ಕೆ.ವಿ.ಜಿ.ಪಾಲಿಟೆಕ್ನಿಕ್ : ಸರ್ವ್ ತರಬೇತಿ ಕಾರ್ಯಕ್ರಮ

September 10, 2019
7:00 PM

ಸುಳ್ಯ: ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ದಕ್ಷಿಣಕನ್ನಡ ಜಿಲ್ಲಾಘಟಕದ ವತಿಯಿಂದ ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್‍ನ ಯುವರೆಡ್‍ ಕ್ರಾಸ್ ಹಾಗೂ ಎನ್ನೆಸ್ಸೆಸ್‍ ಘಟಕ ಹಾಗೂ ನೆಹರೂ ಮೆಮೋರಿಯಲ್‍ ಕಾಲೇಜಿನ ಯುವರೆಡ್‍ಕ್ರಾಸ್ ಘಟಕಗಳ ಸಹಯೋಗದೊಂದಿಗೆ ಸರ್ವ್(ಸೋಸಿಯಲ್ ಎಮೆರ್ಜೆನ್ಸಿರೆಸ್ಪಾನ್ಸ್ ವೊಲಂಟೀಯರ್) ತರಬೇತಿ ಶಿಬಿರವು ಕೆ.ವಿ.ಜಿ.ಪಾಲಿಟೆಕ್ನಿಕ್‍ನಲ್ಲಿ ನಡೆಯಿತು.

Advertisement
Advertisement

ಪಾಲಿಟೆಕ್ನಿಕ್ ಪ್ರಾಂಶುಪಾಲ ಬಾಲಕೃಷ್ಣ ಗೌಡ ಬೊಳ್ಳೂರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಪೃಕೃತಿ ವಿಕೋಪಗಳ ಸಂಧರ್ಭದಲ್ಲಿ ಜನರನ್ನು ರಕ್ಷಿಸುವ ಜೊತೆಗೆ ಸ್ವಯಂರಕ್ಷಣೆಯನ್ನೂ ಮಾಡಿಕೊಳ್ಳುವ ಚಾಕಚಕ್ಯತೆಯನ್ನುಇಂತಹ ಶಿಬಿರಗಳಲ್ಲಿ ಕಲಿಯಲು ಸಾಧ್ಯಎಂದು ಹೇಳಿದರು.

ಸಮಾರಂಭವನ್ನು ಉದ್ಘಾಟಿಸಿದ ಉಪಪ್ರಾಂಶುಪಾಲ ಜಯಪ್ರಕಾಶ್ ಕೆ ಮಾತನಾಡಿ ಇಲ್ಲಿತರಬೇತಿ ಪಡೆದ 30 ಜನರ ತಂಡ ಸಮಾಜದಲ್ಲಿ ಇತರರಿಗೂ ಈ ತರಬೇತಿಯನ್ನು ನೀಡುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಭಾರತೀಯರೆಡ್‍ಕ್ರಾಸ್ ಸಂಸ್ಥೆಯ ದ.ಕ ಜಿಲ್ಲಾ ಘಟಕದ ಸರ್ವ್‍ತರಬೇತಿ ಸಂಚಾಲಕ ಸಚೇತ್ ಸುವರ್ಣ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಎನ್ನೆಸ್ಸೆಸ್‍ ಘಟಕದ ಕಾರ್ಯಕ್ರಮಾಧಿಕಾರಿ ಸುನಿಲ್ ಕುಮಾರ್‍ಎನ್.ಪಿ, ತರಬೇತುದಾರರಾದ ಅಶ್ವಿನ್‍ಕುಮಾರ್ ಮತ್ತು ಗ್ಲೋರಿಯಾ ರೋಡ್ರಿಗಸ್ ಉಪಸ್ಥಿತರಿದ್ದರು.

ಪಾಲಿಟೆಕ್ನಿಕ್ ಎನ್ನೆಸ್ಸೆಸ್‍ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಸ್ವಾಗತಿಸಿ ನೆಹರೂ ಮೆಮೋರಿಯಲ್‍ ಕಾಲೇಜಿನ ರೆಡ್‍ಕ್ರಾಸ್‍ ಕಾರ್ಯಕ್ರಮಾಧಿಕಾರಿ ಡಾ.ಅನುರಾಧಾ ಕುರುಂಜಿ ವಂದಿಸಿದರು .

Advertisement

ಉದ್ಘಾಟನಾ ಸಮಾರಂಭದ ನಂತರ ಸಚೇತ್ ಸುವರ್ಣ ತಂಡದವರಿಂದ ವಿವಿಧ ಸಂದರ್ಭಗಳಲ್ಲಿ ಅಂದರೆ ಹೃದಯಾಘಾತ, ಅಪಸ್ಮಾರ, ರಸ್ತೆಅಪಘಾತ, ನಾಯಿ ಕಡಿತ, ಹಾವು ಕಡಿತ, ಇತ್ಯಾದಿ ಸಂದರ್ಭದಲ್ಲಿನ ಡೆಸುವ ಪ್ರಥಮ ಚಿಕಿತ್ಸೆಹಾಗೂ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಜನರನ್ನುರಕ್ಷಿಸುವ ಬಗ್ಗೆ ಎರಡು ದಿನಗಳ ಪ್ರಾಯೋಗಿಕ ತರಬೇತಿ ನಡೆಯಿತು.ಕೆವಿಜಿ ಪಾಲಿಟೆಕ್ನಿಕ್ ಮತ್ತು ನೆಹರೂ ಮೆಮೋರಿಯಲ್‍ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ತರಬೇತಿಯಲ್ಲಿ ಭಾಗವಹಿಸಿದರು.

 

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕರೆಂಟ್ ಹೊದ ಕೂಡ್ಲೆ ಬೊಬ್ಬೆ ಹೊಡೆಯೋದು ಯಾಕೆ..!?
May 25, 2025
9:29 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಮಳೆ Update | ಕರಾವಳಿ ಜಿಲ್ಲೆಯಲ್ಲಿ ವ್ಯಾಪಕ ಮಳೆ | ಹಲವು ಕಡೆ 100 ಮಿಮೀಗಿಂತಲೂ ಅಧಿಕ ಮಳೆ | ಉಡುಪಿಯಲ್ಲಿ 164 ಮಿಮೀ ಮಳೆ |
May 25, 2025
9:07 AM
by: ದ ರೂರಲ್ ಮಿರರ್.ಕಾಂ
ಬಿತ್ತನೆ ಬೀಜ ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ
May 25, 2025
6:13 AM
by: The Rural Mirror ಸುದ್ದಿಜಾಲ
ರೈತರು ಉತ್ತಮ ಇಳುವರಿ ಪಡೆಯಲು ಸಂಯುಕ್ತ ರಸಗೊಬ್ಬರ ಬಳಸುವಂತೆ ಕೃಷಿ ಇಲಾಖೆ ಸೂಚನೆ
May 25, 2025
6:05 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group