ಸುಬ್ರಹ್ಮಣ್ಯ: ಕುಮಾರಪರ್ವತ ಚಾರಣಕ್ಕೆ ಹೋದ 12 ಜನ ಯುವಕರ ತಂಡದಲ್ಲಿದ್ದ ಬೆಂಗಳೂರಿನ ಖಾಸಗಿ ಉದ್ಯೋಗಿ ಬೆಂಗಳೂರು ಗಾಯತ್ರಿ ನಗರದ ನಿವಾಸಿ 25 ವರ್ಷದ ಯುವಕ ಸಂತೋಷ್ ಭಾನುವಾರ ಸಂಜೆ ನಾಪತ್ತೆಯಾಗಿದ್ದರು. ಇದೀಗ ಕುಕ್ಕೆ ಸುಬ್ರಹ್ಮಣ್ಯದ ನೂಚಿಲ ಬಳಿಯ ಕಲ್ಲಗುಡ್ಡೆಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಹೀಗಾಗಿ ಪರ್ವತದಲ್ಲಿ ನಡೆಸುತ್ತಿದ್ದ ಹುಡುಕಾಟ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ. ಮಳೆ ಬಂದ ನಂತರ ದಾರಿ ತಪ್ಪಿ ಕಾಡಿನೊಳಗೆ ಪ್ರವೇಶವಾಗಿ ದಾರಿ ತಪ್ಪಿದೆ ಎಂದು ಸ್ಥಳೀಯರ ಬಳಿ ಯುವಕ ತಿಳಿಸಿದ್ದಾನೆ. ಬೆಳಗ್ಗಿನಿಂದ 5 ತಂಡಗಳಲ್ಲಿ ಹುಡುಕಾಟ ನಡೆಸಲಾಗುತ್ತಿತ್ತು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement