ಲಂಡನ್: ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್ ಫೈನಲ್ ಕುತೂಹಲದ ಘಟ್ಟದತ್ತ ಮುನ್ನಡೆದಿದೆ. ವಿಶ್ವ ಚಾಂಪಿಯನ್ ಆಗಲು 242 ರನ್ ಗಳ ಗುರಿ ಪಡೆದ ಇಂಗ್ಲೆಂಡ್ ಗೆ ಮೊದಲ ವಿಕೆಟ್ ನಷ್ಟವಾಗಿದೆ. ಇತ್ತೀಚಿನ ವರದಿ ಬಂದಾಗ ಇಂಗ್ಲೆಂಡ್ 10 ಓವರ್ ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 39 ರನ್ ಗಳಿಸಿದೆ. ಇದಕ್ಕೂ ಮುನ್ನ
ವೇಗದ ಬೌಲರ್‌ಗಳಾದ ಕ್ರಿಸ್ ವೋಕ್ಸ್(3-37) ಪ್ಲಂಕೆಟ್(3-42) ದಾಳಿಗೆ ನಲುಗಿದ ನ್ಯೂಝಿಲ್ಯಾಂಡ್ ಇಂಗ್ಲೆಂಡ್ ವಿರುದ್ಧ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿತ್ತು.
ಟಾಸ್ ಜಯಿಸಿದ ನ್ಯೂಝಿಲ್ಯಾಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅಗ್ರ ಸರದಿಯ ಬ್ಯಾಟ್ಸ್‌ಮನ್ ನಿಕೊಲ್ಸ್(55, 77 ಎಸೆತ) ಅರ್ಧಶತಕ ಕೊಡುಗೆ ನೀಡಿದರು.
ನಾಯಕ ವಿಲಿಯಮ್ಸನ್(30, 53 ಎಸೆತ) ಹಾಗೂ ಟಾಮ್ ಲಥಾಮ್(47) ಒಂದಷ್ಟು ಪ್ರತಿರೋಧ ಒಡ್ಡಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel