ಪಂಜ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 624 ಅಂಕಗಳೊಂದಿಗೆ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಸುಬ್ರಹ್ಮಣ್ಯದ ಕುಮಾರಸ್ವಾಮಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕೃಪಾ ಕೆ ಆರ್ ಮನೆಯಲ್ಲಿ ಹೆತ್ತವರಿಗೆ ಸಂಭ್ರಮ ಹಾಗೂ ಸಂತಸ. ಕೃಪಾಗೆ ಈಗ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದಿದೆ.
ಕಡಬ ತಾಲೂಕಿನ ಬಳ್ಪ ಸಮೀಪದ ಕಣ್ಕಲ್ ರವಿ ಅಮ್ಮಣ್ಣಾಯ ಅವರ ಪುತ್ರಿ ಕೃಪಾ ಕೆ ಆರ್ ನಿರಂತರ ಅಭ್ಯಾಸದ ಮೂಲಕ ಉತ್ತಮ ಅಂಕ ಪಡೆದಿದ್ದಾರೆ. ಗ್ರಾಮೀಣ ಭಾಗದ ಈ ವಿದ್ಯಾರ್ಥಿನಿ ಯಾವುದೇ ಕೋಚಿಂಗ್ ಗೆ ತೆರಳದದೆ ಸತತ ಅಭ್ಯಾಸದ ಮೂಲಕ ಈ ಸಾಧನೆ ಮಾಡಿದ್ದಾರೆ. ಕೃಪಾ ಈ ಸಾಧನೆಗೆ ಕುಮಾರಸ್ವಾಮಿ ಆಂಗ್ಲಮಾದ್ಯಮ ಶಾಲೆಯ ಸಂಚಾಲಕ ಗಣೇಶ್ ಪ್ರಸಾದ್ , ಚಂದ್ರಶೇಖರ್ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾರತ್ನ ಅಭಿನಂದನೆ ಸಲ್ಲಿಸಿದ್ದಾರೆ.
ಉತ್ತಮ ಅಂಕದ ನಿರೀಕ್ಷೆ ಇತ್ತು ಎನ್ನುವ ಕೃಪಾ , ವಿಜ್ಞಾನ ವಿಭಾಗದಲ್ಲಿ ಒಂದು ಅಂಕ ಕಡಿಮೆಯಾಗುವ ನಿರೀಕ್ಷೆ ಇತ್ತು, ಆದರೆ ಆಂಗ್ಲ ವಿಭಾಗದಲ್ಲಿ ಒಂದು ಅಂಕ ಕಡಿಮೆಯಾಗಿದೆ ಎನ್ನುತ್ತಾರೆ. ಈ ಸಾಧನೆಗೆ ಹೆತ್ತವರು ಹಾಗೂ ಶಾಲೆಯ ಸಹಕಾರವೇ ಕಾರಣ ಎನ್ನುತ್ತಾರೆ.
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…
17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…
View Comments
ಇದು ಸುಳ್ಯ ತಾಲೂಕಿಗೆ ಸಂತಸ..ಸಡಗರ..
ನಮ್ಮ ಊರಿನ ಹಿರಿಮೆಯನ್ನು ಶಿಕ್ಶಣ ಕ್ಷೇತ್ರದಲ್ಲಿ ಪಸರಿಸಿದ ಕೃಪ ರವರಿಗೆ ದನ್ಯವಾದಗಳು. ಮುಂದಿನ ನಿಮ್ಮ ಗುರಿ ಉತ್ತಮ್ಮ ವಾಗಿ ಸಾಗಲಿ