ಸುಳ್ಯ: ನ.31ರಂದು ಸುಳ್ಯದ ಕೆ.ವಿ.ಜಿ.ಅಮರಜ್ಯೋತಿ ಪದವಿಪೂರ್ವ ಕಾಲೇಜಿನಲ್ಲಿ ಸುಳ್ಯ ತಾಲೂಕಿನ ವಿವಿಧ ಶಾಲೆಯ ವಿದ್ಯಾರ್ಥಿಗಳಿಗೆ ‘ಎಜುಸ್ಕೇಪ್’ 2019 ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಭಾ ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಕೆ.ವಿ.ಜಿ.ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎನ್.ಎ.ಜ್ಞಾನೇಶ್ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಇಂದು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ, ನೀವೆಲ್ಲರೂ ಇನ್ನೂ ಹೆಚ್ಚಿನ ನೂತನ ಆವಿಷ್ಕಾರಗಳನ್ನು ಕಂಡುಹಿಡಿದು ನಾಡಿಗೆ ಹೆಸರು ತರುವಂತಾಗಲಿ ಎಂದು ಶುಭ ಹಾರೈಸಿದರು.
ಸಭಾ ಕಾರ್ಯಕ್ರಮದ ಬಳಿಕ ಆವಿಷ್ಕಾರ್ ಎಂಬ ಶೀರ್ಷಿಕೆಯಡಿಯಲ್ಲಿ ನೂತನ ವಿಜ್ಞಾನ ಮಾದರಿ ತಯಾರಿ, ಗಾಜಿನ ಬಾಟಲಿಯ ಮೇಲೆ ಕಲಾತ್ಮಕ ಚಿತ್ರಣ, ಜನಪದ ಗೀತೆ, ಚರ್ಚಾಸ್ಪರ್ಧೆ, ಹಾಸ್ಯಾಭಿನಯ ಹಾಗೂ ಚಂದ್ರಯಾನ-2 ಎಂಬ ವಿಷಯದ ಕುರಿತಂತೆ ವಿಷಯ ಮಂಡನೆ ಇವೆಲ್ಲವುಗಳನ್ನೊಳಗೊಂಡ ವಿಶಿಷ್ಟ ಮಾದರಿಯ ಕಾರ್ಯಕ್ರಮಗಳು ಏಕಕಾಲದಲ್ಲಿ ನಾನಾ ವೇದಿಕೆಗಳಲ್ಲಿ ಮೂಡಿಬಂದವು. ಕೆ.ವಿ.ಜಿ. ಸಹಸಂಸ್ಥೆಯ ಅನೇಕ ಉಪನ್ಯಾಸಕರು ನಿರ್ಣಾಯಕರಾಗಿ ಆಗಮಿಸಿದ್ದರು. ಪ್ರಾಚಾರ್ಯರಾದ ಡಾ.ಯಶೋದಾ ರಾಮಚಂದ್ರ, ಉಪಪ್ರಾಚಾರ್ಯ ದೀಪಕ್.ವೈ.ಆರ್ ಉಪಸ್ಥಿತರಿದ್ದರು. ಜಾಕ್ವೆಲಿನ್ ಎಲಿಜಬೆತ್ ಜೋಸ್, ಸಾಬಿರಾ ಹಸನ್ ಹಾಗೂ ಆಯಿಷತ್ ಇರ್ಷಾದಾ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು.
ಸ್ಪರ್ಧಾ ವಿಜೇತರಿಗೆ ಅಪರಾಹ್ನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆ.ವಿ.ಜಿ.ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ. ಶ್ರೀಧರ್.ಕೆ ಅವರು ಹಸ್ತಾಂತರಿಸಿದರು. ಜೀವಶಾಸ್ತ್ರ ಮತ್ತು ಭೌತಶಾಸ್ತ್ರ ಉಪನ್ಯಾಸಕರಾದ ಧನಶ್ರೀ.ಕೆ ಹಾಗೂ ಭವ್ಯಾ.ಸಿ.ಟಿ. ಕಾರ್ಯಕ್ರಮದ ಸಂಯೋಜಕರಾಗಿ ಆರಂಭದಿಂದಲೂ ಅಹರ್ನಿಶಿ ಶ್ರಮಿಸಿದರು. ಇತರ ಎಲ್ಲ ಉಪನ್ಯಾಸಕರೂ ಸಹಕರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ಬೋಜನ ವ್ಯವಸ್ಥೆ ಮಾಡಲಾಗಿತ್ತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ಸ್ಪರ್ಧಾ ವಿಜೇತರ ವಿವರ ಇಂತಿದೆ.
