ಕುದ್ಲೂರು: ಕುದ್ಲೂರು ಮುಬಾರಕ್ ಜುಮ್ಮಾ ಮಸೀದಿ ಹಾಗೂ SKSSF ಶಾಖೆ ವತಿಯಿಂದ ಕುದ್ಲೂರಿನಲ್ಲಿ ಶಾಹ್ ಉಸ್ತಾದ್ ಅನುಸ್ಮರಣೆ ನಡೆಯಿತು.
ಮುಬಾರಕ್ ಜುಮಾ ಮಸೀದಿ ಕುದ್ಲೂರು ಹಾಗೂ ಎಸ್.ಕೆ.ಎಸ್.ಎಸ್.ಎಫ್ ಕುದ್ಲೂರು ಶಾಖೆ ಇದರ ಜಂಟಿ ಆಶ್ರಯದಲ್ಲಿ ಮಸೀದಿಯ ಸ್ಥಾಪಿತ ಕಾಲದಿಂದ ಗೌರವಾಧ್ಯಕ್ಷರಾಗಿದ್ದ ಉಸ್ತಾದ್ ಡಾ.ಶಾಹ್ ಮುಸ್ಲಿಯಾರ್ ಅನುಸ್ಮರಣಾ ಸಂಗಮ ಜಮಾಅತ್ ಅಧ್ಯಕ್ಷ ಅಬ್ದುರ್ರಹ್ಮಾನ್ ಮರ್ವೇಲು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಆತೂರು ಮುದರ್ರಿಸ್ ಸಯ್ಯಿದ್ ಜುನೈದ್ ಜಿಫ್ರಿ ತಂಙಳ್ ಸಭೆಯನ್ನು ಉದ್ಘಾಟಿಸಿ ಉಸ್ತಾದರಜೀವನ ಶೈಲಿ ಜನರನ್ನು ಒಳಿತಿನೆಡೆಗೆ ಹಾಗೂ ಮರಣ ಸ್ಮರಣೆಗೆ ಸೆಳೆಯುತ್ತಿದೆ ಎಂದು ಹೇಳಿದರು.
ಮುಖ್ಯ ಭಾಷಣ ಮಾಡಿದ ಕುಂತೂರು ಬೇಳ್ಪಾಡಿ ಎ ಬಿ ಜುಮಾ ಮಸೀದಿ ಖತೀಬ್ ಮಜೀದ್ ದಾರಿಮಿ ಇಬಾದತ್ ಯಾವ ರೀತಿಯಾಗಬೇಕೆಂದು ಸ್ಮರಣೆಗೆ ಹೇತುವಾಗಲು ಏನೆಲ್ಲಾ ಮಾಡಬೇಕೆಂದು ತನ್ನ ಜೀವನ ಶೈಲಿಯಿಂದ ಉಸ್ತಾದ್ ತೋರಿಸಿಕೊಟ್ಟಿದ್ದರೆಂದು ಅಭಿಪ್ರಾಯಪಟ್ಟರು. ನಂತರ ಮಾಜಿ ಖತೀಬ್ ನಿಯಾಝ್ ಫೈಝಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮದ್ರಸ ಅಧ್ಯಾಪಕರಾದ ಮುಹಮ್ಮದ್ ಮುಸ್ಲಿಯಾರ್ ಕೋಲ್ಪೆ ಸಹಿತ ಹಲವು ಉಲಮಾಗಳು ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕೆ.ವೈ ಕೋಶಾಧಿಕಾರಿ ಅಬ್ದುಲ್ ಖಾದರ್ ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಅಶ್ರಫ್ ಕೊರೆಪದವು ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಕೋಶಾಧಿಕಾರಿ ನಝೀರ್ ಮೌಲವಿ ಮುಂತಾದ ಊರ ಗಣ್ಯರು ಉಪಸ್ಥಿತರಿದ್ದರು.
ಜುನೈದ್ ಜಿಫ್ರಿ ತಂಙಳ್ ಆತೂರು ನೇತೃತ್ವದಲ್ಲಿ ಧಿಕ್ರ್ ದುಆ ಮಜ್ಲಿಸ್ ನಡೆಯಿತು. ಸಂಗಮದಲ್ಲಿ ಸ್ಥಳೀಯ ಖತೀಬ್ ಅಶ್ರಫ್ ರಹ್ಮಾನಿ ಸ್ವಾಗತಿಸಿ ವಂದಿಸಿದರು.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.