ಸುಬ್ರಹ್ಮಣ್ಯ: ಭಕ್ತರ ದೇಣಿಗೆ ಹಾಗೂ ದೇಗುಲದ ಆದಾಯ ಬಳಸಿ ಕುಕ್ಕೆಸುಬ್ರಹ್ಮಣ್ಯ ದೇವರಿಗೆ ಸುವರ್ಣ ರಥ ನಿರ್ಮಿಸಲಾಗುತ್ತಿದ್ದು ಅಕ್ಟೋಬರ್ ಒಳಗೆ ರಥ ನಿರ್ಮಾಣವಾಗಲಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದರು.
ಸುಬ್ರಹ್ಮಣ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2006ರಲ್ಲಿ ಹಿಂದಿನ ಆಡಳಿತ ಸಮಿತಿ ಭಕ್ತರ ಆಶಯದಂತೆ ಚಿನ್ನದ ರಥ ನಿರ್ಮಾಣ ಮಾಡುವ ಕುರಿತು ನಿರ್ಧರಿಸಿತ್ತು. ಇದೀಗ ಸುಮಾರು ರೂ.77 ಕೋಟಿ ವೆಚ್ಚದಲ್ಲಿ ಸರಕಾರದಿಂದ ಅನುಮೋದನೆ ಪಡೆದು ಚಿನ್ನದ ರಥ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದರು. ಶ್ರೀ ದೇವಳದ ನಿಧಿ ಮತ್ತು ಭಕ್ತರಿಂದ ಹಾಗೂ ದಾನಿಗಳಿಂದ ದೇಣಿಗೆಯನ್ನು ಕಾಣಿಕೆ ರೂಪದಲ್ಲಿ ಸಂಗ್ರಹಿಸಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ರಥವನ್ನು ಶೀಘ್ರ ನಿರ್ಮಿಸಲಾಗುವುದು.
ಸೋಮವಾರ ಆಡಳಿತ ಮಂಡಳಿ ಸಮಿತಿ ಸಭೆಯಲ್ಲಿ ರಥ ನಿರ್ಮಾಣದ ಕುರಿತು ಚರ್ಚೆ ನಡೆದಿದೆ. ಅಕ್ಟೋಬರ್ 15 ರ ಒಳಗೆ ರಥ ನಿರ್ಮಾಣ ಕಾರ್ಯ ಪೂರ್ತಿಗೊಳಿಸಲು ನಿರ್ಧರಿಸಿದ್ದೇವೆ. ರಥ ನಿರ್ಮಾಣ ಸಮಿತಿ ರಚಿಸಿ ಪ್ರತ್ಯೇಕ ಖಾತೆಯನ್ನು ತೆರೆಯಲಾಗುತ್ತದೆ. ಭಕ್ತರಿಂದ ಇಚ್ಚಾನುಸಾರ ಗ್ರಾಂ ಹಾಗೂ ಕೆ.ಜಿ ರೂಪದಲ್ಲಿ ಚಿನ್ನ ಹಾಗೂ ನಗದು ದೇಣಿಗೆಗಳನ್ನು ಸ್ವೀಕರಿಸಿ ರಥ ನಿರ್ಮಿಸಲಾಗುತ್ತದೆ. ಆರಂಭದಲ್ಲಿ 13 ಕೆ.ಜಿ ದೇಗುಲದ ಚಿನ್ನ ಬಳಸಿಕೊಳ್ಳಲಾಗುವುದು ರಥವು 14 ಅಡಿ 8 ಇಂಚು ಎತ್ತರವಿರಲಿದೆ ಎಂದರು.
ದೇಗುಲದ ಹೊರಾಂಗಣ ಸುತ್ತುಪೌಳಿ ನಿರ್ಮಾಣಕ್ಕೆ 14 ಕೋಟಿ ರೂ ವೆಚ್ಚದ ಅಂದಾಜು ಪಟ್ಟಿ ಸಿದ್ಧ ಪಡಿಸಿ ಸರಕಾರದ ಹಣಕಾಸು ಅನುಮೋದನೆಗೆ ಕಳುಹಿಸಿಕೊಟ್ಟಿದ್ದೇವೆ, ಶೀಘ್ರ ಅನುಮೋದನೆ ದೊರಕುವ ವಿಶ್ವಾಸವಿದೆ. 68 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಪ್ರಗತಿಯಲ್ಲಿದೆ. ಆದಿಸುಬ್ರಹ್ಮಣ್ಯದಲ್ಲಿ 182 ಕೊಠಡಿಗಳ ನೂತನ ವಸತಿಗ್ರಹ ಶೀಘ್ರ ಲೋಕಾರ್ಪಣೆಗೊಳ್ಳಲಿದೆ ಎಂದರು. ನಗರದಲ್ಲಿ ಚ್ವಚ್ಚತೆಗೆ ಆದ್ಯತೆ ನೀಡಿದ್ದೇವೆ. ಕುಮಾರಧಾರೆ ನದಿಯಲ್ಲಿ ಭಕ್ತರಿಗೆ ಪುಣ್ಯ ಸ್ನಾನಕ್ಕೆ ತೆರಳಲು ಏಕ ಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟು ಉಳಿದೆಡೆ ಬೇಲಿ ನಿರ್ಮಿಸಲಾಗುವುದು ಎಲ್ಲೆಂದರಲ್ಲಿ ನದಿಗೆ ತ್ಯಾಜ್ಯ ಸುರಿಯದಂತೆ ಕಡಿವಾಣ ಹಾಕಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯನಿರ್ವಾಹಣಾಧಿಕಾರಿ ರವೀಂದ್ರ ಎಚ್ ಎಂ, ಸಮಿತಿ ಸದಸ್ಯರಾದ ಬಾಲಕೃಷ್ಣ ಬಳ್ಳೇರಿ, ಮಹೇಶ್‍ಕುಮಾರ್ ಕರಿಕ್ಕಳ, ರಾಜೀವಿ ರೈ ಆರ್, ದಮಯಂತಿ ಕೂಜುಗೋಡು, ಮಾಧವ ಡಿ ಉಪಸ್ಥಿತರಿದ್ದರು.
ಎಂತ ಮಾರ್ರೇ.... ಈ ಮನುಷ್ಯರಿಗೆ ಒಂದು ಸೊಲ್ಪ ಹೊತ್ತು ಕರೆಂಟ್ ಹೊದ್ರೆ ಕೂಡ್ಲೆ…
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುಳ್ಯ, ಪುತ್ತೂರು,ಚೆಂಬು ಪ್ರದೇಶದ ಕೆಲವು ಕಡೆ 100…
ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟಮಾಡುವವರು ಮತ್ತು ಕೃತಕ ಅಭಾವ ಸೃಷ್ಟಿಸುವವರ…
ರೈತರು ಉತ್ತಮ ಇಳುವರಿ ಪಡೆಯಲು ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಲು…
‘ಏಕಲವ್ಯ’ – ಈ ಪದವು ಸಾಧನೆಯ ಐಕಾನ್. ಪರ್ಯಾಯ ಪದ. ಸಾಧನೆಗೆ ಜಾತಿ,…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490