ಬಳ್ಪ: ಕೃಷಿ ನೀರಿನ ತೊಟ್ಟಿಯಿಂದ ಕೃಷಿ ಭೂಮಿಯಲ್ಲಿ ಯಶಸ್ಸು ಕಂಡ ಕೃಷಿಕ ಬಳ್ಪ ಗ್ರಾಮದ ಪಠೋಳಿ ಕೃಷ್ಣ ಭಟ್. ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ನೀರು ಸಂಗ್ರಹಣಾ ಘಟಕ ಯೋಜನೆಯಡಿ ಸುಳ್ಯ ತಾಲೂಕಿನ ಬಳ್ಪ ನಿವಾಸಿ ಪಿ. ಕೃಷ್ಣ ಭಟ್ ಇವರು ನೀರಾವರಿ ಬಗ್ಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಇಲಾಖಾ ಅಧಿಕಾರಿಗಳು ಇಲಾಖೆಯ ಸಹಾಯಧನದ ಮೂಲಕ ನೀರು ಸಂಗ್ರಹಣಾ ತೊಟ್ಟಿ ರಚನೆ ಮಾಡಿ ಬೇಸಿಗೆ ಕಾಲದಲ್ಲಿ ಕೃಷಿ ಭೂಮಿಯನ್ನು ಸುಸ್ಥಿತಿಯಲ್ಲಿ ಇಡಬಹುದೆಂಬ ಮಾಹಿತಿಯನ್ನು ನೀಡಿದರು.
ಅವರು ಇಲಾಖಾ ಮಾರ್ಗಸೂಚಿ ಅನ್ವಯ ಸುಮಾರು 20 * 20 * 3 ಮೀಟರ್ ಅಳತೆಯಲ್ಲಿ ಕೃಷಿ ಹೊಂಡ ಮಾಡಿ ಪ್ಲಾಸ್ಟಿಕ್ ಹೊದಿಕೆ ಹಾಕಿ ನೀರು ಸಂಗ್ರಹಣಾ ತೊಟ್ಟಿ ರಚಿಸಿದರು. ಇದಕ್ಕೆ ಶೇ. 50ರ ಸಹಾಯಧನದಂತೆ ರೂ. 67,094.00 ಗಳನ್ನು ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ಸಹಾಯಧನವಾಗಿ ನೀಡಲಾಯಿತು. ಇಲಾಖಾ ವತಿಯಿಂದ ಅವರಿಗೆ ಆರ್ಥಿಕ ನೆರವು ದೊರೆಯಿತು.
ಸರಕಾರ ನೀಡಿರುವ ಸಹಾಯಧನ ಮತ್ತು ಸ್ವಂತದ ಒಂದಿಷ್ಟು ಹಣ ಖರ್ಚು ಮಾಡಿ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದೇನೆ. 2018-19 ನೇ ಸಾಲಿನ ಬೇಸಿಗೆ (ಏಪ್ರಿಲ್-ಮೇ) ಯಲ್ಲಿ ಸುಳ್ಯ ತಾಲೂಕಿನಾದ್ಯಂತ ಬರದ ಪರಿಸ್ಥಿತಿ ಮೂಡಿದಾಗ ಸಹಾಯಧನದಡಿ ನಿರ್ಮಿಸಿದ ನೀರು ಸಂಗ್ರಹಣಾ ತೊಟ್ಟಿಯಲ್ಲಿ ಸಾಕಷ್ಟು ನೀರಿನ ಲಭ್ಯತೆ ಇದ್ದ ಕಾರಣ ಬರದ ನಡುವೆಯೂ ಎರಡರಿಂದ ಮೂರು ಸಲ ತೋಟಕ್ಕೆ ನೀರು ಕೊಡಲು ಸಾಧ್ಯವಾಯಿತು. ಹಾಗಾಗಿ ಅಡಿಕೆ ಮತ್ತು ಕಾಳುಮೆಣಸು ತೋಟವು ಬರದ ನಡುವೆಯೇ ಹಸಿರುಮಯವಾಗಿ ಕಂಗೊಳಿಸುತ್ತಾ ಹೆಚ್ಚಿನ ಬೆಳವಣಿಗೆಯ ಆಶಾಭಾವನೆ ಮೂಡಿಸಿದೆ. ಈ ವರ್ಷದಲ್ಲಿ 30-50% ಅಧಿಕ ಇಳುವರಿ ಪಡೆಯಬಹುದೆಂದು ಆಶಾಭಾವನೆ ಮೂಡಿದೆ” ಎಂದು ಕೃಷ್ಣ ಭಟ್‍ರವರು ತಮ್ಮ ಅಭಿಪ್ರಾಯ ತಿಳಿಸಿರುತ್ತಾರೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಹೇಳುತ್ತಾರೆ.
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ ಎಲ್ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…