ಕಾಲೇಜು ವಿದ್ಯಾರ್ಥಿಗಳಿಗೆ ಜೀವನ ಪಾಠ ಕಲಿಸಿದ ಗದ್ದೆಯಲ್ಲೊಂದು ದಿನ

August 1, 2019
8:00 PM

ಸವಣೂರು: ಪಾಲ್ತಾಡಿ ಗ್ರಾಮದ ಚೆನ್ನಾವರ ಅಭ್ಯುದಯ ಯುವಕ ಮಂಡಲದ ವತಿಯಿಂದ ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿಗಳಿಗೆ ನೇಜಿನಾಟಿ ಹಾಗೂ ಭತ್ತದ ಕೃಷಿಯ ಕುರಿತು ಪ್ರಾತ್ಯಕ್ಷಿಕೆ ನೀಡುವ ಗದ್ದೆಯಲ್ಲೊಂದು ದಿನ ಕಾರ್ಯಕ್ರಮ  ಪಾಲ್ತಾಡಿ ಗ್ರಾಮದ ಲಕ್ಷ್ಮೀ ರೈ ಚೆನ್ನಾವರ ಪಟ್ಟೆ ಅವರ ಗದ್ದೆಯಲ್ಲಿ ನಡೆಯಿತು.

ಈ ಸಂದರ್ಭ ಮಾತನಾಡಿದ ಕಾಲೇಜಿನ ಎನ್.ಎಸ್.ಎಸ್ ಘಟಕದ ಸಂಘಟಕ ವೆಂಕಟ್ರಮಣ ನಾೈಕ್ , ಇಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳು ಅಳಿದುಹೋಗಿ ಪುಸ್ತಕದಲ್ಲಿ ತೋರಿಸುವ ಪರಿಸ್ಥಿತಿ ಬಂದೊದಗಿದೆ. ಹಾಗಾಗಿ ವಿದ್ಯಾರ್ಥಿಗಳಲ್ಲಿ ನಾಟಿ ಕ್ರಮದ ಬಗ್ಗೆ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಸಹಕಾರಿ ಎಂದರು.ಆಧುನಿಕತೆ ಬೆಳೆದಂತೆ ಕೃಷಿಪರಂಪರೆಯನ್ನು ಮರೆಯುತ್ತಿರುವ ಸಂದರ್ಭದಲ್ಲಿ ಭತ್ತದ ಬೇಸಾಯದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯೂ ದೊರೆತಂತಾಯಿತು.ವಿದ್ಯಾರ್ಥಿಗಳು ಕೆಸರಗದ್ದೆಯಲ್ಲಿ ಮಿಂದೆದ್ದು ಆಟವಾಡಿದರು.

ಕಾಲೇಜಿನಲ್ಲಿ ದ.ಕ. ಮಾತ್ರವಲ್ಲದೆ ಹೊರಜಿಲ್ಲೆಗಳ ವಿದ್ಯಾರ್ಥಿಗಳಿದ್ದು,ಅವರೂ ಗದ್ದೆಗೆ ಇಳಿದು ನೇಜಿ ನೆಟ್ಟು ಸಂಭ್ರಮಿಸಿದರು. ಬಳಿಕ ಪರಂಪರಾಗತ ಭತ್ತದ ಕೃಷಿಕ ಇಸುಬು ಕುಂಡಡ್ಕ ಅವರಿಂದ ಭತ್ತದ ನಾಟಿ,ಬೆಳೆಯ ಕುರಿತು ಮಾಹಿತಿ ಪಡೆದುಕೊಂಡರು.ನಂತರ ವಿದ್ಯಾರ್ಥಿಗಳು ಸಾಲು ನಾಟಿಯ ಮೂಲಕ ನೇಜಿ ನಾಟಿ ಮಾಡಿದರು.

ಈ ಸಂದರ್ಭದಲ್ಲಿ ಎನ್.ಎಸ್.ಎಸ್ ಘಟಕದ ಸಹಸಂಘಟಕರಾದ ಪ್ರತಿಭಾ ಎಸ್ ,ಸುಮಾ,ಶಿವಪ್ರಸಾದ್,ಅನೂಪ್, ಅಭ್ಯುದಯ ಯುವಕ ಮಂಡಲದ ಪದಾಧಿಕಾರಿಗಳಾದ ಸುಬ್ಬಣ್ಣ ದಾಸ್,ದೀಕ್ಷಿತ್ ಜೈನ್,ರವಿ ಎ.ಕೆ,ಹರೀಶ್ ರೈ,ಧರ್ಮಪಾಲ,ಮಹಮ್ಮದ್ ಶರೀಫ್ ಕುಂಡಡ್ಕ, ಪ್ರವೀಣ್ ಕುಮಾರ್,ವಿನೋದ್ ,ಪ್ರಮೋದ್ ಕೆ,ಚರಣ್ ರೈ ,ಜಗದೀಶ್,ಅಭ್ಯುದಯ ಮಹಿಳಾ ಮಂಡಲದ ಸುಶೀಲಾ ಸಿ.ವಿ ರೈ, ವಿನೋದಾ ರೈ,ಶೀಲಾವತಿ,ಗುಲಾಬಿ ಸಿ.ಕೆ,ನಳಿನಿ ರೈ,ಚಿತ್ರಾ ವಸಂತ್ ಮೊದಲಾದವರು ಉಪಸ್ಥಿತರಿದ್ದರು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಲವು ರಾಜ್ಯಗಳಲ್ಲಿ ಮುಂದಿನ 2 ದಿನ ಭಾರೀ ಮಳೆ ಸಾಧ್ಯತೆ – ಆರೆಂಜ್ ಅಲರ್ಟ್
October 17, 2026
7:30 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ವಿಜಯಪುರದಲ್ಲಿ ಹಸಿರಿನ ಕ್ರಾಂತಿ
October 17, 2026
7:23 AM
by: ದ ರೂರಲ್ ಮಿರರ್.ಕಾಂ
ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ
October 16, 2026
5:14 PM
by: ವಿಶೇಷ ಪ್ರತಿನಿಧಿ
ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ
October 16, 2026
3:42 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror