ಕೃಷಿಕ ಎನ್ನಲು ಭಯ ಬೇಡ, ಹೆಮ್ಮೆ ಇರಲಿ – ಕಡಮಜಲು ಸುಭಾಶ್ ರೈ

September 22, 2019
4:54 PM

ಬಾಳಿಲ: ಕೃಷಿಕ ಎನ್ನಲು ಭಯ ಬೇಡ, ಪ್ರತಿಯೊಬ್ಬರಿಗೂ ಹೆಮ್ಮೆ ಇರಬೇಕು. ಬದುಕಿನ ಕೊನೆಯವರೆಗೂ ಕೃಷಿಕನಾಗಿಯೇ ಇರಬೇಕು. ಅದಕ್ಕಾಗಿಯೇ ಕೆಲವು ಸೂತ್ರಗಳನ್ನು ಕೃಷಿಕ ಅಳವಡಿಸಿಕೊಳ್ಳಬೇಕು ಎಂದು ಕೃಷಿಕ ಕಡಮಜಲು ಸುಭಾಶ್ ರೈ ಹೇಳಿದರು.

Advertisement

ಅವರು  ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ವಠಾರದಲ್ಲಿ ಭಾನುವಾರ ಭಾರತೀಯ ಕಿಸಾನ್ ಸಂಘ ಬಾಳಿಲ-ಮುಪ್ಪೇರ್ಯ ಹಾಗೂ ಭಾರತೀಯ ಕಿಸಾನ್ ಸಂಘ ಸುಳ್ಯ, ಗುತ್ತಿಗಾರು-ನಾಲ್ಕೂರು , ಎಣ್ಮೂರು ಇವುಗಳ ಸಹಭಾಗಿತ್ವದಲ್ಲಿ ನಡೆದ 16 ನೇ ವಾರ್ಷಿಕೋತ್ಸವ ಹಾಗೂ ಬಲರಾಮ ಜಯಂತಿ  ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು. ಕೃಷಿಕ ಕೃಷಿಯಲ್ಲಿ ಯಶಸ್ಸು ಕಾಣಲು ಪರಿಶ್ರಮ, ಕೃಷಿ ಮಾಹಿತಿ, ಯೋಜನೆ-ಯೋಚನೆಯನ್ನು  ಹೊಂದಬೇಕು. ಅದರ ಜೊತೆಗೆ ಮಿಶ್ರಬೆಳೆಯತ್ತ ಗಮನಹರಿಸಬೇಕು. ಆಗ ಮಾತ್ರಾ ಆದಾಯ ದ್ವಿಗುಣವಾಗಿ ಲಾಭ ಪಡೆಯಲು ಸಾಧ್ಯವಿದೆ. ಯಾವುದೇ ಕೃಷಿ ಮಾಡುವ ಮೊದಲು ಸೂಕ್ತ ಜಾಗ ಹಾಗೂ ಸೂಕ್ತವಾದ ಯೋಜನೆ ಹಮ್ಮಿಕೊಳ್ಳಬೇಕು ಎಂದರು.

ಸಭಾಧ್ಯಕ್ಷತೆಯನ್ನು ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಎನ್.ಜಿ.ಪ್ರಭಾಕರ ರೈ ವಹಿಸಿದ್ದರು. ಈ ಸಂದರ್ಭ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಬಾಳಿಲ ಶಾಖೆಯ ಜಿನಸು ವಿಭಾಗ ನಿವೃತ್ತ ವ್ಯವಸ್ಥಾಪಕ ಪಿ. ಸದಾಶಿವ ನಾಯಕ್ , ಹಿರಿಯ ಇಲೆಕ್ಟ್ರೀಷಿಯನ್ ರುಕ್ಮಯ್ಯ ಗೌಡ ಇಂದ್ರಾಜೆ ಹಾಗೂ  ಹೈನುಗಾರರಾದ ಭಾನುಪ್ರಕಾಶ್ ಮರಂಗಳ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ  ಜಯಪ್ರಸಾದ್ ಜೋಶಿ, ಬಾಳಿಲ ಭಾಕಿಸಂ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಕರ್ವಂಕಲ್ಲು , ಮಂಗಳೂರು ವಿಭಾಗ ಅಂಚೆ ಅಧೀಕ್ಷಕ‌ ಶ್ರೀಹರ್ಷ , ಗುತ್ತಿಗಾರು ಭಾಕಿಸಂ ಕಾರ್ಯದರ್ಶಿ  ಕುಮಾರಸ್ವಾಮಿ ಮೇಲ್ತೋಟ ಮೊದಲಾದವರು ಉಪಸ್ಥಿತರಿದ್ದರು.

ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕು ಅಧ್ಯಕ್ಷ ನೆಟ್ಟಾರು ಗೋಪಾಲಕೃಷ್ಣ ಭಟ್ , ಗುತ್ತಿಗಾರು ನಾಲ್ಕೂರು ವಲಯದ ಅಧ್ಯಕ್ಷ ಕುಮಾರಸ್ವಾಮಿ, ಬಾಳಿಲ ಮುಪ್ಪೇರ್ಯ ವಲಯದ ಕಾರ್ಯದರ್ಶಿ ಸಿ.ವಿ. ರಾಜಾರಾಮ ವರದಿ ವಾಚಿಸಿದರು.

ಬಾಳಿಲ ಮುಪ್ಪೇರ್ಯ ವಲಯದ ಅಧ್ಯಕ್ಷ ಕರ್ವಂಕಲ್ಲು ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು.  ವಿಜಯ ಬಾಳಿಲ ಪ್ರಾರ್ಥಿಸಿದರು. ವಿಜಯ ಬಾಳಿಲ‌ ಮತ್ತು ಸುಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.

 

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೇತುವಿನಿಂದ 18 ತಿಂಗಳು ಈ ರಾಶಿಯವರಿಗೆಲ್ಲಾ ಉತ್ತಮವಾಗಲಿದೆ |
May 14, 2025
7:29 AM
by: ದ ರೂರಲ್ ಮಿರರ್.ಕಾಂ
ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |
May 13, 2025
7:20 AM
by: ದ ರೂರಲ್ ಮಿರರ್.ಕಾಂ
ಈ ರಾಶಿಯವರಿಗೆ, ಮುಟ್ಟಿದ್ದೆಲ್ಲ ಚಿನ್ನ ಆ ರಾಶಿಗಳು ಯಾವುದು ತಿಳಿಯೋಣ
May 13, 2025
6:53 AM
by: ದ ರೂರಲ್ ಮಿರರ್.ಕಾಂ
ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ
May 12, 2025
10:14 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group