ಕುದ್ಲೂರಿನಲ್ಲಿ ಶಾಹ್ ಉಸ್ತಾದ್ ಅನುಸ್ಮರಣೆ

July 3, 2019
8:42 PM

ಕುದ್ಲೂರು: ಕುದ್ಲೂರು ಮುಬಾರಕ್ ಜುಮ್ಮಾ ಮಸೀದಿ ಹಾಗೂ SKSSF ಶಾಖೆ ವತಿಯಿಂದ ಕುದ್ಲೂರಿನಲ್ಲಿ ಶಾಹ್ ಉಸ್ತಾದ್ ಅನುಸ್ಮರಣೆ  ನಡೆಯಿತು.

ಮುಬಾರಕ್ ಜುಮಾ ಮಸೀದಿ ಕುದ್ಲೂರು ಹಾಗೂ ಎಸ್.ಕೆ.ಎಸ್.ಎಸ್.ಎಫ್ ಕುದ್ಲೂರು ಶಾಖೆ ಇದರ ಜಂಟಿ ಆಶ್ರಯದಲ್ಲಿ ಮಸೀದಿಯ ಸ್ಥಾಪಿತ ಕಾಲದಿಂದ ಗೌರವಾಧ್ಯಕ್ಷರಾಗಿದ್ದ ಉಸ್ತಾದ್ ಡಾ.ಶಾಹ್ ಮುಸ್ಲಿಯಾರ್ ಅನುಸ್ಮರಣಾ ಸಂಗಮ ಜಮಾಅತ್ ಅಧ್ಯಕ್ಷ ಅಬ್ದುರ್ರಹ್ಮಾನ್ ಮರ್ವೇಲು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಆತೂರು ಮುದರ್ರಿಸ್ ಸಯ್ಯಿದ್ ಜುನೈದ್ ಜಿಫ್ರಿ ತಂಙಳ್ ಸಭೆಯನ್ನು ಉದ್ಘಾಟಿಸಿ ಉಸ್ತಾದರಜೀವನ ಶೈಲಿ ಜನರನ್ನು ಒಳಿತಿನೆಡೆಗೆ ಹಾಗೂ ಮರಣ ಸ್ಮರಣೆಗೆ ಸೆಳೆಯುತ್ತಿದೆ ಎಂದು ಹೇಳಿದರು.

ಮುಖ್ಯ ಭಾಷಣ ಮಾಡಿದ ಕುಂತೂರು ಬೇಳ್ಪಾಡಿ ಎ  ಬಿ ಜುಮಾ ಮಸೀದಿ ಖತೀಬ್ ಮಜೀದ್ ದಾರಿಮಿ ಇಬಾದತ್ ಯಾವ ರೀತಿಯಾಗಬೇಕೆಂದು ಸ್ಮರಣೆಗೆ ಹೇತುವಾಗಲು ಏನೆಲ್ಲಾ ಮಾಡಬೇಕೆಂದು ತನ್ನ ಜೀವನ ಶೈಲಿಯಿಂದ ಉಸ್ತಾದ್ ತೋರಿಸಿಕೊಟ್ಟಿದ್ದರೆಂದು ಅಭಿಪ್ರಾಯಪಟ್ಟರು. ನಂತರ ಮಾಜಿ ಖತೀಬ್ ನಿಯಾಝ್ ಫೈಝಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮದ್ರಸ ಅಧ್ಯಾಪಕರಾದ ಮುಹಮ್ಮದ್ ಮುಸ್ಲಿಯಾರ್ ಕೋಲ್ಪೆ ಸಹಿತ ಹಲವು ಉಲಮಾಗಳು ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕೆ.ವೈ ಕೋಶಾಧಿಕಾರಿ ಅಬ್ದುಲ್ ಖಾದರ್ ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಅಶ್ರಫ್ ಕೊರೆಪದವು ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಕೋಶಾಧಿಕಾರಿ ನಝೀರ್ ಮೌಲವಿ ಮುಂತಾದ ಊರ ಗಣ್ಯರು ಉಪಸ್ಥಿತರಿದ್ದರು.

ಜುನೈದ್ ಜಿಫ್ರಿ ತಂಙಳ್ ಆತೂರು ನೇತೃತ್ವದಲ್ಲಿ ಧಿಕ್ರ್ ದುಆ ಮಜ್ಲಿಸ್ ನಡೆಯಿತು. ಸಂಗಮದಲ್ಲಿ ಸ್ಥಳೀಯ ಖತೀಬ್ ಅಶ್ರಫ್ ರಹ್ಮಾನಿ ಸ್ವಾಗತಿಸಿ ವಂದಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!
April 1, 2026
6:29 AM
by: ದ ರೂರಲ್ ಮಿರರ್.ಕಾಂ
ಗ್ಯಾಸ್ ಸಿಲಿಂಡರ್ ಕೊರತೆ ಪರಿಣಾಮ : ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆ
April 1, 2026
6:13 AM
by: ಮಿರರ್‌ ಡೆಸ್ಕ್
ಹಸಿರು ಅಮೋನಿಯಾ ಒಪ್ಪಂದಗಳು | ಭಾರತದ ಇಂಧನ ಭದ್ರತೆಗೆ ಹೊಸ ಬಲ..! 2030 ಗುರಿಗೆ ವೇಗ
April 1, 2026
6:07 AM
by: ಮಿರರ್‌ ಡೆಸ್ಕ್
ಕರಾವಳಿಯಲ್ಲಿ ಮಳೆಯ ರಭಸ | ಸುಬ್ರಹ್ಮಣ್ಯ ಆಸುಪಾಸಿನಲ್ಲಿ 50 ಮಿಮೀಗೂ ಹೆಚ್ಚು! ರಾಜ್ಯದ ಹಲವೆಡೆ ಇನ್ನೂ 2 ದಿನ ಮಳೆ ಅಲರ್ಟ್
April 1, 2026
5:56 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror