ಕುಗ್ರಾಮ ಎನಿಸಿಕೊಂಡಿದ್ದ ಮಂಡೆಕೋಲು ಈಗ “ಆದರ್ಶ” ಗ್ರಾಮದತ್ತ ಹೆಜ್ಜೆ….

September 22, 2019
3:17 PM

ಸುಳ್ಯ: ಕುಗ್ರಾಮ ಎಸಿಸಿಕೊಂಡಿದ್ದ ಮಂಡೆಕೋಲು ಗ್ರಾಮ ಈಗ ಮಾದರಿ ಗ್ರಾಮ ಎನಿಸಿಕೊಳ್ಳುತ್ತಿದೆ. ಇಡೀ ರಾಜ್ಯಕ್ಕೆ ಮಾದರಿ ಎನಿಸಿಕೊಳ್ಳುತ್ತಿದೆ. ವಿಶೇಷವಾಗಿ ಗಮನಸೆಳೆಯುತ್ತಿದೆ.   ಅಪರಾಧ ಮುಕ್ತ ಗ್ರಾಮ ಜನಾಂದೋಲನ ಸಮಿತಿ, ಗ್ರಾಮ ಪಂಚಾಯತ್, ಗ್ರಾಮ ವಿಕಾಸ ಸಮಿತಿಯ ನೇತೃತ್ವದಲ್ಲಿ ಒಂದು ವರ್ಷಗಳ ಕಾಲ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸುವುದು ಹಾಗೂ ಗಾಂಧೀಜಯಂತಿಯಂದು ಆದರ್ಶ ಗ್ರಾಮದ ಸಂಕಲ್ಪದ ವಿಶೇಷ ನಿರ್ಧಾರ ಕೈಗೊಳ್ಳಲಾಗುತ್ತಿದೆ.

Advertisement

ತಮ್ಮ ಗ್ರಾಮವನ್ನು ಅಪರಾಧಗಳಿಂದ ಮುಕ್ತ ಮಾಡಿ ನೆಮ್ಮದಿಯ ಬದುಕನ್ನು ಕಂಡುಕೊಳ್ಳಬೇಕು ಎಂಬ ಕಲ್ಪನೆಯೊಂದಿಗೆ ನಾಡಿಗೆ ನಾಡೇ ಒಟ್ಟಾಗಿ ಅಪರಾಧ ಮುಕ್ತ ಗ್ರಾಮ ಆಂದೋಲನ ನಡೆಸಿದ ಗಡಿಗ್ರಾಮ ಮಂಡೆಕೋಲಿಗೆ ಈಗ ಆದರ್ಶ ಗ್ರಾಮವಾಗುವ ಕನಸು ಹೊತ್ತಿದೆ. ಕೇರಳ ರಾಜ್ಯದೊಂದಿಗೆ ಸರಹದ್ದನ್ನು ಹೊಂದಿರುವ ಸಪ್ತ ಭಾಷೆಗಳ, ಸಂಸ್ಕೃತಿಯ ನೆಲೆ ಬೀಡಾದ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ಹುಟ್ಟಿಕೊಂಡ ಅಪರಾಧ ಮುಕ್ತ ಗ್ರಾಮ ಎಂಬ ಕಲ್ಪನೆ ಇಡೀ ರಾಜ್ಯದ ಗಮನ ಸೆಳೆದಿತ್ತು. ಅಪರಾಧ ಮುಕ್ತ ಆಂದೋಲನ ಸಮಿತಿಯ ನೇತೃತ್ವದಲ್ಲಿ ವರ್ಷಗಳ ಕಾಲ ನಡೆದಿದ್ದ ಅಪರಾಧ ಮುಕ್ತ ಗ್ರಾಮ ಜನಾಂದೋಲನದಿಂದ ಗ್ರಾಮದಲ್ಲಿ ಮಿತಿ ಮೀರಿದ್ದ ಅಪರಾಧ ಪ್ರಕರಣಕ್ಕೆ ಕಡಿವಾಣ ಬಿದ್ದಿತ್ತು. ಇದೀಗ ಮುಂದಿನ ಒಂದು ವರ್ಷಗಳ ಕಾಲ ವಿವಿಧ ಯೋಜನೆಗಳ ಮೂಲಕ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ರೂಪಿಸುವ ಕನಸನ್ನು ಆಂದೋಲನ ಸಮಿತಿಯ ಪದಾಧಿಕಾರಿಗಳು ಮುಂದಿರಿಸಿದ್ದಾರೆ.

ಆದರ್ಶ ಗ್ರಾಮದ ಕಲ್ಪನೆ ಏನು: ಒಂದೊಮ್ಮೆ ಕುಗ್ರಾಮ ಎಂದು ಹೆಸರು ಪಡೆದಿದ್ದ ಮಂಡೆಕೋಲನ್ನು ಅಪರಾಧ ಮುಕ್ತ ಗ್ರಾಮವಾಗಿಸಿರುವುದರ ಜೊತೆಗೆ ಮಾದರಿ ಗ್ರಾಮವನ್ನಾಗಿ ರೂಪಿಸಲು ಹಲವು ಯೋಜನೆಗಳನ್ನು ಯೋಚಿಸಿದೆ. ವ್ಯಸನಮುಕ್ತ, ಪ್ಲಾಸ್ಟಿಕ್ ಮುಕ್ತ, ವ್ಯಾಜ್ಯ ಮುಕ್ತ ಮತ್ತು ತ್ಯಾಜ್ಯ ಮುಕ್ತ ಗ್ರಾಮ ಮಾಡುವ ಕನಸು ಇವರದ್ದು. ಅಲ್ಲದೆ ಗ್ರಾಮದಲ್ಲಿ ಪಾಳು ಬಿದ್ದಿರುವ ಗದ್ದೆಗಳಲ್ಲಿ ಭತ್ತ ಕೃಷಿ ಮಾಡಿ ಬರಡು ಮುಕ್ತ ಗ್ರಾಮ ಮಾಡುವುದು, ಗ್ರಾಮದಲ್ಲಿ ಎಲ್ಲೆಡೆ ಗಿಡಗಳನ್ನು ಬೆಳೆಸುವ ಮೂಲಕ ಹಸಿರು ಗ್ರಾಮ ಸೃಷ್ಠಿಸುವುದು. ಜೊತೆಗೆ ಎಲ್ಲರಿಗೂ ಶಿಕ್ಷಣ ನೀಡಿ ಶೈಕ್ಷಣಿಕ ಗ್ರಾಮ, ಸಂಪೂರ್ಣ ಪಕ್ಕಾ ಮನೆ ಹೊಂದಿರುವ ಗುಡಿಸಲು ಮುಕ್ತ ಗ್ರಾಮ, ಸಂಪೂರ್ಣ ವಿದ್ಯುತ್‍ಚ್ಛಕ್ತಿ ಹೊಂದಿದ ಗ್ರಾಮ, ಎಲ್ಲರಿಗೂ ಆರೋಗ್ಯ ವಿಮೆ ಹೊಂದಿರುವ ಗ್ರಾಮ ಹೀಗೆ ಗ್ರಾಮವನ್ನು ಮಾದರಿಯಾಗಿ ರೂಪಿಸುವ ಯೋಜನೆಯನ್ನು ಮುಂದಿರಿಸಿದ್ದಾರೆ. ಅಲ್ಲದೆ ಗ್ರಾಮದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳಿಗೂ ಒತ್ತು ನೀಡಲಾಗುವುದು. ಸಾಮರಸ್ಯಕ್ಕೂ ಆದ್ಯತೆ ನೀಡಲಾಗುವುದು. ಇದಕ್ಕಾಗಿ ಒಂದು ವರ್ಷ ಪೂರ್ತಿ ಆಂದೋಲನದ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅಪರಾಧ ಮುಕ್ತ ಆಂದೋಲನದ ರುವಾರಿ ಮತ್ತು ಮಂಡೆಕೋಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುರೇಶ್ ಕಣೆಮರಡ್ಕ ಹೇಳಿದ್ದಾರೆ.

