾನೇ ಲಭ್ಯವಾಗುತ್ತದೆ ಎಂದು ಸುಳ್ಯದ ಕೆವಿಜಿ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಉದಯಕೃಷ್ಣ ಬಿ.ಅಭಿಪ್ರಾಯಪಟ್ಟರು.
ಅವರು ಸುಳ್ಯದ ನೆಹರೂ ಮೆಮೋರಿಯಲ್‍ಕಾಲೇಜಿನ ಯುವ ರೆಡ್‍ಕ್ರಾಸ್ ಘಟಕದ ವತಿಯಿಂದ ಹಮ್ಮಿಕೊಂಡ“ನಿತ್ಯಜೀವನದಲ್ಲಿ ಕಾನೂನು”ಎಂಬ ವಿಷಯದ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಕೆ ಗಿರಿಧರ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕಾನೂನನ್ನು ಅರಿತು ಮುನ್ನಡೆದದ್ದೇ ಆದಲ್ಲಿ ಓರ್ವ ಸಭ್ಯ ವ್ಯಕ್ತಿಯಾಗಿ ಮೂಡಿ ಬರಲು ಸಾಧ್ಯ ಎಂದರು.
ಸುಳ್ಯ ಆರಕ್ಷಕಠಾಣೆಯ ಪ್ರೊಬೇಷನರಿ ಪೋಲೀಸ್ ಉಪನಿರೀಕ್ಷಕ ಆಂಜನೇಯರೆಡ್ಡಿ, ಪ್ರೊಬೇಷನರಿ ಪೋಲೀಸ್‍ಉಪನಿರೀಕ್ಷಕ ಸಂತೋಷ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಾಕ್ರಮಾಧಿಕಾರಿ ಡಾ. ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಘಟಕ ನಾಯಕರುಗಳಾದ ನಾಯಕರುಗಳಾದ ಭುವನ್ ಪಿ,ಕುಮುದಾ ಬಿ ಎಸ್,ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದಉಪನ್ಯಾಸಕಿರತ್ನಾವತಿ ಡಿ. ಹಾಗೂ ಹಿರಿಯರೆಡ್‍ಕ್ರಾಸ್ ಸದಸ್ಯರು ಉಪಸ್ಥಿತರಿದ್ದರು.
ತೇಜಸ್ವಿನಿ, ಮೌನ, ಸಿಂಚನಾ ಪಿ. ಎಂಪ್ರಾರ್ಥಿಸಿದ ಕಾರ್ಯಕ್ರಮದಲ್ಲಿಪಲ್ಲವಿ ಸ್ವಾಗತಿಸಿ,ಮೌನವಂದಿಸಿದರು. ಜಯಮಾಲಕಾರ್ಯಕ್ರಮ ನಿರೂಪಿಸಿದರು.