ಬಾಳಿಲ: ಕೃಷಿಕ ಎನ್ನಲು ಭಯ ಬೇಡ, ಪ್ರತಿಯೊಬ್ಬರಿಗೂ ಹೆಮ್ಮೆ ಇರಬೇಕು. ಬದುಕಿನ ಕೊನೆಯವರೆಗೂ ಕೃಷಿಕನಾಗಿಯೇ ಇರಬೇಕು. ಅದಕ್ಕಾಗಿಯೇ ಕೆಲವು ಸೂತ್ರಗಳನ್ನು ಕೃಷಿಕ ಅಳವಡಿಸಿಕೊಳ್ಳಬೇಕು ಎಂದು ಕೃಷಿಕ ಕಡಮಜಲು ಸುಭಾಶ್ ರೈ ಹೇಳಿದರು.
ಅವರು ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ವಠಾರದಲ್ಲಿ ಭಾನುವಾರ ಭಾರತೀಯ ಕಿಸಾನ್ ಸಂಘ ಬಾಳಿಲ-ಮುಪ್ಪೇರ್ಯ ಹಾಗೂ ಭಾರತೀಯ ಕಿಸಾನ್ ಸಂಘ ಸುಳ್ಯ, ಗುತ್ತಿಗಾರು-ನಾಲ್ಕೂರು , ಎಣ್ಮೂರು ಇವುಗಳ ಸಹಭಾಗಿತ್ವದಲ್ಲಿ ನಡೆದ 16 ನೇ ವಾರ್ಷಿಕೋತ್ಸವ ಹಾಗೂ ಬಲರಾಮ ಜಯಂತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು. ಕೃಷಿಕ ಕೃಷಿಯಲ್ಲಿ ಯಶಸ್ಸು ಕಾಣಲು ಪರಿಶ್ರಮ, ಕೃಷಿ ಮಾಹಿತಿ, ಯೋಜನೆ-ಯೋಚನೆಯನ್ನು ಹೊಂದಬೇಕು. ಅದರ ಜೊತೆಗೆ ಮಿಶ್ರಬೆಳೆಯತ್ತ ಗಮನಹರಿಸಬೇಕು. ಆಗ ಮಾತ್ರಾ ಆದಾಯ ದ್ವಿಗುಣವಾಗಿ ಲಾಭ ಪಡೆಯಲು ಸಾಧ್ಯವಿದೆ. ಯಾವುದೇ ಕೃಷಿ ಮಾಡುವ ಮೊದಲು ಸೂಕ್ತ ಜಾಗ ಹಾಗೂ ಸೂಕ್ತವಾದ ಯೋಜನೆ ಹಮ್ಮಿಕೊಳ್ಳಬೇಕು ಎಂದರು.
ಸಭಾಧ್ಯಕ್ಷತೆಯನ್ನು ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಎನ್.ಜಿ.ಪ್ರಭಾಕರ ರೈ ವಹಿಸಿದ್ದರು. ಈ ಸಂದರ್ಭ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಬಾಳಿಲ ಶಾಖೆಯ ಜಿನಸು ವಿಭಾಗ ನಿವೃತ್ತ ವ್ಯವಸ್ಥಾಪಕ ಪಿ. ಸದಾಶಿವ ನಾಯಕ್ , ಹಿರಿಯ ಇಲೆಕ್ಟ್ರೀಷಿಯನ್ ರುಕ್ಮಯ್ಯ ಗೌಡ ಇಂದ್ರಾಜೆ ಹಾಗೂ ಹೈನುಗಾರರಾದ ಭಾನುಪ್ರಕಾಶ್ ಮರಂಗಳ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಜಯಪ್ರಸಾದ್ ಜೋಶಿ, ಬಾಳಿಲ ಭಾಕಿಸಂ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಕರ್ವಂಕಲ್ಲು , ಮಂಗಳೂರು ವಿಭಾಗ ಅಂಚೆ ಅಧೀಕ್ಷಕ ಶ್ರೀಹರ್ಷ , ಗುತ್ತಿಗಾರು ಭಾಕಿಸಂ ಕಾರ್ಯದರ್ಶಿ ಕುಮಾರಸ್ವಾಮಿ ಮೇಲ್ತೋಟ ಮೊದಲಾದವರು ಉಪಸ್ಥಿತರಿದ್ದರು.
ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕು ಅಧ್ಯಕ್ಷ ನೆಟ್ಟಾರು ಗೋಪಾಲಕೃಷ್ಣ ಭಟ್ , ಗುತ್ತಿಗಾರು ನಾಲ್ಕೂರು ವಲಯದ ಅಧ್ಯಕ್ಷ ಕುಮಾರಸ್ವಾಮಿ, ಬಾಳಿಲ ಮುಪ್ಪೇರ್ಯ ವಲಯದ ಕಾರ್ಯದರ್ಶಿ ಸಿ.ವಿ. ರಾಜಾರಾಮ ವರದಿ ವಾಚಿಸಿದರು.
ಬಾಳಿಲ ಮುಪ್ಪೇರ್ಯ ವಲಯದ ಅಧ್ಯಕ್ಷ ಕರ್ವಂಕಲ್ಲು ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ವಿಜಯ ಬಾಳಿಲ ಪ್ರಾರ್ಥಿಸಿದರು. ವಿಜಯ ಬಾಳಿಲ ಮತ್ತು ಸುಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…