Advertisement
ಯಕ್ಷಗಾನ : ಮಾತು-ಮಸೆತ

‘ಕುಮಾರ’ ಶಬ್ದದ ಅರ್ಥವೇನು? ವೇದಾಂತಿಗಳು ಹೇಳುತ್ತಾರೆ……

Share

ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಶೂರಪದ್ಮ’)
ಪ್ರಸಂಗ : ಕುಮಾರ ವಿಜಯ

(ಸಂದರ್ಭ : ಷಣ್ಮುಖ ಮತ್ತು ಶೂರಪದ್ಮ ಯುದ್ಧದ ಸನ್ನಿವೇಶ. ಕೊನೆಗೆ ಷಣ್ಮುಖನು ವಿಶ್ವರೂಪ ತೋರಿಸಿದಾಗ)

“.. ಒಳಗಣ್ಣಿನಿಂದ ನೋಡಿದೆ.. ಈ ಪ್ರಪಂಚದಲ್ಲಿ ‘ಆದಿ-ಮಧ್ಯ-ಅಂತ್ಯ’ ಇಲ್ಲದೇ ಇದ್ದ ಶುದ್ಧ ಚೇತನವಿದು. ಶಕ್ತಿಯಿದು. ಅದಕ್ಕೆ ಹೆಸರಿಲ್ಲ, ರೂಪವಿಲ್ಲ. ಎಷ್ಟು ನಾಮಪದಗಳಿವೆ, ಎಷ್ಟು ರೂಪ ವಿನ್ಯಾಸಗಳಿವೆ. ಅವೆಲ್ಲವೂ ಇದೆ. ಶಾಸ್ತ್ರ ಓದಿದ್ದೇನೆ. ಅಧ್ಯಯನ ಮಾಡಿದ್ದು ಮಾತ್ರವಲ್ಲ, ಸಾಧನೆ ಮಾಡಿದ್ದೇನೆ. ತಪಸ್ಸನ್ನಾಚರಿಸಿದ್ದೇನೆ. ಆಮೇಲೆ ಪ್ರವೃತ್ತಿಯಲ್ಲಿ ಅಸುರನಾಗಿ ದುಡಿದಿದ್ದೇನೆ. ಈಗ ಸತ್ಯವನ್ನು ಕಂಡೆ. ಯಾವ ಬ್ರಹ್ಮದಿಂದ ಸಿಡಿದು ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮೊದಲಾದ ಮೂಲದ್ರವ್ಯಗಳು ವಿಕಾಸಗೊಂಡು ’ಪ್ರಪಂಚ’ ಅನ್ನಿಸಿತು. ‘ಕೂರ್ಮ’ ಅರ್ಥಾತ್ ಆಮೆ. ಇದು ಜಲದಲ್ಲೇ ಇರುತ್ತದೆ. ಇದಕ್ಕೆ ಈಜಬೇಕು ಅಂತ ತೋರಿದಾಗ ಒಂದೊಂದು ಅವಯವಗಳನ್ನು ತನ್ನ ಚಿಪ್ಪಿನಿಂದ ಹೊರ ಚಾಚುತ್ತದೆ. ಸಾಕು ಅಂತ ತೋರಿದಾಗ ಒಂದೊಂದೇ ಅವಯವಗಳನ್ನು ಒಳಗೆ ಎಳೆದುಕೊಳ್ಳುತ್ತದೆ. ಈ ಆಮೆಯ ಅವಯವಗಳನ್ನು ತನ್ನ ತಪಸ್ಸಿನಿಂದ, ಆತ್ಮವರ್ಚಸ್ಸಿನಿಂದ ನನ್ನ ನಿಯಂತ್ರಣಕ್ಕೆ ತಂದುಕೊಂಡಿದ್ದೇನೆ. ಆದ ಕಾರಣ ಕಾಣುವವರ ಕಣ್ಣಿಗೆ ಇದು ಕಾಣಿಸಲಿಲ್ಲ. ಆದರೆ ಇವನಿಗೆ ಕಂಡೀತಲ್ಲ. ನಾನು ಈ ಪ್ರಪಂಚವನ್ನು ಚಿದಾಕಾಶದಲ್ಲಿ ನಿಂತು ವಿಸ್ತಾರಗೊಳಿಸಿದುದನ್ನು ಇವನು ಹೀರುತ್ತಾ ಇದ್ದಾನೆ. ಸಾವಿರ ಮುಖಗಳು, ಸಾವಿರ ಬಾಹುಗಳು, ಸಾವಿರ ಮುಖಗಳಲ್ಲಿ ಸಾವಿರ ಭಾವಗಳು, ಸಾವಿರ ಭಾವಗಳಲ್ಲಿ ಸಾವಿರ ಕೃತಿಗಳು. ಇದಲ್ಲವೇ ಪರಮಾತ್ಮನ ಪ್ರಪಂಚ ವ್ಯಾಪಾರ, ವ್ಯವಹಾರ. ಇದು ವಿಶ್ವರ ರೂಪ…. ಕುಮಾರ……

