ಸುಳ್ಯ/ಬಂಟ್ವಾಳ: ಕೋಟೇಶ್ವರದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸೋಮವಾರ ಬೆಳಗ್ಗೆ ಹೊರಟ ನೂತನ ಬ್ರಹ್ಮರಥವು ಇದೀಗ ಬಿಸಿ ರೋಡ್ ದಾಟಿ ಮುಂದೆ ಬರುತ್ತಿದೆ. ಎಲ್ಲೆಡೆ ನೂತನ ಬ್ರಹ್ಮರಥಕ್ಕೆ ಅದ್ದೂರಿ ಸ್ವಾಗತ ನೀಡಲಾಗುತ್ತಿದೆ. ಭಕ್ತಾದಿಗಳು ಮೆರವಣಿಗೆ ಮೂಲಕ ನೂತನ ರಥಕ್ಕೆ ಸ್ವಾಗತ ಕೋರಿ ಸ್ವಾಗತಿಸುತ್ತಿದ್ದಾರೆ. ನೂತನ ರಥವು ಉಪ್ಪಿನಂಗಡಿ – ಕಡಬ ಮಾರ್ಗವಾಗಿ ಆಗಮಿಸಿ ಅ.2 ರಂದು ಕುಕ್ಕೆ ಸುಬ್ರಹ್ಮಣ್ಯ ತಲುಪಲಿದೆ.
ನೂತನ ಬ್ರಹ್ಮರಥ ಕುಕ್ಕೆ ಸುಬ್ರಹ್ಮಣ್ಯ ಪ್ರವೇಶದ ವೇಳೆ ಅದ್ದೂರಿ ಸ್ವಾಗತ ನೀಡಲು ಸಿದ್ಧತೆ ನಡೆಯುತ್ತಿದೆ. ಅದ್ದೂರಿಯಿಂದ ಸ್ವಾಗತಿಸಲು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಬ್ರಹ್ಮರಥದ ಗೋಪುರ ಸ್ವಾಗತ ಕಂಬ, ಟ್ಯಾಬ್ಲೋ, ತಳಿರು ತೋರಣ, ಹೂ, ಗಳಿಂದ ರಸ್ತೆ ಶೃಂಗಾರ ಮಾಡಿ ವಿಜೃಂಭಣೆಯಿಂದ ಸ್ವಾಗತಿಸಲು ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಕುಮಾರಧಾರಾ ನದಿ ಬಳಿಯಿಂದ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಇದರ ಜೊತೆಗೆ ಕುಮಾರಧಾರಾ ಬಳಿಯಿಂದ ರಸ್ತೆ ದುರಸ್ತಿ ಕಾರ್ಯ, ತೇಪೆ ಕಾರ್ಯ ನಡೆದಿದೆ.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…