ಸುಳ್ಯ:ಸುಳ್ಯದ ಕೆವಿಜಿ ಕಾನೂನು ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ನ.26ರಂದು ನಡೆಯಿತು. ಕಾನೂನು ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞಿ ಅಹ್ಮದ್ ಉದ್ಘಾಟಿಸಿದರು. ‘ವಿದ್ಯಾರ್ಥಿಗಳು ಅನ್ಯಾಯ, ಭ್ರಷ್ಟ ತೆ ಕಂಡು ಬಂದರೆ ಅದನ್ನು ವಿರೋಧಿಸಿ ಸಂವಿಧಾನದ ದಾರಿಯಲ್ಲಿ ನಡೆಯಬೇಕು’ ಎಂದು ಅವರು ಕರೆ ನೀಡಿದರು.
Advertisement
ಮುಖ್ಯ ಅತಿಥಿಯಾಗಿದ್ದ ವಕೀಲರ ಸಂಘದ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಮಾತನಾಡಿ “ಎಲ್ಲ ಧರ್ಮಗ್ರಂಥಗಳಿಂದ ಸಂವಿಧಾನ ಗ್ರಂಥ ಶ್ರೇಷ್ಠ ವಾದುದು. ಅದರ ಪಾಲನೆ ನಮ್ಮಲ್ಲಿ ಆಗಬೇಕು” ಎಂದು ಹೇಳಿದರು.
Advertisement
ಕಾಲೇಜಿನ ಪ್ರಾಂಶುಪಾಲ ಉದಯಕೃಷ್ಣ.ಬಿ ಅಧ್ಯಕ್ಷತೆ ವಹಿಸಿದ್ದರು. ಎನ್ನೆಂಸಿ ವಿಶ್ರಾಂತ ಪ್ರಾಂಶುಪಾಲ ಪ್ರೊ. ಬಾಲಚಂದ್ರ ಗೌಡ ಅತಿಥಿಯಾಗಿದ್ದರು. ಕಾನೂನು ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಟೀನಾ ಹೆಚ್.ಎಸ್., ಉಪನ್ಯಾಸಕ ಕೌಶಿಕ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement