ಕೃಷಿ ಪಂಡಿತರ ತೋಟದಲ್ಲಿ ಹಣ್ಣುಗಳ ವೈವಿಧ್ಯತೆ

June 2, 2019
8:00 AM

ಸುಳ್ಯ: ಬೆಳೆತು ನಿಂತಿರುವ ಥಾಯ್‍ಲ್ಯಾಂಡಿನ ಹಲಸಿನ ಕಾಯಿ. ಹಣ್ಣಾಗಿ ನಿಂತಿರುವ ಕಿತ್ತಳೆ , ಸೇಬು ಹಣ್ಣುಗಳ ರಾಶಿ… ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕುರಿಯಾಜೆ ತಿರುಮಲೇಶ್ವರ ಭಟ್ಟರ ತೋಟಕ್ಕೆ ಹೋದರೆ ಅಲ್ಲಿ ಬಾಯಲ್ಲಿ ನೀರೂರಿಸುವ ದೇಶ ವಿದೇಶಗಳ ವೈವಿಧ್ಯಮಯ ಹಣ್ಣುಗಳು ನಮ್ಮನ್ನು ಸ್ವಾಗತಿಸುತ್ತದೆ.

Advertisement
Advertisement

ತನ್ನ ಕೃಷಿಯ ಜೊತೆಗೆ ವೈವಿಧ್ಯಮಯ ಹಣ್ಣುಗಳ ವಿಸ್ಮಯ ಲೋಕವನ್ನು ಸೃಷ್ಠಿಸಿ ಗಮನ ಸೆಳೆಯುತ್ತಾರೆ ಕರ್ನಾಟಕ ಸರ್ಕಾರದ ಕೃಷಿ ಪಂಡಿತ ಪ್ರಶಸ್ತಿಯನ್ನು ಪಡೆದಿರುವ ಕೃಷಿಕ ತಿರುಮಲೇಶ್ವರ ಭಟ್. ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿರುವ ಹಲವು ಹಣ್ಣುಗಳೂ ಕರಾವಳಿಯ ಈ ಮಣ್ಣಿನಲ್ಲಿ ಫಲವತ್ತಾಗಿ ಬೆಳೆಯಬಲ್ಲುದು ಎಂದು ಇವರ ಪ್ರಯೋಗ ತೋರಿಸಿ ಕೊಟ್ಟಿದೆ.

 

 

ಸುಮಾರು ಹತ್ತಕ್ಕೂ ಹೆಚ್ಚು ದೇಶ ವಿದೇಶದ ತಳಿಯ ಹಲಸು, ಹತ್ತಕ್ಕೂ ಹೆಚ್ಚು ಬಗೆಯ ವೈವಿಧ್ಯಮಯ ಮಾವು ತಳಿಗಳು, ರಂಬೂಟಾನ್, ಮ್ಯಾಂಗೋ ಸ್ಟೇನ್, ಮಿರಾಕ್ಕಲ್ ಪ್ರೂಟ್ಸ್, ಡ್ರಾಗನ್ ಫ್ರೂಟ್ಸ್, ಹೀಗೆ ಸುಮಾರು ಒಂದು ಎಕ್ರೆ ಸ್ಥಳವನ್ನು ಪೂರ್ತಿಯಾಗಿ ಹಣ್ಣು ಬೆಳೆಯುವುದಕ್ಕಾಗಿಯೇ ಮೀಸಲಿಟ್ಟಿದ್ದು 25ಕ್ಕೂ ಹೆಚ್ಚು ವಿಧದ ಹಣ್ಣುಗಳನ್ನು ಬೆಳೆಸಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ ಮತ್ತು ವಿದೇಶಗಳಾದ ಮಲೇಶಿಯಾ. ಥಾಯ್‍ಲ್ಯಾಂಡ್‍ಗಳಿಂದ ತಂದಿರುವ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಅಚ್ಚು ಕಟ್ಟಾಗಿ ನೆಟ್ಟು ಬೆಳೆಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಇವರು ನಿರಂತರವಾಗಿ ನಡೆಸಿದ ಪ್ರಯತ್ನದ ಫಲವಾಗಿ ಇಂದು ಮನಮೋಹಕವಾದ ಹಣ್ಣಿನ ತೋಟ ಸೃಷ್ಠಿಯಾಗಿದೆ. ಇವರು ಭೇಟಿ ನೀಡಿದ ಸ್ಥಳಗಳಿಂದೆಲ್ಲಾ ಒಂದಲ್ಲಾ ಒಂದು ರೀತಿಯ ಹಣ್ಣಿನ ಗಿಡಗಳನ್ನು ಸಂಗ್ರಹಿಸಿ ತರುತ್ತಾರೆ. ಕೆಲವೊಂದು ಅಪರೂಪದ ಗಿಡಗಳನ್ನು ಸಂಗ್ರಹಿಸಲು ಸಾವಿರಾರು ರೂಗಳನ್ನು ವ್ಯಯಿಸಿದ್ದೂ ಇದೆ.

 

 

ಸಾವಯವ ಕೃಷಿಯ ಸರದಾರ:

ಕಳೆದ ಹಲವು ದಶಕಗಳಿಂದ ಸಾವಯವ ಕ್ರಷಿಯನ್ನು ನೆಚ್ಚಿಕೊಂಡಿರುವ ತಿರುಮಲೇಶ್ವರ ಭಟ್ಟರ ಕೃಷಿ ಭೂಮಿ ಮತ್ತು ತೋಟ ಒಂದು ಸುಂದರ ನಂದನವನದಂತೆ ನಳ ನಳಿಸುತಿದೆ. ಮೂರು ಎಕ್ರೆ ಅಡಕೆ ತೋಟ ಮತ್ತು ಮೂರು ಎಕ್ರೆ ರಬ್ಬರ್ ಕೃಷಿಯನ್ನು ನಡೆಸುತ್ತಿರುವ ಇವರು ಎಲ್ಲಾ ತರಹದ ಕೃಷಿಯನ್ನೂ ಮಾಡಿ ಯಶಸ್ವಿಯಾಗಿದ್ದಾರೆ. ಆದುದರಿಂದಲೇ ಇವರ ಸಮಗ್ರ ಕೃಷಿ ಮತ್ತು ಬೆಳೆಗಳ ವೈವಿದ್ದೀಕರಣವನ್ನು ಮೆಚ್ಚಿ 2007-2008ನೇ ಸಾಲಿನಲ್ಲಿ ಸರ್ಕಾರ ಇವರಿಗೆ ಕೃಷಿ ಪಂಡಿತ ಪ್ರಶಸ್ತಿಯನ್ನು ನೀಡಿದೆ. ಸಾವಯವ ಕೃಷಿಯನ್ನು ಅಳವಡಿಸಿ ಅಡಕೆ, ತೆಂಗು, ಕಾಳು ಮೆಣಸು, ರಬ್ಬರ್, ಬಾಳೆ, ಕೊಕ್ಕೊ, ಜಾಯಿ ಕಾಯಿ, ದೇಶಿ ಹಾಗು ವಿದೇಶಿ ಹಣ್ಣುಗಳನ್ನು ಸಮರ್ಪಕವಾಗಿ ಬೆಳೆಸಿ ಇವರು ಪ್ರಶಸ್ತಿಗೆ ಪಾತ್ರರಾಗಿದ್ದರು. ಪ್ರಶಸ್ತಿ ಮುಡಿಗೇರಿ ಸುಮಾರು ಒಂದು ದಶಕದ ಬಳಿಕವೂ ತನ್ನ ಕೃಷಿ ಸಾಧನೆಯನ್ನು ಅದೇ ರೀತಿ ಮುಂದುವರಿಸಿಕೊಂಡು ಬಂದಿದ್ದಾರೆ. ವಿವಿಧ ತಳಿಯ ಅಡಕೆ ಗಿಡಗಳು, ಹಲವು ವಿದಧ ಕಾಳು ಮೆಣಸಿನ ಗಿಡಗಳು ಇವರ ತೋಟವನ್ನು ವೈವಿಧ್ಯಮಯವನ್ನಾಗಿಸುತ್ತದೆ. ಅದು ಕೃಷಿ ಗಿಡಗಳೇ ಇರಲಿ, ಹಣ್ಣಿನ ಗಿಡಗಳೇ ಇರಲಿ ವಿಶೇಷವಾದುದನ್ನು ಎಲ್ಲಿ ನೋಡಿದರೂ ಅದನ್ನು ತಂದು ತನ್ನು ತೋಟದಲ್ಲಿ ಬೆಳೆಸುವುದು ಇವರ ಹವ್ಯಾಸ. ಭಿನ್ನ ರೀತಿಯಲ್ಲಿ ಕೃಷಿ ಮಾಡಿ ಕೃಷಿ ಪಂಡಿತ ಪ್ರಶಸ್ತಿ ಪಡೆದ ಇವರು ಮನೆಯ ಸುತ್ತಲೂ ತಮ್ಮ ಹಸಿರ ಪ್ರೇಮವನ್ನು ಪ್ರದರ್ಶಿಸಿ ಮನೆಯ ಪರಿಸರ ಮತ್ತು ತನ್ನ ಕೃಷಿ ಭೂಮಿಯನ್ನು ಆಕರ್ಷಣೆಯ ತಾಣವಾಗಿಸಿದ್ದಾರೆ.

