Advertisement
ನಮ್ಮೂರ ಸುದ್ದಿ

ಕಾಮಗಾರಿ ಪ್ರಾರಂಭವಾಗಿ ವರ್ಷವಾದರೂ ಪೂರ್ತಿಯಾಗಿಲ್ಲ …! ಇದೆಂತ ಪಂಚವಾರ್ಷಿಕ ಯೋಜನೆಯಾ ಮಾರಾಯ್ರೆ….!

Share

ಮಡಪ್ಪಾಡಿ: ಒಂದು ಸಣ್ಣ ಸೇತುವೆ ನಿರ್ಮಾಣ. ಅಂದಾಜು ಒಂದು ವರ್ಷ ಆಯ್ತು ಮಾರಾಯ್ರೆ ಶುರು ಮಾಡಿ. ಇನ್ನೂ ಮುಗೀಲಿಲ್ಲ..!. ಯಾರೂ ಕೇಳುವವರು ಇಲ್ವಾ ? ಇಂಜಿನಿಯರ್ ಅಂತ ಇದ್ದಾರಾ ಇದಕ್ಕೆ ? ಬಿಲ್ ಪಾಸ್ ಆಗುತ್ತಾ ಹೀಗಾದರೆ ? ಜನರಿಂದ ಆಯ್ಕೆಯಾದವರೂ ಇದನ್ನು ನೋಡೋದಿಲ್ವಾ ? ಅಷ್ಟೂ ಅಲ್ಲ, ಇದೆಂತ ಪಂಚ ವಾರ್ಷಿಕ ಯೋಜನೆಯಾ ? ಹೀಗೆಲ್ಲಾ ಪ್ರಶ್ನೆ ಬರುವುದು  ಮಡಪ್ಪಾಡಿಯಲ್ಲಿ.

Advertisement
Advertisement

ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಮಡಪ್ಪಾಡಿಯಿಂದ ಹಾಡಿಕಲ್ಲಿಗೆ ಹೋಗುವ ರಸ್ತೆ ಇದು. ಇದರ ಕತೆ ಹೇಳುವಾಗಲೇ ಇಲ್ಲೊಂದು ಸೇತುವೆ ಬರುತ್ತದೆ. ಮಳೆಗಾಲ ಕಷ್ಟವಾಗುತ್ತೆ ಸಾಗಲು ಅಂತ ಸೇತುವೆ ಮಂಜೂರಾಯ್ತು. ಅದು ಬಾಜಿನಡ್ಕ  ತೋಡಿಗೆ ನಿರ್ಮಾಣ ಮಾಡಲಾಗುತ್ತಿರುವ ಸೇತುವೆ ಅದು. ಸರಿ ಸುಮಾರು ಒಂದು ವರ್ಷವಾಗಿರಬಹುದು ನಿರ್ಮಾಣ ಮಾಡಲು ಶುರು ಮಾಡಿ. ಇಂದಿಗೂ ಕಬ್ಬಿಣ ಮೇಲೆ ಕಾಣುತ್ತಿದೆ, ಕಾಂಕ್ರೀಟ್ ಕೆಲಸ ಮುಗಿದಿಲ್ಲ. ಇನ್ನೀಗ ಮಳೆಗಾಲ ಆರಂಭವಾಗುತ್ತದೆ, ಮಳೆ ಆರಂಭವಾದ ಮೇಲೆ ಹೇಗೆ ಕೆಲಸ ಮಾಡುವುದು  ಇತ್ಯಾದಿ ಪ್ರಶ್ನೆಗಳೆಲ್ಲಾ ಜನರಿಗೆ ಇದೆ. ಆದರೆ ಇದು  ಅಧಿಕಾರಿಗಳಿಗೆ  ಈ ಪ್ರಶ್ನೆ ಬರೋದಿಲ್ವಾ ಎಂಬುದು ಪ್ರಶ್ನೆ.

