Advertisement
ವಿಶೇಷ ವರದಿಗಳು

ಕೆಸರಿನಲ್ಲಿ ಮಿಂದೆದ್ದ ಬಾಳಿಲ ಶಾಲೆಯ ಮಕ್ಕಳು..! “ಕೈ ಕೆಸರಾದರೆ ಬಾಯಿ ಮೊಸರು” ಎಂದ ಪುಟಾಣಿಗಳು…

Share

ಬಾಳಿಲ: ಶಾಲೆಯಲ್ಲಿ  ನಿರ್ಮಾಣ ಮಾಡಿದ ಗದ್ದೆ. ಈ ಗದ್ದೆಯೊಳಗೆ ಇಳಿದ ವಿದ್ಯಾರ್ಥಿಗಳು. “ಕೈ ಕೆಸರಾದರೆ ಬಾಯಿ ಮೊಸರು” ಎಂಬ ಗಾದೆಯ ನಿಜವಾದ ಅರ್ಥ ಕಲಿತ ಮಕ್ಕಳು. ಉಣ್ಣುವ ಮೊದಲು ರೈತನ ಕಷ್ಟ ಅರಿತ ಬಾಲಕರು… ಇದಿಷ್ಟು ಒಂದು ಗದ್ದೆಯೊಳಗಿನ ಸಣ್ಣ ಕತೆ….

Advertisement
Advertisement

ಗ್ರಾಮೀಣ ಕ್ರೀಡೆಗಳು, ಹಳ್ಳಿ ಆಟಗಳ ಸೊಗಡನ್ನು ತೋರಿಸುವಂತ ಆಟಗಳಿಗೆ ಬಾಳಿಲ ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಶಾಲೆಯು ಹೆಚ್ಚು ಉತ್ತೇಜಿಸುತ್ತಿದೆ. ಅದರ ಜೊತೆಗೆ ಕೃಷಿ ಬದುಕನ್ನೂ ಈ ಶಾಲೆ ತೆರೆದಿಡುತ್ತದೆ.ಗುರುವಾರ ಶಾಲೆಯ ಗದ್ದೆಯಲ್ಲಿ ನಡೆದ ಗದ್ದೆ ಕೆಸರು ಮಣ್ಣಿನ ಆಟವೇ ಸಾಕ್ಷಿ.

Advertisement

ಸುಳ್ಯ ತಾಲೂಕಿನ ಬಾಳಿಲದಲ್ಲಿರುವ ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಶಾಲೆಯ ಅಂಗಳದಲ್ಲಿ ಯಾವುದೇ ಆಟ, ಕೈದೋಟಗಳಿಗೆ ಉಪಯೋಗವಾದೆ ಉಳಿದಿದ್ದ ಮೂರು ಸೆಂಟ್ಸ್ ಜಾಗದಲ್ಲಿ ಎಸ್‍ಡಿಎಂಸಿ ಸಮಿತಿಯ ನೆರವಿನೊಂದಿಗೆ ಗದ್ದೆಯ ನಿರ್ಮಾಣ ಮಾಡಿದರು. ಅಕ್ಕಿ ಬೆಳೆಯುವ ರೈತನ ಕಷ್ಟವನ್ನು ಪ್ರತಿ ಹಂತದಿಂದಲೂ ಕಣ್ಣಾರೆ ಕಂಡು ಅನುಭವಿಸಿದ ಮಕ್ಕಳು ಅಕ್ಕಿ ಹೇಗೆ ಬೆಳೆಯಬಹುದು ಎಂಬುದನ್ನು ಇಲ್ಲಿನ 2 ನೇ ತರಗತಿ ಮಕ್ಕಳೂ ನಿರರ್ಗಳವಾಗಿ ಹೇಳಬಲ್ಲರು.

ಮಳೆ ತಡವಾಗಿ ಹಾಗು ನಿಧಾನವಾಗಿ ಬರುವ ಕಾರಣ ಪ್ರಸಕ್ತ ವರ್ಷ ತುಸು ತಡವಾಗಿ ಗದ್ದೆಯ ಕೆಲಸ ಆರಂಭವಾಗಿದೆ. ಮೊದಲನೇ ಹಂತದ ಉಳುಮೆಯನ್ನು ಟ್ರ್ಯಾಕ್ಟರ್ ಮೂಲಕ ಪೂರ್ಣಗೊಂಡಾಗ ಪ್ರತಿಯೊಂದು ಮಕ್ಕಳ ಮುಖದಲ್ಲಿಯೂ ಸಂತೃಪ್ತಿ ಭಾವನೆ ಕಾಣಿಸುತ್ತಿದ್ದವು. ನೀರಿನ ಅಭಾವ ಎದುರಾದಾಗ ಶಾಲೆಯ ಹಿರಿಯ ವಿದ್ಯಾರ್ಥಿ ಶ್ರೀನಾಥ್ ದೋಳ್ತೋಡಿ ತಮ್ಮ ಮನೆಯ ಪಂಪ್ ತಂದು ಶಾಲೆಯ ಬಾವಿಗೆ ಅಳವಡಿಸಿ ನೀರಿನ ವ್ಯವಸ್ಥೆ ಮಾಡಿಕೊಟ್ಟಾಗ ಮಕ್ಕಳಿಗೆ ಕೆಸರುಗದ್ದೆ ಆಟದ ತುಡಿತ ಹೆಚ್ಚಾಯಿತು.

Advertisement

ಭತ್ತದ ಬೇಸಾಯದ ನಂತರ ಶಾಲಾ ಎಸ್‍ಡಿಎಂಸಿ ಸಮಿತಿಯ ಅನುಮತಿ ಪಡೆದ ಮಕ್ಕಳು ಕೆಸರಿನಾಟಕ್ಕೆ ಧುಮುಕಿದರು. ಸಣ್ಣ ಮಕ್ಕಳು ಚಪ್ಪಾಳೆ ಶಿಳ್ಳೆಗಳ ಮೂಲಕ ಸಾಥ್ ನೀಡಿದರು. ಭತ್ತದ ಕೃಷಿ ಕೇವಲ ಹಿರಿಯರಿಗೆ ಸೀಮಿತವಾಗದೆ ತಾವು ಇದರಲ್ಲಿ ಆಸಕ್ತ ಮತ್ತು ಸಮರ್ಥರು ಎಂಬುದನ್ನು ಬಾಳಿಲ ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಮಕ್ಕಳು ಸಾಬೀತು ಮಾಡಿದರು. ತಾವು ಕೇವಲ ಪಠ್ಯಕ್ಕೆ ಸೀಮಿತವಾಗಿರದೆ ದೇಶದ ಪ್ರಧಾನ ಉದ್ಯೋಗ ಕೃಷಿಯ ಕುರಿತು ಹಾಗು ಅನ್ನ ನೀಡುವ ರೈತನ ಶ್ರಮವನ್ನು ಸ್ವತಃ ತಿಳಿದುಕೊಳ್ಳಲು ಉತ್ತೇಜಿಸಿದ್ದು ಶಿಕ್ಷಕರು ಎನ್ನುನ್ನಾತರೆ ಶಾಲಾ ವಿದ್ಯಾರ್ಥಿಗಳು.

ತಮಗೇ ಬೇಸಾಯವೇನೆಮದರೆ ತಿಳಿದಿರಲಿಲ್ಲ. ಆದರೆ ಕಳೆದೆರಡು ವರ್ಷದಿಂದ ಬೇಸಾಯವನ್ನು ಹಾಗು ಅಕ್ಕಿ ಬೆಳೆಯುವುದರಲ್ಲಿ ರೈತನ ಶ್ರಮವೇನೆಂದು ತಿಳಿಯಿತು. – ಜೀವನ್, ಶಾಲಾ ವಿದ್ಯಾರ್ಥಿ ನಾಯಕ

Advertisement

 

Advertisement

ಗದ್ದೆ  ಮಾಯವಾಗಿದ್ದು, ಅದರ ಸುಂದರ ಅನುಭವದಿಂದ ನಾವು ಮಕ್ಕಳನ್ನು ವಂಚಿತರನ್ನಾಗಿಸಿದ್ದೇವೆ. ನಮ್ಮ ಶಾಲೆಗೆ ಬರುವ ಮಕ್ಕಳು ಗದ್ದೆ ಬೇಸಾಯ ಮತ್ತು ಕೆಸರಿನಾಟದ ಸೊಬಗನ್ನು ಸವಿಯುವುದರಿಂದ ವಂಚಿತರಾಗಬಾರದು ಹಾಗು ಭತ್ತ ಬೇಸಾಯದ ಬಗ್ಗೆ ಇಂದಿನ ಮಕ್ಕಳಿಗೆ ಒಲವು ಮೂಡಿಸಿ ಭತ್ತ ಬೇಸಾಯ ಉಳಿಸಿಕೊಳ್ಳಬೇಕೆಂಬ ಹಂಬಲ ನಮ್ಮದು. – ಜಾಹ್ನವಿ ಕಾಂಚೋಡು, ಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ

04.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…

35 mins ago

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |

03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

1 day ago

ಬಿದಿರು ಕೃಷಿ | ತರಕಾರಿ ಕೃಷಿಯಾಗಿ ಬಿದಿರು

ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…

1 day ago

ಅಡಿಕೆ ಹಳದಿ ಎಲೆರೋಗ – ಚುನಾವಣೆ

ಅಡಿಕೆ ಕೂಡಾ ಇಂದು ಬಹುಮುಖ್ಯವಾದ ಚುನಾವಣಾ ವಿಷಯ. ಹೀಗಾಗಿ ಅಡಿಕೆ ಹಳದಿ ಎಲೆರೋಗ…

1 day ago

ವಾರದ ಅತಿಥಿ | ಸುಬ್ರಾಯ ಚೊಕ್ಕಾಡಿ ಮಾತು

https://youtu.be/Vh1tYlOKav0?si=M4grG9euj6dXmkE2 ರೂರಲ್ ಮಿರರ್‌ ವಾರದ ಅತಿಥಿಯಾಗಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರು…

1 day ago

ಮಕ್ಕಳ ಹಬ್ಬ…

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜದಲ್ಲಿ ಮಕ್ಕಳ ಬೇಸಿಗೆ ಶಿಬಿರ ಮಕ್ಕಳ…

1 day ago