ಸುಬ್ರಹ್ಮಣ್ಯ :ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ದಾನಿಗಳ ನೆರವಿನಿಂದ ನಿರ್ಮಾಣವಾಗುತ್ತಿರುವ ನೂತನ ಬ್ರಹ್ಮರಥವನ್ನು ಮುಂದಿನ ತಿಂಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ತರುವ ನಿರ್ಧಾರ ಹಾಗೂ ಮುಂದಿನ ತಿಂಗಳಲ್ಲಿ ಆದಿ ಸುಬ್ರಹ್ಮಣ್ಯದಲ್ಲಿ ನೂತನವಾಗಿ ನಿರ್ಮಾಣವಾದ 182 ಕೊಠಡಿಗಳಿರುವ ನೂತನ ವಸತಿಗೃಹವನ್ನು ಲೋಕಾರ್ಪಣೆಗೊಳಿಸಲು ನಿರ್ಧರಿಸಲಾಗಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಚೇರಿಯ ಎರಡನೆ ಮಹಡಿಯಲ್ಲಿ ಮಂಗಳವಾರ ನಡೆದ ಆಡಳಿತ ಮಂಡಳಿ ಸಭೆ ಬಳಿಕ ಅವರು ಸಭೆಯಲ್ಲಿ ಕೈಗೊಂಡ ಕೆಲ ನಿರ್ಧಾರಗಳ ಬಗ್ಗೆ ತಿಳಿಸಿದರು.ಕುಂದಾಪುರ ಕೋಟೇಶ್ವರದಲ್ಲಿ ನೂತನ ಬ್ರಹ್ಮರಥ ನಿರ್ಮಾಣವಾಗುತ್ತಿದ್ದು ರಥದ ಕೆಲಸ ಬಹುತೇಕ ಅಂತಿಮಗೊಂಡಿದೆ. ರಥವನ್ನು ಕುಕ್ಕೆಗೆ ಮುಂದಿನ ತಿಂಗಳು ತರುವ ಕುರಿತು ನಿರ್ಧರಿಸಲಾಗಿದೆ. ಆ.31 ರಂದು ದೇವಸ್ಥಾನದ ಆಡಳಿತ ಸಮಿತಿ ನೇತೃತ್ವದಲ್ಲಿ ನಿಯೋಗ ಕೋಟೇಶ್ವರಕ್ಕೆ ತೆರಳಲಿದೆ. ರಥ ತರುವ ರಸ್ತೆ- ಹೆದ್ದಾರಿ ಅನುಮತಿ ಇತ್ಯಾದಿಗಳ ಕುರಿತು ರಥ ಶಿಲ್ಪಿ, ರಥದ ದಾನಿಗಳ ಜತೆ ಅಲ್ಲಿ ಚರ್ಚೆ ನಡೆಸಿ ಬಳಿಕ ದಿನ ನಿಗದಿಪಡಿಸಿ ಶುಭಮಹೂರ್ತದಲ್ಲಿ ತರುವ ಕೆಲಸ ನಡೆಯುತ್ತದೆ ಎಂದರು.
ದೇವಸ್ಥಾನದ ಹೊರಾಂಗಣ ಸುತ್ತುಪೌಳಿ ಮರು ದುರಸ್ತಿ ಕಾರ್ಯವು ಟೆಂಡರು ಹಂತದಲ್ಲಿದೆ. ಅದು ಪ್ರಕ್ರಿಯೆ ಪೂರ್ಣಗೊಂಡಲ್ಲಿ ಅದರ ಕಾರ್ಯವನ್ನು ನಡೆಸುವ ಬಗ್ಗೆಯೂ ಚರ್ಚೆ ನಡೆದಿದೆ. ಕುಮಾರಸ್ವಾಮಿ ಅವರ ಮಹತ್ವಕಾಂಕ್ಷೆಯ ಚಿಣ್ಣದ ರಥ ನಿರ್ಮಾಣಕ್ಕೆ ಸಂಬಂದಿಸಿ ಶೀಘ್ರ ಅನುಮತಿ ದೊರೆತಲ್ಲಿ ನಿರ್ಮಾಣ ಕೆಲಸ ಆರಂಭಿಸಲಾಗುತ್ತದೆ. ರಥದ ಪೌಂಡೆಶನ್ ಇತ್ಯಾದಿ ಕಾರ್ಯಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದರು.
ಆದಿ ಸುಬ್ರಹ್ಮಣ್ಯದಲ್ಲಿ ನೂತನವಾಗಿ 182 ಕೊಠಡಿಯ ವಸತಿಗೃಹ ನಿರ್ಮಾಣವಾಗಿ ಉದ್ಘಾಟನೆ ಬಾಕಿ ಉಳಿದಿದ್ದು ಅದನ್ನು ಅಕ್ಟೋಬರ್ ಮೊದಲ ವಾರದಲ್ಲಿ ಲೋಕಾರ್ಪಣೆಗೊಳಿಸಲು ನಿರ್ಧರಿಸಲಾಗಿದೆ. ವಸತಿಗೃಹಕ್ಕೆ ಪೀಠೋಪಕರಣ ಅಳವಡಿಸಲು ಗುತ್ತಿಗೆ ನೀಡಲಾಗಿದ್ದು ಜೋಡಿಸುವ ಕೆಲಸ ನಡೆಯುತ್ತಿದೆ. ತಿಂಗಳೊಳಗೆ ಪೂರ್ಣಗೊಳಿಸಿ ನೀಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ದೇಗುಲಕ್ಕೆ ಆಗಮಿಸುವ ಭಕ್ತರ ಹಿತ ಕಾಯುವ ಸಲುವಾಗಿ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದ್ದು ಅವುಗಳಲ್ಲಿ ಹೆಚ್ಚಿನ ಕಾಮಗಾರಿಗಳು ಪೂರ್ಣಗೊಂಡಿವೆ. ಬಾಕಿ ಉಳಿದ ಕಾಮಗಾರಿಗಳಿಗೆ ವೇಗ ನೀಡುವ ಬಗ್ಗೆಯೂ ಚರ್ಚೆ ನಡೆದಿರುವುದಾಗಿ ಅವರು ತಿಳಿಸಿದರು.
ದೇವಸ್ಥಾನದ ಕಾರ್ಯನಿರ್ವಾಹಣಾ„ಕಾರಿ ರವೀಂದ್ರ ಎಂ.ಎಚ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಬಾಲಕೃಷ್ಣ ಬಳ್ಳೇರಿ, ಕೃಷ್ಣಮೂರ್ತಿ ಭಟ್, ಕೇನ್ಯ ರವೀಂದ್ರನಾಥ ಶೆಟ್ಟಿ, ಮಹೇಶ್ ಕುಮಾರ್ ಕರಿಕ್ಕಳ, ರಾಜೀವಿ ರೈ ಆರ್, ದಮಯಂತಿ ಕೂಜುಗೋಡು, ಮಾಧವ. ಡಿ ಉಪಸ್ಥಿತರಿದ್ದರು.
ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…
ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?