ಗಾಂಧಿಜಯಂತಿ ದಿನ ಆದರ್ಶ ಗ್ರಾಮದ ಸಂಕಲ್ಪ:ಅಪರಾಧ ಮುಕ್ತ ಗ್ರಾಮ ಜನಾಂದೋಲನ ಸಮಿತಿ, ಗ್ರಾಮ ಪಂಚಾಯತ್, ಗ್ರಾಮ ವಿಕಾಸ ಸಮಿತಿಯ ನೇತೃತ್ವದಲ್ಲಿ ಒಂದು ವರ್ಷಗಳ ಕಾಲ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗುವುದು. ಈ ಕುರಿತು ಅಕ್ಟೋಬರ್ ಎರಡು ಗಾಂಧೀಜಯಂತಿಯಂದು ಆದರ್ಶ ಗ್ರಾಮದ ಸಂಕಲ್ಪ ಕೈಗೊಳ್ಳಲಾಗುವುದು. ಡಿಸೆಂಬರ್‍ನಲ್ಲಿ ಇದಕ್ಕೆ ಸಂಬಂಧಪಟ್ಟು ಕಾರ್ಯಕ್ರಮವನ್ನು ಹಮ್ಮಿಕೊಂಡು ಚಾಲನೆ ನೀಡಲಾಗುವುದು. 2020ರ ಡಿಸೆಂಬರ್ ವೇಳೆಗೆ ಆದರ್ಶ ಗ್ರಾಮದ ಸಾಕಾರಕ್ಕೆ ಎಲ್ಲಾ ಪ್ರಯತ್ನ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಅಪರಾಧ ಮುಕ್ತ ಆಂದೋಲನ ವಿಸ್ತರಣೆಗೆ ಯೋಚನೆ: 2013ರಿಂದ ಆರಂಭಗೊಂಡು ಮಂಡೆಕೋಲು ಗ್ರಾಮದಲ್ಲಿ ವಿವಿಧ ಸ್ಥಳಗಳಲ್ಲಿ ಗ್ರಾಮದ ಎಲ್ಲಾ ಜನರನ್ನು ಸೇರಿಸಿ ಬೈಲುವಾರು ಸಮಿತಿ ರಚಿಸಿ ಗ್ರಾಮ ಪಂಚಾಯತ್ ಸಹಕಾರದಲ್ಲಿ ಒಂದು ವರ್ಷಗಳ ಕಾಲ ಜನಜಾಗೃತಿ ಆಂದೋಲನ ನಡೆಸಲಾಗಿತ್ತು. ಇದರ ಫರಿಣಾಮವಾಗಿ ಗ್ರಾಮದಲ್ಲಿ ಅಪರಾಧ ಪ್ರಕ್ರಿಯೆ ಕಡಿಮೆಯಾಗಿದೆ. 2013ಕ್ಕಿಂತ ಮೊದಲು ಮೊದಲು ಗ್ರಾಮದಲ್ಲಿ ಪೊಲೀಸ್, ಅರಣ್ಯ, ಅಬಕಾರಿ ಇಲಾಖೆಗಳಲ್ಲಿ ಪ್ರತಿ ವರ್ಷ ನೂರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿತ್ತು. ಹಲವು ಅಕ್ರಮ ಚಟುವಟಿಕೆಗಳು ನಡೆಯುತ್ತಿತ್ತು. ಅಪರಾಧ ಮುಕ್ತ ಗ್ರಾಮ ಆಂದೋಲನ ನಡೆದ ಬಳಿಕ ಗ್ರಾಮದಲ್ಲಿ ಅಪರಾಧ ಪ್ರಕರಣಗಳು, ಅಕ್ರಮ ಚಟುವಟಿಕೆಗಳು ತುಂಬಾ ಕಡಿಮೆಯಾಗಿದೆ ಗ್ರಾಮದಲ್ಲಿ ನೆಮ್ಮದಿ ನೆಲೆ ಮಾಡಿದೆ. ಕಳೆದ ಆರು ವರ್ಷಗಳಿಂದಲೂ ಇದನ್ನು ಕಾಯ್ದುಕೊಳ್ಳಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಗ್ರಾಮಗಳಿಗೆ ಆಂದೋಲನವನ್ನು ವಿಸ್ತರಿಸುವ ಯೋಚನೆ ಇದೆ ಎನ್ನುತ್ತಾರೆ ಸುರೇಶ್ ಕಣೆಮರಡ್ಕ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವ |
April 28, 2025
10:21 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 28-04-2025 | ಇಂದು ಅಲ್ಲಲ್ಲಿ ಗುಡುಗು ಸಹಿತ ಮಳೆ | ಮೇ 1ರಿಂದ ಮಳೆ ಹೆಚ್ಚಾಗುವ ಲಕ್ಷಣ
April 28, 2025
2:22 PM
by: ಸಾಯಿಶೇಖರ್ ಕರಿಕಳ
ಬಾಗಲಕೋಟೆ ಮುಧೋಳ ಸೇಬು ಬೆಳೆಗಾರನ ಬಗ್ಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ
April 28, 2025
7:02 AM
by: The Rural Mirror ಸುದ್ದಿಜಾಲ
“ದ ಹಿಂದೂ ಮ್ಯಾನಿಫ್ಯಾಸ್ಟೋ” ಕೃತಿ ಬಿಡುಗಡೆ | ಅಹಿಂಸೆಯೇ ಭಾರತದ ನೈಜ ಧರ್ಮ-ಮೋಹನ್ ಭಾಗವತ್
April 28, 2025
6:53 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group