ಸುಬ್ರಹ್ಮಣ್ಯ: ಪ್ರತಿ ಜೀವಿಗೂ ಬೇಕಿರುವುದು ದೈಹಿಕ ಆರೋಗ್ಯ ಇದಕ್ಕೆ ಯೋಗ ಬಹುಮುಖ್ಯ ಸಾಧನ ಎಂದು ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಉಪಪ್ರಾಂಶುಪಾಲೆ ಡಾ. ಉಷಾ ಅಂಕೋಲೆಕರ್ ಅಭಿಪ್ರಾಯ ಪಟ್ಟರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಘಟಕ, ಅರ್ಥಶಾಸ್ತ್ರ ವಿಭಾಗ, ಪತಂಜಲಿ ಯೋಗ ಸಮಿತಿ ಬೆಳ್ಳಾರೆ ಇವುಗಳ ಅಶ್ರಯದಲ್ಲಿ ಕೆಎಸ್‍ಎಸ್ ಕಾಲೇಜಿನಲ್ಲಿ ನಡೆದ ಯೋಗ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮನಸ್ಸು ಮತ್ತು ದೇಹವನ್ನು ಸಮತೋಲನದಲ್ಲಿ ಇರಲು ಯೋಗ ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯ ಎಂದರು. ಮುಖ್ಯ ಅತಿಥಿಯಾಗಿದ್ದ ಇಕೋ ಕ್ಲಬ್ ಮುಖ್ಯಸ್ಥೆ ಉಪನ್ಯಾಸಕಿ ಪ್ರೋ.ತಾರಕೇಶ್ವರಿ ಮಾತನಾಡಿ ಭಾರತೀಯ ಸಂಸ್ಕೃತಿ ವೈಭವತವಾದದ್ದು ಇದರ ಹಿರಿಮೆ ಮತ್ತು ಗರಿಮೆಗಳು ಯೋಗಾನುಬಂಧದಿಂದ ಕೂಡಿದೆ. ಹೀಗಾಗಿ ಗುರಿ ತಲುಪಲು ಯೋಗ ಸಹಕಾರಿ ಎಂದರು.
ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಲತಾ ಕಮಿಲ ಪ್ರಸ್ತಾವನೆಗೈದು ಸ್ವಾಗತಿಸಿದರು. ಮಹಿಳಾ ಸಬಲೀಕರಣ ಘಟಕದ ಪ್ರತಿನಿಧಿ ದಿವ್ಯ ವಂದಿಸಿದರು. ಅಕ್ಷತಾ ಪಿ.ಕೆ ಕಾರ್ಯಕ್ರಮ ನಿರೂಪಿಸಿದರು. ಒಂದು ವಾರಗಳ ಕಾಲ ನಡೆಯುವ ಯೋಗ ಶಿಬಿರದಲ್ಲಿ ಬೆಳ್ಳಾರೆ ಪತಂಜಲಿ ಯೋಗಗುರುಗಳಾದ ಪ್ರಸಾದ್ ಸೇವಿತಾ, ಕವಿತಾ ತರಗತಿ ನಡೆಸಿಕೊಡಲಿರುವರು. ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಪ್ರೋ ಆರತಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮನೆ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ…
ನಂದಿನ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್ಗಳ ಸಂಘ ವಿರೋಧ ವ್ಯಕ್ತಪಡಿಸಿದೆ. …
ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಶಿರಸಿಯ ಕಾಳುಮೆಣಸಿನ ಬೆಲೆಯನ್ನು ಸಂಬಾರ ಮಂಡಳಿಯ ದರಪಟ್ಟಿಯಲ್ಲಿ ನಮೂದಿಸುವಂತೆ ಕೇಂದ್ರ ವಾಣಿಜ್ಯ ಸಚಿವ…
ತಂದೆ-ತಾಯಿ ಹಾಗೂ ಹಿರಿಯರನ್ನು ಆರೈಕೆ ಮಾಡದ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ನೀಡಿದ ದಾನಪತ್ರವನ್ನು…