ಸುಬ್ರಹ್ಮಣ್ಯ : ಪಠ್ಯದಲ್ಲಿ ಕಲಿಸಲಾಗದ ಶಿಕ್ಷಣವನ್ನು ಪಾಠವನ್ನು ರಂಗಭೂಮಿ ಕಲಿಸುತ್ತದೆ. ಸಮಾಜದಲ್ಲಿ ಪರಿಪೂರ್ಣ ವ್ಯಕ್ತಿಯಾಗಿ ರೂಪುಗೊಳ್ಳಲು ಪಠ್ಯೇತರ ಚಟುವಟಿಯೇ ಮಾನದಂಡ. ರಂಗಭೂಮಿ ಸದಾ ಜೀವಂತವಾದುದು ಎಂದು ಕೆಎಸ್‍ಎಸ್ ಕಾಲೇಜು ಪೂರ್ವ ವಿದ್ಯಾರ್ಥಿ ದಿವಾಕರ ಮುಂಡಾಜೆ ಹೇಳಿದರು.
ಅವರು ಸುಬ್ರಹ್ಮಣ್ಯ ಕೆಎಸ್‍ಎಸ್ ಕಾಲೇಜಿನಲ್ಲಿ ನಡೆದ ಕುಸುಮಸಾರಂಗ-2019 ಮತ್ತು ಐಕ್ಯೂಎಸಿ ಸಹಯೋಗದಲ್ಲಿ 27ನೇ ವರ್ಷದ ರಂಗ ಶಿಕ್ಷಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಸಮಾಜದ ಗೌರವಕ್ಕೆ ಪಾತ್ರರಾಗಲು ಪಠ್ಯೇತರ ಚಟುವಟಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಕಾಲೇಜು ಪ್ರಾಂಶುಪಾಲ ಪ್ರೋ ಉದಯಕುಮಾರ್ ಕೆ ಅವರು ಪ್ರಸ್ತಾವನೆಗೈದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಸ್ಪೂರ್ತಿಯನ್ನು ತುಂಬಲು ನಾಟಕಕ್ಕೆ ಪ್ರೋತ್ಸಾಹ ನೀಡುತ್ತಿದ್ದೇವೆ ಎಂದರು.
ಕಾಲೇಜು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೋಹನದಾಸ್ ರೈ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಬಾಲಕೃಷ್ಣ ಪೈ, ಕುಸುಮಸಾರಂಗದ ಸ್ಥಾಪಕ ನಿರ್ದೇಶಕ ತುಕರಾಮ್ ಯೇನೆಕಲ್ಲು, ಪೂರ್ವ ವಿದ್ಯಾರ್ಥಿ ರಾಮಚಂದ್ರ ಮುಖ್ಯ ಅತಿಥಿಗಳಾಗಿದ್ದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕ ವಿನ್ಯಾಸ್ ಎಚ್ ವಂದಿಸಿದರು. ಲೋಹಿತ್ ಎಂ.ಡಿ ವಂದಿಸಿದರು. ಬಳಿಕ ಕುಸುಮಸಾರಂಗ ವಿದ್ಯಾರ್ಥಿಗಳು ನಟಿಸಿದ ಪ್ರೋ ಜಯಪ್ರಕಾಶ್ ಮಾವಿನಕುಳಿ ರಚಿಸಿದ ಅಭಿಯಾನ ನಾಟಕ ಪ್ರದರ್ಶನಗೊಂಡಿತು. ಉಪನ್ಯಾಸಕರು, ಪೋಷಕರು, ಪೂರ್ವ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿವಾಹದ ವಿಳಂಬ, ಸಂತಾನದ ಕೊರತೆ, ಮತ್ತು ಆರ್ಥಿಕ ಅಡೆತಡೆಗಳಿಗೆ ಕಾರಣವಾಗಬಹುದು. ಸರ್ಪಸಂಸ್ಕಾರವು ಈ…
ಆಗಸ್ಟ್ 2ನೇ ವಾರದಲ್ಲಿ ತಮಿಳುನಾಡು ಕರಾವಳಿಯ ಸಮೀಪ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ…
ಅಮಾಯಕ ನಾಗರಿಕರನ್ನು ಬಲಿಗೆ ಹಾಕುವ ಕಾನೂನು ಡಿಜಿಟಲ್ ಸಿಗ್ನೇಜರಿದ್ದು ಮಾತ್ರವಲ್ಲ, ಇನ್ನು ಅನೇಕ…
ಯೂರಿಯಾ ಗೊಬ್ಬರ ಅಭಾವದ ನಡುವೆಯೇ ರಾಜ್ಯದಲ್ಲಿ ಕಳಪೆ ಗೊಬ್ಬರ ಹಾಗೂ ಕಳಪೆ ಬೀಜಗಳ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಕಾಡಾನೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ…
ಕೊಡಗು ಜಿಲ್ಲೆಯಲ್ಲಿ ಕಳೆದ ಐದಾರು ದಿನಗಳಿಂದ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಸುಮಾರು…