ಮಡಿಕೇರಿ : ಕೂರ್ಗ್ ಕಾಫಿ ವುಡ್ ಮೂವೀಸ್ ಬ್ಯಾನರ್ ನಡಿಯಲ್ಲಿ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ಮಾಣ ಮತ್ತು ನಿರ್ದೇಶನದ ಸಾಮಾಜಿಕ ಕಳಕಳಿಯನ್ನು ಪ್ರತಿಬಿಂಬಿಸುವ ಕೊಡವ ಕಾದಂಬರಿ ಆಧಾರಿತ ‘ಕೊಡಗ್‍ರ ಸಿಪಾಯಿ’ ಚಲನಚಿತ್ರ ಪ್ರದರ್ಶನ ಕುಟ್ಟ ಕೊಡವ ಸಮಾಜದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ, ಕೊಡವ ಭಾಷಾ ಚಲನಚಿತ್ರಗಳಿಗೆ ಎಲ್ಲರ ಸಹಕಾರ ಅಗತ್ಯ ಎಂದರು. ಮೂವತ್ತೊಂದು ಕೊಡವ ಸಮಾಜಗಳ ಪ್ರೋತ್ಸಾಹದಿಂದ ಕೊಡಗ್‍ರ ಸಿಪಾಯಿ ಚಲನಚಿತ್ರ ಕೊಡಗು ಸೇರಿದಂತೆ ರಾಜ್ಯದ ಇತರೆಡೆ ಯಶಸ್ವೀ ಪ್ರದರ್ಶನ ಕಾಣುತ್ತಿರುವುದು ಹೆಮ್ಮೆಯ ವಿಚಾರ ಎಂದರು. ಮುಂದಿನ ದಿನಗಳಲ್ಲಿ ಮತ್ತಷ್ಟು ಕೊಡವ ಚಲನಚಿತ್ರಗಳು ಬಿಡುಗಡೆಯಾಗಲಿ ಎಂದು ಹಾರೈಸಿದ ಅವರು ಸಹಕಾರದ ಭರವಸೆ ನೀಡಿದರು.
ಪ್ರಾಸ್ತವಿಕವಾಗಿ ಮಾತನಾಡಿದ ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಹಾಗೂ ಹಿರಿಯ ನಟ ವಾಂಚೇಟಿರ ನಾಣಯ್ಯ, ಕೊಡವ ಚಲನಚಿತ್ರಗಳು ಬೆಳೆದು ಬಂದ ಹಾದಿಯ ಬಗ್ಗೆ ವಿವರಿಸಿದರು. ಕೊಡಗ್‍ರ ಸಿಪಾಯಿ ಚಿತ್ರ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ ಎಂದರು.
“ನಾ ಪುಟ್ಟ್ ನ ಮಣ್ಣು” ನಿಂದ ಆರಂಭಗೊಂಡ ಕೊಡವ ಚಿತ್ರ ಪಯಣ ಇದೀಗ 13ನೇ ಚಲನಚಿತ್ರ ಪ್ರದರ್ಶನ ಕಾಣುವಷ್ಟರ ಮಟ್ಟಿಗೆ ಬೆಳೆದಿದೆ. ಇದೇ ಮೊದಲ ಬಾರಿಗೆ 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿರುವ ಚಿತ್ರ ಕೊಡಗ್‍ರ ಸಿಪಾಯಿ ಎಂದು ನಾಣಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ನಿರ್ಮಾಣ, ನಿರ್ವಹಣೆಯ ಜವಬ್ದಾರಿ ನಿಭಾಯಿಸಿದ ನಟ ಹಾಗೂ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಚಿತ್ರ ಪ್ರದರ್ಶನದ ವಿವರ ನೀಡಿದರು. ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನ.1ಕ್ಕೆ ಹಾಗೂ ನ.5ಕ್ಕೆ ಮೂರ್ನಾಡು ಕೊಡವ ಸಮಾಜದಲ್ಲಿ ಚಿತ್ರ ಪ್ರದರ್ಶನ ಕಾಣಲಿದ್ದು, ಕೊಡವಾಭಿಮಾನಿಗಳು ಹಾಗೂ ಕೊಡವ ಭಾಷಾಭಿಮಾನಿಗಳು ಚಿತ್ರ ವೀಕ್ಷಿಸಿ ಸಹಕರಿಸುವಂತೆ ಮನವಿ ಮಾಡಿದರು.
ಕುಟ್ಟ ಕೊಡವ ಸಮಾಜದ ಖಜಾಂಚಿ ಸುಬ್ರಮಣಿ, ನಟ ಬಿದ್ದಂಡ ಉತ್ತಮ್ ಪೊನ್ನಪ್ಪ, ಕೊಡಗ್‍ರ ಸಿಪಾಯಿ ಕಾದಂಬರಿ ಬರಹಗಾರ್ತಿ ಉಳುವಂಗಡ ಕಾವೇರಿ ಉದಯ, ಚಿತ್ರದ ಪ್ರದರ್ಶನ ಹಕ್ಕು ಪಡೆದಿರುವ ಬಾಳೆಯಡ ಪ್ರತೀಶ್ ಪೂವಯ್ಯ, ಗಗನ್ ಗಣಪತಿ ಉಪಸ್ಥಿತರಿದ್ದರು. ಚೋಡುಮಾಡ ಗೀತಾ ಪ್ರಾರ್ಥಿಸಿ ಬೊಳ್ಳಜಿರ ಬಿ.ಅಯ್ಯಪ್ಪ ಸ್ವಾಗತಿಸಿ, ವಂದಿಸಿದರು.
ಶರಧಿ.ಡಿ.ಎಸ್, 3 ನೇ ತರಗತಿ, ಶ್ರೀ ಭಾರತೀ ವಿದ್ಯಾ ಪೀಠ, ಮುಜುಂಗಾವು ಎಡನಾಡು,…
ಕೃತಿಕಾ, 9 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ ಶಾಲೆ, ಕಡಬ…
ಧರ್ಮಸ್ಥಳ ಮತ್ತು ಕುಂದಾಪುರ ಪ್ರಾದೇಶಿಕ ಅರಣ್ಯ ವಿಭಾಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ…
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನ, ರಾಶಿಗಳ ಸಂಯೋಜನೆ, ಮತ್ತು ಜನ್ಮಕುಂಡಲಿಯ ಭಾವಗಳು…
ಅಸಹಜ ಚಲನೆಯ ಕಾರಣದಿಂದ ಕರಾವಳಿ ಭಾಗಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ.
ಅಡಿಕೆ ಬೆಳೆಗೆ ಪರ್ಯಾಯವಾಗಿ ಅಥವಾ ಉಪಬೆಳೆಯಾಗಿ ತಾಳೆ ಬೆಳೆಯನ್ನು ಬೆಳೆಯುವ ಬಗ್ಗೆ ಈಗಾಗಲೇ…