Advertisement
ಸುದ್ದಿಗಳು

“ಕಾವೇರಿ ಕೂಗು” ಅಭಿಯಾನಕ್ಕೆ ಚಾಲನೆ ನೀಡಿದ ಸದ್ಗುರು ಜಗ್ಗಿ ವಾಸುದೇವ್

Share

ಮಡಿಕೇರಿ :ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಮತ್ತು ಅಂತರ್ಜಲವನ್ನು ಸಂರಕ್ಷಿಸಿಕೊಳ್ಳುವ ಶಕ್ತಿಯ ಕೊರತೆ ಭೂಮಿಯಲ್ಲಿ ಕಂಡು ಬರುತ್ತಿದೆ. ಇದೇ ಕಾರಣಕ್ಕೆ ಪ್ರವಾಹ ಅಥವಾ ಬರಗಾಲ ಸೃಷ್ಟಿಯಾಗಿ ಮಾನವ ಕುಲ ಕಷ್ಟ, ನಷ್ಟಗಳನ್ನು ಅನುಭವಿಸುತ್ತಿದೆ. ಗಿಡ ಮರಗಳನ್ನು ನೆಡುವ ಮೂಲಕ ಇಂತಹ ಅನಾಹುತಗಳನ್ನು ಶಾಶ್ವತವಾಗಿ ತಪ್ಪಿಸಬಹುದಾಗಿದೆ ಎಂದು ಈಶ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅಭಿಪ್ರಾಯಪಟ್ಟಿದ್ದಾರೆ.

Advertisement
Advertisement

ಅರಣ್ಯ ಕೃಷಿಗೆ ಸ್ಫೂರ್ತಿ ನೀಡುವ “ಕಾವೇರಿ ಕೂಗು” ಅಭಿಯಾನಕ್ಕೆ ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಸದ್ಗುರು ಮಾತನಾಡಿದರು.
“ಕಾವೇರಿ ಕೂಗು” ಅಭಿಯಾನ ತಲಕಾವೇರಿಯಿಂದ ತಮಿಳುನಾಡಿನ ಪೂಂಪ್‍ಹಾರ್ ವರೆಗೆ ಬೈಕ್ ರ್ಯಾಲಿ ಮೂಲಕ ಸಾಗಲಿದ್ದು, ಸಾರ್ವಜನಿಕರಿಗೆ ಹಾಗೂ ರೈತರಿಗೆ ಗಿಡ, ಮರ ಬೆಳೆಸುವ ಅರಿವು ಮೂಡಿಸಲಾಗುತ್ತಿದೆ ಎಂದು ಸದ್ಗುರು ಹೇಳಿದರು.

Advertisement

 

Advertisement

ಈ ಸಂದರ್ಭ ಹಾಜರಿದ್ದ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕಾವೇರಿ ನದಿ ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಸದ್ಗುರುಗಳು ಇದಕ್ಕೆ ಪೂರಕವಾಗಿ ಹಮ್ಮಿಕೊಂಡಿರುವ ಅಭಿಯಾನಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಶಾಸಕ ಕೆ.ಜಿ.ಬೋಪಯ್ಯ ಅವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ಬಗ್ಗೆ ನೈಜ ಕಾಳಜಿ ಹೊಂದಿರುವ ಜನರಿದ್ದಾರೆ. ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಜನರ ಸಂಕಷ್ಟಗಳಿಗೆ ಎಲ್ಲರೂ ಸಹಕರಿಸುವ ಅಗತ್ಯವಿದೆ ಎಂದರು.

Advertisement

ಚಲನಚಿತ್ರ ನಟರಾದ ರಕ್ಷಿತ್ ಶೆಟ್ಟಿ, ದಿಗಂತ್, ಬಿಗ್‍ಬಾಸ್ ವಿಜೇತ ಶಶಿ ಬೈಕ್ ಜಾಥಾಗೆ ಸಾಥ್ ನೀಡುವುದರೊಂದಿಗೆ ಒಟ್ಟು 25 ಜನರ ತಂಡ ತಲಕಾವೇರಿಯಿಂದ ಭಾಗಮಂಡಲ ಮೂಲಕ ಮಡಿಕೇರಿ ಕಡೆಗೆ ತೆರಳಿತು. ಸದ್ಗುರುಗಳು ತಲಕಾವೇರಿಯಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ನಂತರ ತಮ್ಮ ತಂಡದೊಂದಿಗೆ ಬೈಕ್ ಜಾಥಾದಲ್ಲಿ ತೆರಳಿದರು. ಕ್ಷೇತ್ರದ ಅರ್ಚಕರಾದ ನಾರಾಯಣ ಆಚಾರ್, ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ, ಸ್ಥಳೀಯ ಪ್ರಮುಖರು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಸದ್ಗುರು ಜಗ್ಗಿ ವಾಸುದೇವ್ ಮತ್ತು ತಂಡವನ್ನು ಬರಮಾಡಿಕೊಂಡು ಅಭಿಯಾನಕ್ಕೆ ಶುಭ ಹಾರೈಸಿದರು.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಕ್ಷಯ ತೃತೀಯ : ಅನಂತ ಶುಭವನ್ನು ತರುವ ಹಬ್ಬ : ಚಿನ್ನ ಖರೀದಿಸುವುದೊಂದೆ ಅಕ್ಷಯ ತೃತೀಯ ಅಲ್ಲ

ಅಕ್ಷಯ ತೃತೀಯ(Akshaya Trutiya)... ಅಕ್ಷಯ ತೃತೀಯ ತಾರೀಕು 10/05/2024, ಶುಕ್ರವಾರ, ಈ ದಿನದಂದು…

2 hours ago

ಪಾರಂಪರಿಕ ಬೀಜೋತ್ಸವ : ದಾವಣಗೆರೆಯಲ್ಲಿ ನಡೆಯಲಿದೆ ಸಂಭ್ರಮದ ಬೀಜ ವೈಭವ

ಬೀಜ(Seed) ಎಂಬುದು ಬರೀ ಬಿತ್ತನೆ ವಸ್ತುವಲ್ಲ. ಅದು ಕೃಷಿಯ(Agriculture) ಜೀವನಾಡಿ. ಸಾವಿರಾರು ವರ್ಷಗಳಿಂದ…

2 hours ago

ಬ್ರೆಜಿಲ್‌ನಲ್ಲಿ ಹೆಚ್ಚಿದ ಪ್ರವಾಹ ತೀವ್ರತೆ : ಸಾವಿನ ಸಂಖ್ಯೆ 78ಕ್ಕೆ ಏರಿಕೆ, 105 ಮಂದಿ ನಾಪತ್ತೆ : 1,15,000ಕ್ಕೂ ಹೆಚ್ಚು ಜನರ ಸ್ಥಳಾಂತರ

ಎಲ್‌ ನಿನೋ ಪ್ರಭಾವ ಹಿನ್ನೆಲೆ ದೇಶದಾದ್ಯಂತ ಬರಗಾಲದ ಛಾಯೆ ಆವರಿಸಿತ್ತು. ಕಳೆದ ೧೫…

2 hours ago

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ : ಬೃರೋಬ್ಬರಿ 2 ವರ್ಷಗಳ ಬಳಿಕ ಪ್ರಮುಖ ಆರೋಪಿ ಬಂಧನ

ಒಬ್ಬ ಅಮಯಾಕ ಯುವಕನ ಹತ್ಯೆ(Murder) ಮಾಡಿದ ಆರೋಪಿಯನ್ನು ಕಂಡು ಹಿಡಿಯಲು ಸರ್ಕಾರ ಬರೋಬ್ಬರಿ…

3 hours ago

Karnataka Weather | 10-05-2024 | ಮಳೆ ಮುನ್ಸೂಚನೆ ಇಂದೂ ಇದೆ | ಆದರೆ….?

ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇರುವುದರಿಂದ ಇಂತಹಲ್ಲೆ ಮಳೆಯಾಗುತ್ತದೆ ಅಂತ ಹೇಳಲು…

5 hours ago