ಸುಳ್ಯ: ಪ್ರತಿಷ್ಠಿತ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕರ್ನಾಟಕ, ಬೆಂಗಳೂರು ಫೆಬ್ರವರಿ- ಮಾರ್ಚ್ 2019ರಲ್ಲಿ ನಡೆಸಿದ ಅಂತಿಮ ವರ್ಷದ ಬಿ.ಎ.ಯಂ.ಎಸ್ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಕಾಲೇಜಿಗೆ ಶೇಕಡಾ 100 ಫಲಿತಾಂಶ ದಾಖಲಾಗಿದೆ.
ಅಂತಿಮ ವರ್ಷದ ಬಿ.ಎ.ಯಂ.ಎಸ್‍ನ 2014-2015ನೇ ಬ್ಯಾಚ್‍ನಲ್ಲಿ 35 ವಿದ್ಯಾರ್ಥಿಗಳು ಹಾಜರಾಗಿದ್ದು 19 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 16 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತೀರ್ಣರಾಗಿದ್ದಾರೆ.
ಕು.ಅಶೀನಾ ಶಾಹಿನ್ ಓ., ಪ್ರಥಮ, ಕು.ಅಂಜಲಿ ಯಂ.ಯಂ., ದ್ವಿತೀಯ, ಹಾಗೂ ಕು. ಅಂಜನಾಚಂದ್ರನ್ ತೃತೀಯ ಸ್ಥಾನವನ್ನು ಪಡಕೊಂಡಿದ್ದಾರೆ.
ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು, ಎ.ಓ.ಎಲ್.ಇ ಅಧ್ಯಕ್ಷ ಡಾ. ಚಿದಾನಂದ ಕೆ.ವಿ., ಎ.ಓ.ಎಲ್.ಇ ಖಜಾಂಜಿ ಶೋಭಾ ಚಿದಾನಂದ, ಎ.ಓ.ಎಲ್.ಇ ನಿರ್ದೇಶಕ ಅಕ್ಷಯ್ ಕೆ.ಸಿ., ಎ.ಓ.ಎಲ್.ಇ ನಿರ್ದೇಶಕ ಡಾ. ಐಶ್ವರ್ಯ ಕೆ.ಸಿ., ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಎಸ್. ಶೆಟ್ಟರ್, ಆಡಳಿತಾಧಿಕಾರಿ ಡಾ. ಲೀಲಾಧರ ಡಿ.ವಿ, ಕಚೇರಿ ಅಧೀಕ್ಷಕ ಚಂದ್ರಕುಮಾರ್ ಕುತ್ಯಾಳ ಅಭಿನಂದಿಸಿದ್ದಾರೆ.
ಅಡಿಕೆ ಎಲೆಚುಕ್ಕೆ ರೋಗಕ್ಕೆ ತಕ್ಷಣದ ಪರಿಹಾರವಿಲ್ಲ, 3 ವರ್ಷದ ಅಧ್ಯಯನದ ಬಳಿಕವೇ ಅಂತಿಮ…
ಸರ್ಕಾರದ ಸೌಲಭ್ಯ ಪಡೆಯಲು ರೈತರಿಗೆ ‘FRUITS ID’ ಕಡ್ಡಾಯ. ನೋಂದಣಿ ಮಾಡದಿದ್ದರೆ ಭವಿಷ್ಯದ…
ಗದಗ ಜಿಲ್ಲೆಯಲ್ಲಿ ಮುಂದಿನ 3-6 ದಿನ ತೀವ್ರ ಬಿಸಿಗಾಳಿ ಸಾಧ್ಯತೆ. ಸಾರ್ವಜನಿಕರು ಆರೋಗ್ಯದ…
ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್‌ಐ ಪ್ರಾತ್ಯಕ್ಷಿಕೆ ಮುಂದುವರಿದಿದೆ. ವೈಜ್ಞಾನಿಕ ಕ್ರಮಗಳು ಮತ್ತು…
ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ.…
ಕರ್ನಾಟಕದಲ್ಲಿ ಏಪ್ರಿಲ್ 6ರಿಂದ ಮಳೆ ಕಡಿಮೆಯಾಗಲಿದೆ. ರಾಜ್ಯಾದ್ಯಂತ ಬಿಸಿಲು ಮತ್ತು ತಾಪಮಾನ ಏರಿಕೆ…