ಸುಬ್ರಹ್ಮಣ್ಯ: ಕೋಟೇಶ್ವರದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕಾಗಿ ಸಿದ್ಧಗೊಂಡ ಬ್ರಹ್ಮರಥವು ಸೋಮವಾರ ಬೆಳಿಗ್ಗೆ ಭವ್ಯ ಮೆರವಣಿಗೆ ಮೂಲಕ ಸುಬ್ರಹ್ಮಣ್ಯದ ಕಡೆಗೆ ಹೊರಟಿದೆ.
ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಹಾಗೂ ಉದ್ಯಮಿ ಅಜಿತ್ ಶೆಟ್ಟಿ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಾಣಿಕೆ ರೂಪದಲ್ಲಿ ಸಮರ್ಪಿಸಲಿರುವ ಬ್ರಹ್ಮ ರಥಕ್ಕೆ ಭಾನುವಾರ ಸಂಜೆ ಪೂಜೆ , ಧಾರ್ಮಿಕ ಕಾರ್ಯಗಳ ಬಳಿಕ ಕ್ರೇನ್ ಮೂಲಕ ಟ್ರಾಲಿಯಲ್ಲಿ ಇರಿಸಿ ಸೋಮವಾರ ಬೆಳಗ್ಗೆ ವಾಹನ ಪೂಜೆ ಬಳಿಕ ಮೆರವಣಿಗೆ ಮೂಲಕ ಸುಬ್ರಹ್ಮಣ್ಯದ ಕಡೆಗೆ ಹೊರಟಿದೆ. ಈ ಸಂದರ್ಭ ಮುಜರಾಯಿ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೆರವಣಿಗೆಗೆ ಚಾಲನೆ ನೀಡಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel