ರಾಜ್ಯ ಸರಕಾರ ರೈತರ ಸಾಲ ಮನ್ನಾ ಯೋಜನೆಯಲ್ಲಿ ಉಭಯ ಜಿಲ್ಲೆಗಳ ಹಲವು ಮಂದಿ ಅರ್ಹ ರೈತರಿಗೆ ಇನ್ನು ದೊರಕಿಲ್ಲ. ದೊರಕದೆ ಇರಲು ಕಾರಣವಾದ ಅಂಶಗಳ ವಿವರ ಪಡೆದು ಸಾಲ ಸೌಲಭ್ಯವನ್ನು ಆರ್ಹ ರೈತರಿಗೆ ತಲುಪಿಸುವ ಉದ್ದೇಶದಿಂದ ರೈತರ ಮನೆಬಾಗಿಲಿಗೆ ಅಭಿಯಾನ ರಾಜ್ಯದಲ್ಲಿ ಆರಂಭಗೊಂಡಿದೆ.
ಇದರ ಜೊತೆಗೆ ಕಿಸಾನ್ ಸಮ್ಮಾನ್ ಯೋಜನೆಯೂ ಪ್ರತೀ ಮನೆಗೆ ತಲುಪಲಿದೆ. ಈಗಾಗಲೇ ಅರ್ಜಿ ನೀಡಲು ಸಮಯ ವಿಸ್ತರಣೆ ಮಾಡಿದ್ದರೆ ಇದೀಗ ಮತ್ತೆ ಬಜೆಟ್ ನಲ್ಲಿ ಕಿಸಾನ್ ಸಮ್ಮಾನ್ ಯೋಜನೆಗೆ ಅವಕಾಶ ನೀಡಲಾಗಿದೆ. ಹೀಗಾಗಿ ಈಗ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೃಷಿಕರ ಕಡೆಗೆ ಚಿತ್ತ ಇಟ್ಟಿವೆ. ಬಳಸಿಕೊಳ್ಳಬೇಕಾದ್ದು ಕೃಷಿಕರು.
ರೈತರ ಸಾಲ ಮನ್ನಾ ಯೋಜನೆಯಲ್ಲಿ ಸಹಕಾರ ಸಂಸ್ಥೆಗಳಿಂದ ರೈತರಿಗೆ ವಿತರಿಸಲಾದ ಅಲ್ಪಾವಧಿ ಸಾಲದ ಪೈಕಿ ಒಂದು ಕುಟುಂಬಕ್ಕೆ ರೂ.1 ಲಕ್ಷದವರೆಗೆ ಸಾಲ ಮನ್ನಾ ಯೋಜನೆ ಅನುಷ್ಠಾನ ಕುರಿತಂತೆ ಜೂ.24ರಂದು ಸಹಕಾರ ಸಚಿವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆದಿತ್ತು. ಸಭೆಯಲ್ಲಿ ಆರ್ಹ ರೈತರಿಗೆ ಸಾಲ ಸೌಲಭ್ಯ ಸಿಗದೆ ಇರುವ ವಿಚಾರವಾಗಿ ಚರ್ಚೆ ನಡೆದಿದೆ. ಅರ್ಹ ಎಲ್ಲ ರೈತರಿಗೆ ಯೋಜನೆಯ ಲಾಭ ದೊರಕುಂವತಾಗಲೂ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಪರಿಶೀಲನೆ ಸಮಿತಿ ರಚಿಸುವಂತೆ ಸೂಚನೆ ಹೊರಡಿಸಲಾಗಿತು.
ಬಳಿಕ ರಚಿತಗೊಂಡ ಜಿಲ್ಲಾ ಮತ್ತು ತಾಲೂಕು ಸಮಿತಿ ರೈತರ ಮನೆಗಳಿಗೆ ತೆರಳುವ ಅಭಿಯಾನ ಆರಂಬಿಸಿದೆ. ಸಾಲ ಮನ್ನಾ ಆಗದೆ ಇರುವ ರೈತರ ವಿವರಗಳನ್ನು ಪಡೆದು ಆರ್ಹ ರೈತ ಕುಟುಂಬಕ್ಕೆ ಸಾಲ ಮನ್ನಾದ ಪ್ರಯೋಜನವನ್ನು ದೊರಕಿಸುವುದು. ಸಾಲ ಸೌಲಭ್ಯ ಪಡೆಯಲು ಬಾಕಿ ಉಳಿದಿರುವ ಪ್ರಕರಣಗಳ ಪಟ್ಟಿಯನ್ನು ತಂಡ ರಚಿಸಲಿದೆ. ಬಳಿಕ ಜಂಟಿ ನಿರ್ಬಂಧಕರು ಪ್ರಕರಣಗಳ ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಿದೆ.
ತಾಲೂಕು ಸಮಿತಿಯು ಸಾಲಗಾರ ರೈತರ ಆಧಾರ್, ಪಡಿತರ ಚೀಟಿ ತಾಳೆಯಾಗದೆ ಇದ್ದು ಸಾಲ ಮನ್ನಾ ಯೋಜನೆಯಿಂದ ವಂಚಿತರಾಗಿರುವ ಕುರಿತು ಪರಿಶೀಲನೆ ನಡೆಸಲಿದೆ. ಸಾಲ ಮನ್ನಾ ಯೋಜನೆಗೆ ಒಳಪಡುವ ಪ್ರತಿ ರೈತನ ಮನೆಗಳಿಗೆ ಈ ತಂಡ ಭೇಟಿ ನೀಡಲಿದೆ. ಸಾಲ ಪಡೆಯಲು ನ್ಯೂನ್ಯತೆಗಳ ಬಗ್ಗೆ ತಂಡ ಪರಿಶೀಲಿಸಿ ರೈತರಿಗೆ ಮಾಹಿತಿ ನೀಡಲಿದೆ. ಅದನ್ನು ಸರಿಪಡಿಸಲು ಮತ್ತು ಸರಿಪಡಿಸಲು ಸಾಧ್ಯವಾಗದೆ ಇದ್ದ ಅಂಶಗಳಿದ್ದಲ್ಲಿ ಕಾರಣಗಳನ್ನು ಒಳಗೊಂಡ ವರದಿಯನ್ನು ನಿಗದಿಪಡಿಸಿದ ನಮೂನೆಯಲ್ಲಿ ಮಾಹಿತಿಯನ್ನು ಸಹಕಾರ ಸಂಘಗಳ ಅಪರ ನಿಬಂಧಕರ ಗಮನಕ್ಕೆ ತರಲಿದೆ.
ತಾಲೂಕು ಸಮಿತಿಯ ತಂಡದಲ್ಲಿ ಆಯಾ ತಾಲೂಕಿನ ಉಪವಿಭಾಗೀಯ ಸಹಕಾರ ಸಂಘಗಳ ಸಹಾಯಕ ನಿಬಂಧಕರುಗಳು ಉಪವಿಭಾಗೀಯ ನೊಡೇಲ್ ಆಕಾರಿಯಾಗಿರುತ್ತಾರೆ. ತಾಲೂಕಿನ ಒಬ್ಬ ಅ„ಕಾರಿ, ಡಿಸಿಸಿ ಬ್ಯಾಂಕು ಮನೇಜರ್, ಸೂಪರ್ ವೈಸರಗಳನ್ನೊಳಗೊಂಡ ತಾಲೂಕು ತಂಡವು ಪರಿಶೀಲನೆ ಮಾಡಿ ಸಲ್ಲಿಸಿದ ಮಾಹಿತಿಯಲ್ಲಿ ಶೇ.10 ರಷ್ಟು ಸಹಕಾರ ಸಂಘಗಳಿಗೆ ಸಹಾಯಕ ನಿಬಂಧಕರು ಹಾಗೂ ಶೇ.10 ರಷ್ಟು ದ.ಕ ಜಿಲ್ಲಾ ಕೇಂದ್ರ ಸಹಕಾರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಖುದ್ದಾಗಿ ಪರಿಶೀಲನೆ ಮಾಡಿ ರೈತರನ್ನು ಭೇಟಿಯಾಗಿ ಎಲ್ಲ ಮಾಹಿತಿಯನ್ನು ಕ್ರೋಢಿಕರಿಸಿ ದೃಡಿಕರಿಸಿ ಸರಕಾರಕ್ಕೆ ವರದಿ ಸಲ್ಲಿಸಬೇಕಿದೆ. ಅಭಿಯಾನಕ್ಕೆ ರಚಿತವಾದ ಸಮಿತಿಗಳು ಪರಿಶೀಲನೆ ಕಾರ್ಯ ಮುಗಿಯುವವರೆಗೆ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಹಾಗೂ ಸಿಬಂದಿಗಳು ಭಾನುವಾರದಂದು ಬರುವ ಸಾರ್ವತ್ರಿಕ ರಜೆಗಳಲ್ಲಿಯೂ ಸಹಿತ ಕಾರ್ಯನಿರ್ವಹಿಸುವಂತೆ ಮೈಸೂರು ಪ್ರಾಂತ ನಿಬಂಧಕರ ಸೂಚನೆಯಿದೆ.
ದ. ಕ ಜಿಲ್ಲೆಯಲ್ಲಿ 67.624 ಮಂದಿ, ಉಡುಪಿ ಜಿಲ್ಲೆಯಲ್ಲಿ 24,236 ಮಂದಿ ಸೇರಿ ಒಟ್ಟು 91.856 ಮಂದಿ ರೈತರು ಉಭಯ ಜಿಲ್ಲೆಯಲ್ಲಿದ್ದಾರೆ. ಈ ಪೈಕಿ ದ. ಕ ಜಿಲ್ಲೆಯಲ್ಲಿ 25,598 ರೈತರು 181 ಕೋಟಿ ಮೊತ್ತದ ಹಾಗೂ ಉಡುಪಿ ಜಿಲ್ಲೆಯ 10,322 ರೈತರು 69 ಕೋಟಿ ರೂ ಮೊತ್ತದಷ್ಟು ಸಾಲ ಮಂಜೂರಾತಿ ಪಡಕೊಂಡಿರುವರು. ಅಭಿಯಾನದಲ್ಲಿ ಉಭಯ ಜಿಲ್ಲೆಗಳ 930 ಮಂದಿ ರೈತ ಕುಟುಂಬಗಳನ್ನು ಭೇಟಯಾಗಿ ಜು.1 ರಿಂದ ರಾಜ್ಯದಲ್ಲಿ ರೈತರ ಮನೆಗಳಿಗೆ ಭೆಟಿ ನೀಡುವ ಅಭಿಯಾನ ಆರಂಭವಾಗಿದ್ದು ಮೈಸೂರು ಮತ್ತು ಚಾಮರಾಜನಗರದದಲ್ಲಿ ಜು.1ರಂದು, ಹಾಸನ ಜಿಲ್ಲೆಯಲ್ಲಿ ಜು.2ರಂದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಜು.3 ರಂದು ನಡೆದಿದೆ. ಉಡುಪಿ ಜಿಲ್ಲೆಯಲ್ಲಿ ಜು.4, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜು.5 , ಕೊಡಗು ಜಿಲ್ಲೆಯಲ್ಲಿ ಜು.6 ಮತ್ತು ಮಂಡ್ಯ ಜಿಲ್ಲೆಯಲ್ಲಿ ಜು.8 ದಿನಾಂಕಗಳನ್ನು ರೈತರ ಮನೆ ಭೇಟಿಗೆ ನಿಗದಿಪಡಿಸಲಾಗಿತ್ತು.
ವಿಶ್ವ ಆರೋಗ್ಯ ಸಂಸ್ಥೆಯು(WHO) ಅಡಿಕೆ ಕ್ಯಾನ್ಸರ್ ಕಾರಕವೆಂದು ಸಾಬೀತುಪಡಿಸಲು ಸಂಶೋಧನಾ ವರದಿಗಳನ್ನೇ ತಿರುಚಿ…
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…