‘ಕುಮಾರ’ ಶಬ್ದದ ಅರ್ಥವೇನು? ವೇದಾಂತಿಗಳು ಹೇಳುತ್ತಾರೆ, ಇದು ಸದಾ ಕೌಮಾರ, ಬಾಲ್ಯವಿಲ್ಲ. ಬಾಲ್ಯ ಇದ್ದರೆ ಹುಡುಗಾಟಿಕೆಯಾಗುತ್ತದೆ. ಆ ಕೌಮಾರ ದಾಟಿದರೆ ಯೌವನ ಬಂದು ಇತರ ಇಂದ್ರಿಯ ದಾಹಗಳು ಹುಟ್ಟಿಕೊಳ್ಳುತ್ತಾವೆ. ಆವಾಗ ಭೋಗಾಸಕ್ತಿಯಿಂದ ಒಂದು ಎರಡಾಗುತ್ತದೆ. ಎರಡು ಹನ್ನೆರಡಾಗುತ್ತದೆ, ಅನಂತವಾಗುತ್ತದೆ. ಹಾಗೆನೇ ಕುಮಾರ ಕೌಮಾರ ಆದ ಕಾರಣವೇ ಸುಬ್ರಹ್ಮಣ್ಯ ಬ್ರಹ್ಮಣ್ಯ. ಅಂದರೆ ಬ್ರಹ್ಮ ತೇಜಸ್ಸು. ಇದಕ್ಕೆ ‘ಸು’ ವಿಶೇಷಣ ಹಚ್ಚಿದರೆ ಅದರಿಂದಾಚೆ ಬ್ರಾಹ್ಮಣ್ಯವಿಲ್ಲ.

ಅಗ್ನಿ ಅಂದರೆ ಜ್ಞಾನ. ಉರಿಯುವ ಬೇಂಕಿಯು ಪಾಪ, ಪುಣ್ಯ ಎಲ್ಲವನ್ನು ಸುಟ್ಟುಬಿಡುತ್ತದೆ. ದ್ರವ್ಯವನ್ನು ಕಾಣಿಸದೆ ಎಲ್ಲವನ್ನು ಹಿಡಿ ಬೂದಿಯಾಗಿಸುತ್ತದೆ. ಆದ ಕಾರಣವೇ ಬ್ರಹ್ಮಣ್ಯ ಸುಬ್ರಹ್ಮಣ್ಯ. ಇವನ ಹುಟ್ಟು ಅಗ್ನಿಯಲ್ಲಿ. ಎದ್ದು ಬಂದುದು ಶರಜನ್ಮ. ಅದು ದರ್ಭೆಹುಲ್ಲು. ದರ್ಭೆ ಎನ್ನುವುದು ನಮ್ಮ ಸನಾತನ ಕರ್ಮಕಾಂಡದಲ್ಲಿ ಬಿಡಲಾಗದೆ ಇದ್ದಂತಹ ಒಂದು ಹುಲ್ಲು. ಬ್ರಹ್ಮಚಾರಿಗೆ ಮುಂಚೆ ಹಲ್ಲು. ಹಾಗಾಗಿ ಶರವಣ, ಭವ, ಗುರು, ಗುಹ, ಸುಬ್ರಹ್ಮಣ್ಯ.. ಆಹಾ ಇವನ ಮುಂದೆ ನನ್ನ ಮಾಯೆ ಅಗದ್ದು ಮಾತ್ರವಲ್ಲ, ನಾನೇ ಅಡಗಿಬಿಟ್ಟೆ….