(1) ಬಾಟಲ್ ಪೇಂಟಿಂಗ್ ನಲ್ಲಿ ಪ್ರಥಮ : ಅಪೂರ್ವ.ಪಿ.ಎ. ( ಕೆವಿಜಿ ಇಎಂಎಚ್‍ಎಸ್, ಸುಳ್ಯ), ದ್ವಿತೀಯ: ಪವನ್. (ಸ್ನೇಹ ಪ್ರೌಢಶಾಲೆ,ಸುಳ್ಯ), ತೃತೀಯ: ಅಮಿತ್.ಟಿ.ಎಸ್. (ಸತ್ಯ ಸಾಯಿ ವಿದ್ಯಾ ಕೇಂದ್ರ, ಚೊಕ್ಕಾಡಿ)
(2) ಟೆಕ್ ಅಂಡ್ ಟಾಕ್ ನಲ್ಲಿ ಪ್ರಥಮ : ಭೀಮ ಕಶ್ಯಪ್ (ಸತ್ಯ ಸಾಯಿ ವಿದ್ಯಾ ಕೇಂದ್ರ, ಚೊಕ್ಕಾಡಿ), ದ್ವಿತೀಯ: ವಸುದೇವ.ಡಿ.ಎಂ. (ಸತ್ಯ ಸಾಯಿ ವಿದ್ಯಾ ಕೇಂದ್ರ, ಚೊಕ್ಕಾಡಿ), ತೃತೀಯ: ಅಂಕಿತ್.ಡಿ.ಎ.( ಸೈಂಟ್ ಜೋಸೆಫ್, ಸುಳ್ಯ.)
(3) ಹಾಸ್ಯಾಭಿನಯದಲ್ಲಿ ಪ್ರಥಮ : ಪೃಥ್ವಿ . (ಕೆವಿಜಿಐಪಿಎಸ್,ಸುಳ್ಯ), ದ್ವಿತೀಯ: ಲಿಖಿತ್ (ಸ್ನೇಹ ಪ್ರೌಢಶಾಲೆ,ಸುಳ್ಯ)
(4) ಚರ್ಚಾಸ್ಪರ್ಧೆಯಲ್ಲಿ ಪ್ರಥಮ : ಶಾರಿಕಾ.ಕೆ.ಆರ್ (ಕೆವಿಜಿಐಪಿಎಸ್,ಸುಳ್ಯ), ದ್ವಿತೀಯ: ಕೋಮಲ್ (ಸತ್ಯ ಸಾಯಿ ವಿದ್ಯಾ ಕೇಂದ್ರ, ಚೊಕ್ಕಾಡಿ), ತೃತೀಯ: ವಿದ್ಯಾಶ್ರೀ (ಕೆವಿಜಿಐಪಿಎಸ್,ಸುಳ್ಯ)
(5) ವಿಜ್ಞಾನ ಮಾದರಿ ತಯಾರಿಯಲ್ಲಿ ಪ್ರಥಮ : ವಸುದೇವ.ಡಿ.ಎಂ ಮತ್ತು ಆರ್ಯ.ಎಸ್. (ಸತ್ಯ ಸಾಯಿ ವಿದ್ಯಾ ಕೇಂದ್ರ, ಚೊಕ್ಕಾಡಿ), ದ್ವಿತೀಯ: ತೀರ್ಥೇಶ್.ಕೆ ಮತ್ತು ದೀಪಕ್.ಡಿ.ಟಿ (ಕೆವಿಜಿ ಇಎಂಎಚ್‍ಎಸ್, ಸುಳ್ಯ), ತೃತೀಯ: ಪ್ರಜ್ವಲ್.ಕೆ.ಎಂ ಮತ್ತು ಪ್ರಣಾಮ್.ಎಂ.ಕೆ (ಸ್ನೇಹ ಪ್ರೌಢಶಾಲೆ,ಸುಳ್ಯ)
(6) ಜನಪದ ಗೀತೆಯಲ್ಲಿ ಪ್ರಥಮ : ಲಿಪಿಶ್ರೀ. (ಸೈಂಟ್ ಜೋಸೆಫ್, ಸುಳ್ಯ.), ದ್ವಿತೀಯ: ವಿದ್ಯಾಶ್ರೀ (ಕೆವಿಜಿಐಪಿಎಸ್,ಸುಳ್ಯ), ತೃತೀಯ: ದೀಕ್ಷಾ.ಯು.ಜಿ. ( ಸರ್ಕಾರಿ ಪ್ರೌಢಶಾಲೆ, ಎಣ್ಮೂರು)