Advertisement

 

Advertisement

 

ಇಲ್ಲಿ ಅನುದಾನದ ಕೊರತೆ ಇದೆಯೇ ಅಥವಾ ಗುತ್ತಿಗೆದಾರರಿಗೆ ಬೇರೆ ಕಡೆ ಕೆಲಸ ಇದೆಯೇ ಅದೆಲ್ಲಾ ಎರಡನೆಯದು. ಒಂದು ಕೆಲಸ ಆರಂಭವಾಗುವ ಮುನ್ನವೇ ಅನುದಾನದ ವ್ಯವಸ್ಥೆಯೂ ಆಗದೇ ಇದ್ದರೆ ಎಲ್ಲಾ ಕಾಮಗಾರಿಗಳೂ ಇದೇ ಮಾದರಿಯಾಗಿ ಇದ್ದ ಹಣವೂ ಪೋಲಾಗುವುದರಲ್ಲಿ ಎರಡು ಮಾತಿಲ್ಲ. ಈ ಬಗ್ಗೆ ಸಂಬಂಧಿತ ಅಧಿಕಾರಿಗಳು ಗಮನಹರಿಸಲೇಬೇಕು, ಏಕೆಂದರೆ ಇದು ಜನರ ದುಡ್ಡು. ಇನ್ನೊಂದು ಪ್ರಮುಖ ಅಂಶವೆಂದರೆ ಕಾಂಕ್ರೀಟ್ ಹಾಕಲು ಸಿದ್ಧವಾಗಿರುವ ಕಬ್ಬಿಣದ ರಾಡ್ ಮಳೆಗಾಲದಲ್ಲಿ ತುಕ್ಕು ಹಿಡಿದರೆ ನಂತರ ಕಾಮಗಾರಿ ಗುಣಮಟ್ಟದಿಂದ ಕೂಡಿರಬಹುದೇ ? ಕಬ್ಬಿಣದ ರಾಡ್ ಮುಂದೆ ಅಪಾಯವೂ ತರಬಲ್ಲುದಲ್ಲೇ ? ಹೀಗೆಲ್ಲಾ ಅತ್ಯಂತ ಬೇಸಿಕ್ ಪ್ರಶ್ನೆ ಜನರು ಕೇಳುತ್ತಾರೆ. ಇದೆಲ್ಲಾ  ಆ ಇಲಾಖೆಗೆ ತಿಳಿಯುವುದಿಲ್ವೇ ಎಂದು ಜನ ಕೇಳುತ್ತಾರೆ.

Advertisement

 

ಮಡಪ್ಪಾಡಿಯಿಂದ ಹಾಡಿಕಲ್ಲಿಗೆ ಹೋಗುವ ಬಾಜಿನಡ್ಕ ತೋಡಿಗೆ ನಿರ್ಮಾಣವಾಗುತ್ತಿರುವ ಕೆಲಸ ಸೇತುವೆ ಬೇಗನೆ ಮುಗಿಯಬೇಕು ಎನ್ನುತ್ತಾರೆ ಸ್ಥಳೀಯರಾದ ಜಯಂತ್ ದೇವಸ್ಯ.

Advertisement

 

Advertisement

 

 

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |

03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

10 hours ago

ಬಿದಿರು ಕೃಷಿ | ತರಕಾರಿ ಕೃಷಿಯಾಗಿ ಬಿದಿರು

ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…

14 hours ago

ಅಡಿಕೆ ಹಳದಿ ಎಲೆರೋಗ – ಚುನಾವಣೆ

ಅಡಿಕೆ ಕೂಡಾ ಇಂದು ಬಹುಮುಖ್ಯವಾದ ಚುನಾವಣಾ ವಿಷಯ. ಹೀಗಾಗಿ ಅಡಿಕೆ ಹಳದಿ ಎಲೆರೋಗ…

14 hours ago

ವಾರದ ಅತಿಥಿ | ಸುಬ್ರಾಯ ಚೊಕ್ಕಾಡಿ ಮಾತು

https://youtu.be/Vh1tYlOKav0?si=M4grG9euj6dXmkE2 ರೂರಲ್ ಮಿರರ್‌ ವಾರದ ಅತಿಥಿಯಾಗಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರು…

14 hours ago

ಮಕ್ಕಳ ಹಬ್ಬ…

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜದಲ್ಲಿ ಮಕ್ಕಳ ಬೇಸಿಗೆ ಶಿಬಿರ ಮಕ್ಕಳ…

14 hours ago

ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |

ಈ ಬಾರಿ ಆಗಿರುವ ತಾಪಮಾನದ ಹೆಚ್ಚಳವನ್ನು ಕನಿಷ್ಠ ಮುಂದಿನ ಕೆಲವು ವರ್ಷಗಳಲ್ಲಾದರು ನಿಯಂತ್ರಣ…

15 hours ago