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಮಳೆ ಕೈಕೊಟ್ಟಿದೆ… ಜಾನುವಾರುಗಳಿಗೆ ಮೇವು ಎಲ್ಲಿಂದ..?

ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…

15 hours ago

ಗೋಡಂಬಿ ಬೇರೆ ದೇಶಗಳಿಂದ… ಜಾಗತಿಕ ಮಾರುಕಟ್ಟೆ ವಿಯೆಟ್ನಾಂನ ಕೈಯಲ್ಲಿ..!

ಕಚ್ಚಾ ಗೋಡಂಬಿಯ ದೊಡ್ಡ ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಂಡರೂ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ…

15 hours ago

ರೇಷನ್ ಕಾರ್ಡ್‌ ಇ-ಕೆವೈಸಿಗೆ ಇನ್ನು ಕ್ಯೂ ಬೇಕಿಲ್ಲ – ಮನೆಯಲ್ಲೇ ಇ-ಕೆವೈಸಿಗೆ ‘ಅನ್ನಸೇವೆ’ ಆ್ಯಪ್‌

ಪಡಿತರ ಚೀಟಿಗೆ ಆಧಾರ್‌ ಆಧಾರಿತ ಇ-ಕೆವೈಸಿ ಮಾಡಲು ಇನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ…

16 hours ago

ಅಡಿಕೆ ವಹಿವಾಟಿನ ಹಿಂದೆ ಮತ್ತೊಂದು ದೊಡ್ಡ ತನಿಖೆ..? ₹1.3 ಕೋಟಿ ನಗದು ವಶ

ಅಕ್ರಮ ಅಡಿಕೆ ವ್ಯಾಪಾರ, ಕಳ್ಳಸಾಗಣೆ ಹಾಗೂ ಜಿಎಸ್‌ಟಿ ವಂಚನೆ ಆರೋಪದ ತನಿಖೆಯಲ್ಲಿ ಪಶ್ಚಿಮ…

16 hours ago

ಇಂಧನ ಮಾತ್ರವಲ್ಲ, ಕೃಷಿಗೂ ಹೊಸ ಮಾರುಕಟ್ಟೆ: ಎಥೆನಾಲ್‌ ಮಿಶ್ರಣ ಕೃಷಿ ವೈವಿಧ್ಯೀಕರಣಕ್ಕೆ ಹೆಜ್ಜೆ ಎಂದ ಗಡ್ಕರಿ

ಎಥೆನಾಲ್‌ ಮಿಶ್ರಣವು ಕೇವಲ ಇಂಧನ ನೀತಿಯಲ್ಲ, ಕೃಷಿ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸುವ…

16 hours ago

ಹವಾಮಾನ ವರದಿ | 02-10-2026 | ಸುಳ್ಯದಲ್ಲಿ 100 ಮಿ.ಮೀ.ವರೆಗೆ ಮಳೆ – ಕರಾವಳಿ–ಮಲೆನಾಡಿನಲ್ಲಿ ಮುಂದಿನ 10 ದಿನವೂ ಮಳೆಯ ಸಾಧ್ಯತೆ

ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…

2 days ago