ಅಗ್ರಿಟಿಂಕರಿಂಗ್ ಫೆಸ್ಟ್ ನ ವಿವಿಧ ಸಂಶೋಧನೆಗಳ ಕಡೆಗೆ ಹೆಜ್ಜೆ ಹಾಕುತ್ತಿದ್ದಾಗ ಪುಟ್ಟ ಹುಡುಗನೊಬ್ಬ ಕೈ ಹಿಡಿದು ಎಳೆದು ” ನನ್ನ ಸಂಶೋಧನೆ ನೋಡಿ….” ಎಂದು ನಿರರ್ಗಳವಾಗಿ ವಿವರಿಸಿದ. ಆತ 4 ನೇ ತರಗತಿ ವಿದ್ಯಾರ್ಥಿ. ಇನ್ನೊಬ್ಬ ಕೀಟಗಳ ನಿಯಂತ್ರಣದ ಕಡೆಗೆ ತನ್ನದೇ ಆಲೋಚನೆ ಹರಿಯಬಿಟ್ಟ, ಇನ್ನೊಂದು ಕಡೆ ಗಿಡಗಳಿಗೆ ಸುಲಭವಾಗಿ ಗೊಬ್ಬರ ಉಣಿಸುವ ರೀತಿಯನ್ನು ವಿವರಿಸುತ್ತಿದ್ದ. ಇಲ್ಲರೂ ಪುಟ್ಟ ಪುಟ್ಟ ಮಕ್ಕಳು… !. ಇವರ ಆಲೋಚನೆಗಳು ಕೃಷಿಯತ್ತ , ಕೃಷಿ ಅಭಿವೃದ್ಧಿ ಕಡೆಗೆ ಇದೆ. ಈ ಯೋಚನೆಗಳಿಗೆ ಈಗ ಪ್ರೋತ್ಸಾಹ ನೀಡಬೇಕಾದ್ದು ಕೃಷಿಕರೇ… ಏಕೆಂದರೆ ಇದೆಲ್ಲಾ ಭವಿಷ್ಯ. ಕೃಷಿ ದೇಶ ಉಳಿಯಬೇಕಾದರೆ ಈ ಯೋಚನೆಗಳಿಗೆ ನೀರೆರೆಯಬೇಕಿದೆ.
ಪುತ್ತೂರಿನ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ವಠಾರದಲ್ಲಿ ಅಂಗ್ರಿ ಟಿಂಕರಿಂಗ್ ಫೆಸ್ಟ್ ನಡೆಯುತ್ತಿದೆ. ಕೃಷಿ ಅನ್ವೇಷಣೆಗಳ ಪ್ರದರ್ಶನ ಇದು. ಇದರಲ್ಲಿ 4 ವಿಭಾಗ ಮಾಡಿದ್ದಾರೆ. ಸಬ್ ಜೂನಿಯರ್ . ಜೂನಿಯರ್ , ಸೀನಿಯರ್ ಹಾಗೂ ಜನರಲ್ ಪಬ್ಲಿಕ್. ಹೀಗೆ ಒಟ್ಟು ಬಂದಿರುವ ಅನ್ವೇಷಣೆಗಳು 307. ಇದರಲ್ಲಿ ಸಬ್ ಜೂನಿಯರ್ ವಿಭಾಗದಲ್ಲಿ 153 ಅನ್ವೇಷಣೆ ಇದೆ. ಅಂದರೆ ಪುಟ್ಟ ಪುಟ್ಟ ಮಕ್ಕಳ ಆಸಕ್ತಿಯ ಸಂಶೋಧನೆ ಇದು. ಉಳಿದಂತೆ ಜೂನಿಯರ್ ವಿಭಾಗದಲ್ಲಿ 110 , ಸೀನಿಯರ್ ವಿಭಾಗದಲ್ಲಿ 23, ಜನರಲ್ ಪಬ್ಲಿಕ್ ವಿಭಾಗದಲ್ಲಿ 23 ಸಂಶೋಧನೆಗಳು ಪ್ರದರ್ಶನಗೊಂಡಿವೆ. ಗಮನಿಸಬೇಕಾದ್ದು ಎಳೆಯ ಮಕ್ಕಳ ಸಂಶೋಧನಾ ಮನಸ್ಸುಗಳು, ಗಿಡ, ಕೃಷಿ ಕಡೆಗಿನ ಮನಸ್ಸು ಏಕೆ ಬದಲಾಗುತ್ತಿದೆ. ಈ ಬದಲಾವಣೆ ತಡೆಗೆ ಏನು ಪರಿಹಾರ ? ಈ ಬಾರಿಯ ವಿದ್ಯಾರ್ಥಿಗಳ ಈ ಸಂಶೋಧನಾ ಫೆಸ್ಟ್ ನಲ್ಲಿ ಭಾಗವಹಿಸಿ ಆ ಪುಟಾಣಿಗಳಿಗೆ ಪ್ರೋತ್ಸಾಹಿಸಿದರೆ ಇದೇ ಭವಿಷ್ಯದ ಕೃಷಿ ಬದಲಾವಣೆ. ಪುಟ್ಟ ಮಕ್ಕಳ ಸಂಶೋಧನೆ ನೋಡಿದಾಗ ಎಲ್ಲಿ ಸಿಗುತ್ತದೆ ಎಂದು ಕೇಳಬೇಡಿ, ಹೇಗೆ ಮಾಡಿದಿ , ಶಹಭಾಸ್ ಎನ್ನಿ… ಇಷ್ಟೇ ಸಾಕು,. ಬಹುಮಾನ, ಪ್ರಶಸ್ತಿಗಿಂತಲೂ ಈ ಮಾತುಗಳು ಭವಿಷ್ಯದ ಕೃಷಿ ಬೆಳವಣಿಗೆಯ ಮೆಟ್ಟಿಲುಗಳೇ. ಹೀಗಾಗಿ ಫೆಸ್ಟ್ ಈ ಬಾರಿ ಯಶಸ್ಸಾಗಿದೆ.
ಉಳಿದಂತೆ ಪಾಪಸ್ ಕಳ್ಳಿ, ಗೇರುಬೀಜದಂತಹ ವಸ್ತುಗಳಿಂದ ತಯಾರಿಸಿದ ಸಾವಯವ ಕೀಟನಾಶಕ, ನೀರಿನ ಮರುಬಳಕೆಯ ಮಾದರಿ, ಉಳುವಿಕೆ ಮತ್ತು ಬಿತ್ತನೆ ಮಾಡುವುದಕ್ಕೆ ರೂಪಿಸಿದ ನವೀನ ಯಂತ್ರದ ಮಾದರಿ, ಹೈಡ್ರೋಫಾರ್ಮಿಂಗ್ ಮಾದರಿ, ಲಂಭ ಮಾದರಿಯ ಗಾರ್ಡನ್, ಒಣ ಅಡಿಕೆಯನ್ನು ಅಂಗಳದಿಂದ ನೇರವಗಿ ಗೋಣಿಚೀಲಕ್ಕೆ ತುಂಬಿಸುವ ಸಾಧನ, ಗಿಡಗಳಿಗೆ ಔಷಧ ಸಿಂಪಡಣಾ ಮಾದರಿ ಮೊದಲಾದವುಗಳು ಗಮನಸೆಳೆದರೆ ನೀರಿನ ಉಳಿತಾಯ ಮಾದರಿಯೂ ಮಕ್ಕಳ ಕೈಚಳಕದಲ್ಲಿ ಕಂಡಿತು.
ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಹೇಮಸ್ವಾತಿ ಮತ್ತು ಖುಷಿ ರೂಪಿಸಿದ ಪ್ಲಾಸ್ಟಿಕ್ ತ್ಯಾಜ್ಯದಿಂದ ಗ್ಯಾಸ್ ತಯಾರಿಕಾ ನೋಡುಗರನ್ನು ತಡೆದು ನಿಲ್ಲಿಸುವಂತಿತ್ತು. ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಮುಕ್ತಿ ಹೇಗೆ ಎಂಬ ಚಿಂತೆಯಲ್ಲಿರುವ ಸಂದರ್ಭದಲ್ಲಿ ಪುತ್ತೂರಿನ ಈ ವಿದ್ಯಾರ್ಥಿನಿಯರು ಪರಿಹಾರ ಕಂಡುಕೊಂಡಿದ್ದಾರೆ. ಪ್ಲಾಸ್ಟಿಕ್ ಅನ್ನು ನಿಗದಿತ ಶಾಖದಲ್ಲಿ ದ್ರವರೂಪಕ್ಕಿಳಿಸಿ ಅದರಿಂದ ಗ್ಯಾಸ್, ಪೆಟ್ರೋಲ್ ಪಡೆಯಬಹುದಾದ ಈ ಹುಡುಗಿಯರ ಮಾದರಿ ಮುಂದಿನ ದಿನಗಳಲ್ಲಿ ಜನಪ್ರಿಯವಾದರೆ ಅಚ್ಚರಿಯೇನೂ ಅಲ್ಲ. ಹೀಗೆ ಇನ್ನೂ ಹಲವು ಉಪಯುಕ್ತ ಮಾದರಿಗಳು ಪ್ರದರ್ಶನದಲ್ಲಿ ಮೂಡಿಬಂದು ಜನರನ್ನು ಸೆಳೆಯುತ್ತಿವೆ.
15.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…
ಭವಿಷ್ಯ ಕೆ ಪಿ, 8 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ…
ರಾಜ್ಯದ ವಿವಿದೆಡೆ ಸದ್ಯ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕೂಡಾ…
ಸಾವಯವ ತಾಲೂಕು ಎಂದು ಘೋಷಣೆ ಮಾಡಲು ಸಿದ್ಧವಾಗಿರುವ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ…
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9535156490