 

 

ಸುಳ್ಯನ್ಯೂಸ್.ಕಾಂ ಜೊತೆ ಮಾತನಾಡಿದ ಕೃಷಿ ಪಂಡಿತ ಪ್ರಶಸ್ತಿ ವಿಜೇತ ಕೃಷಿಕ ತಿರುಮಲೇಶ್ವರ ಭಟ್ ಕುರಿಯಾಜೆ “ಹಣ್ಣಿನ ಗಿಡಗಳನ್ನು ಬೆಳೆಸುವುದು ಒಂದು ಹವ್ಯಾಸ. ಕೃಷಿಯ ಜೊತೆಗೆ ಒಂದು ಎಕ್ರೆ ಸ್ಥಳವನ್ನು ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ಬೆಳೆಸುವುದಕ್ಕಾಗಿ ಮೀಸಲಿಟ್ಟಿದ್ದೇನೆ. ಎಲ್ಲೇ ಹೋದರೂ ಅಲ್ಲಿಂದ ಆ ಭಾಗದ ವಿಶೇಷವಾದ ಮತ್ತು ಅಪರೂಪದ ಗಿಡಗಳನ್ನು ಸಂಗ್ರಹಿಸಿ ತಂದು ತೋಟದಲ್ಲಿ ಬೆಳೆಸುತ್ತೇನೆ” ಎನ್ನುತ್ತಾರೆ.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಅಡಿಕೆ ನಿಷೇಧ ಇಲ್ಲ – ಈಗ ಅಡಿಕೆ ಬಳಕೆಯ ನಿಯಂತ್ರಣದತ್ತ ಫೋಕಸ್
January 30, 2026
10:42 PM
by: ಮಹೇಶ್ ಪುಚ್ಚಪ್ಪಾಡಿ
ಅರೆಕಾನಟ್ ಚಾಲೆಂಜ್ : ಅಡಿಕೆ ನಿಯಂತ್ರಣ ಕುರಿತು WHO ಉತ್ಸುಕತೆ – ಕ್ಲಿನಿಕಲ್ ಪರೀಕ್ಷೆಗಳ ಅಗತ್ಯಕ್ಕೆ ತಜ್ಞರ ಒತ್ತಾಯ
January 30, 2026
6:04 PM
by: ದ ರೂರಲ್ ಮಿರರ್.ಕಾಂ
“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ
January 30, 2026
8:05 AM
by: ಮಿರರ್‌ ಡೆಸ್ಕ್
ರಾಜ್ಯದಲ್ಲಿ 3 ವರ್ಷದಲ್ಲಿ 432 ಮಂದಿ ಅಕ್ರಮ ವಿದೇಶಿ ವಲಸಿಗರು ಪತ್ತೆ | ಬೆಂಗಳೂರು ನಗರದಲ್ಲೇ 328 ಪ್ರಕರಣ
January 30, 2026
7:57 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror