ಕಾಷ್ಠದಲ್ಲಿ ಸುಂದರವಾಗಿ ಅರಳಿದೆ ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದ ನೂತನ ಬ್ರಹ್ಮರಥ…

September 1, 2019
11:00 AM

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ಬ್ರಹ್ಮರಥ ಸಮರ್ಪಣೆಯಾಗಲಿದೆ.ನೂತನ ಬ್ರಹ್ಮರಥದ ಕೆಲಸ ಕಾರ್ಯಗಳು ಬಹುತೇಕ ಪೂರ್ತಿಗೊಂಡಿದೆ. 2000 ಸಿ ಎಪ್‍ ಟಿ  ವಿವಿಧ ಜಾತಿಯ ಮರ ಬಳಸಿಕೊಳ್ಳಲಾಗಿದೆ .ಕೇವಲ 7 ತಿಂಗಳಲ್ಲಿ ಸುಂದರವಾದ ಕೆತ್ತನೆಗಳೊಂದಿಗೆ ನೂತನ ಬ್ರಹ್ಮರಥ ಕೋಟೇಶ್ವರದಲ್ಲಿ ನಿರ್ಮಿಸಲಾಗಿದೆ.  ನವರಾತ್ರಿ ಆರಂಭವಾಗುವ ಹೊತ್ತಿಗೆ ಸೆ.29 ರಂದು ರಥವನ್ನು ಬಿಟ್ಟು ಕೊಡಲಾಗುತ್ತಿದೆ.ಬಳಿಕ ಸೆ.30 ರಂದು ಬೆಳಗ್ಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ರಥ ಟ್ರಾಲಿಯ ಮೂಲಕ ಬರಲಿದೆ.

Advertisement
Advertisement
Advertisement

Advertisement

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ  ಸುಮಾರು 400 ವರ್ಷಗಳ ಪುರಾತನವಾದ ರಥ ಈಗ ಇದೆ. ಈ ಅಳತೆಗೆ, ಶಾಸ್ತ್ರಕ್ಕೆ ಯಾವುದೇ ಧಕ್ಕೆಯಾಗದಂತೆ ಅದೇ ಮಾದರಿಯಲ್ಲಿ ಈಗ ಬ್ರಹ್ಮರಥ ನಿರ್ಮಾಣ ಮಾಡಲಾಗಿದೆ.ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಮಾರ್ಗದರ್ಶನದಲ್ಲಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯಲ್ಲಿ ಬ್ರಹ್ಮರಥ ನಿರ್ಮಾಣಗೊಳ್ಳುತ್ತಿದ್ದು ಉದ್ಯಮಿ ಮುತ್ತಪ್ಪ ರೈ ಮತ್ತು ಅಜಿತ್ ರೈ ಕಡಬ ದಾನ ರೂಪದಲ್ಲಿ ಸುಮಾರು 2 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿಕೊಡುತ್ತಿದ್ದಾರೆ.

ನೂತನ ರಥ ಹೀಗಿದೆ…

Advertisement

ನೂತನ ಬ್ರಹ್ಮರಥವು ಹಳೆಯ ಬ್ರಹ್ಮರಥದ ಮಾದರಿಯಲ್ಲೇ ನಿರ್ಮಾಣ ಮಾಡಲಾಗುತ್ತಿದ್ದು  ರಥ ನೆಲದಿಂದ ಕಲಶದ ತುದಿವರೆಗೆ 63 ಅಡಿ ಎತ್ತರವಿರುತ್ತದೆ. ನೆಲದಿಂದ ರಥದ ಜಿಡ್ಡೆಯ ತನಕ 17 ಅಡಿ ಎತ್ತರವಿದ್ದರೆ  ಚಕ್ರ 8 ಅಡಿ ಎತ್ರರವಿದೆ. ಅಂದಾಜು 22 ಟನ್ ತೂಕ ರಥ ಹೊಂದಿದೆ. 16 ಅಂತಸ್ತುಗಳನ್ನು ಹೊಂದಿದೆ. ರಥಕ್ಕೆ ಬೇಕಾದ ಮರಗಳನ್ನು ಉತ್ತರ ಭಾರತದಿಂದ ಸಾಗುವಾನಿ,  ಗುಜರಾತಿನಿಂದ ಭೋಗಿಮರ ಹಾಗೂ ಸುಬ್ರಹ್ಮಣ್ಯ ಪ್ರಾಂತ್ಯದಿಂದ ಕಿರಾಲ್ ಬೋಗಿ  ಮರ ತರಲಾಗಿದೆ.

ರಥಲ್ಲಿ ವಿವಿಧ ಕೆತ್ತನೆಗಳು ಇವೆ. ಪ್ರಮುಖವಾಗಿ ಸುಬ್ರಹ್ಮಣ್ಯ ಸ್ವಾಮಿಯ ಲೀಲಾವಳಿಗಳು, ಅಷ್ಟ ದಿಗ್ಫಾಲಕರು, ಮಹಾಭಾರತ, ಪಾರ್ವತಿ ಕಲ್ಯಾಣ, ದಕ್ಷಯಜ್ಞ, ಪುತ್ರಕಾಮೇಷ್ಠಿಯಾಗ , ಚತುರ್ವಂಶಿ ವಿಗ್ರಹ, ಶಿವನ ವಿವಿಧ ಲೀಲಾವಳಿಗಳು ಹಾಗೂ ಪ್ರಪಂಚದ ಸಕಲ ಜೀವರಾಧಿಗಳಿರುವ  ಚಿತ್ರಗಳ ಕೆತ್ತನೆಯಿಂದ ಕೂಡಿದೆ. ರಥದಲ್ಲಿನ ಕಲೆಗಾಗಿ ಸಾಗುವಾನಿ ಮರ ಬಳಸಿಕೊಳ್ಳಲಾಗಿದೆ. ಚಕ್ರ ಮತ್ತು ಅಚ್ಚಿಗೆ ಬೋಗಿಮರ ಉಪಯೋಗಿಸಲಾಗಿದೆ.

Advertisement

 ಸೆ.29 ರಂದು  ರಥ ದಾನಿಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರ ಉಪಸ್ಥಿತಿಯಲ್ಲಿ ರಥ ಹಸ್ತಾಂತರಿಸಲಾಗುತ್ತಿದೆ.ಬಳಿಕ  ಕೋಟೇಶ್ವರದ ವಿಶ್ವಕರ್ಮ ಕರಕುಶಲ ಶಿಲ್ಪಾಕಲಾ ಶಾಲೆಯಿಂದ ರಥ ಕುಕ್ಕೆಗೆ ಹೊರಡಲಿದೆ.ಮಂಗಳೂರು ಪಡೀಲ್ ಉಪ್ಪಿನಂಗಡಿ-ಕಡಬ ಮಾರ್ಗವಾಗಿ ಕುಕ್ಕೆಸುಬ್ರಹ್ಮಣ್ಯಕ್ಕೆ  ಅ.3 ರಂದು ತಲುಪಲಿದೆ ಎಂದು ಕುಕ್ಕೆ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

Karnataka Weather | 28-03-2024 | ಕೆಲವು ಕಡೆ ತುಂತುರು ಮಳೆ | ಮಾ.31 ನಂತರ ಕೆಲವು ಕಡೆ ಸಾಮಾನ್ಯ ಮಳೆ ನಿರೀಕ್ಷೆ |
March 28, 2024
1:19 PM
by: ಸಾಯಿಶೇಖರ್ ಕರಿಕಳ
ಬರ ಹಿನ್ನೆಲೆ | ಮೈಸೂರು ಜಿಲ್ಲೆಯಲ್ಲಿ ಪಂಪ್‌ಸೆಟ್ ಬಳಸಿ ಕೃಷಿಗೆ ನದಿ ನೀರು ಬಳಕೆ ನಿಷೇಧ |
March 27, 2024
10:01 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಆಮದು ಪ್ರಕರಣಗಳಲ್ಲಿ ದೂರು ದಾಖಲಾಗುತ್ತಿಲ್ಲವೇಕೆ…? | ಆರೋಪಿಗಳು ಪತ್ತೆಯಾಗುತ್ತಿಲ್ಲವೇಕೆ…? |
March 27, 2024
9:32 PM
by: ದ ರೂರಲ್ ಮಿರರ್.ಕಾಂ
Karnataka Weather | 27-03-2024 | ರಾಜ್ಯದಲ್ಲಿ ಒಣ ಹವೆ | ಕೆಲವು ಕಡೆ ತುಂತುರು ಮಳೆ ಸಾಧ್ಯತೆ |
March 27, 2024
12:49 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror