ಸುಳ್ಯ: ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ದಕ್ಷಿಣಕನ್ನಡ ಜಿಲ್ಲಾಘಟಕದ ವತಿಯಿಂದ ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್‍ನ ಯುವರೆಡ್ ಕ್ರಾಸ್ ಹಾಗೂ ಎನ್ನೆಸ್ಸೆಸ್ ಘಟಕ ಹಾಗೂ ನೆಹರೂ ಮೆಮೋರಿಯಲ್ ಕಾಲೇಜಿನ ಯುವರೆಡ್‍ಕ್ರಾಸ್ ಘಟಕಗಳ ಸಹಯೋಗದೊಂದಿಗೆ ಸರ್ವ್(ಸೋಸಿಯಲ್ ಎಮೆರ್ಜೆನ್ಸಿರೆಸ್ಪಾನ್ಸ್ ವೊಲಂಟೀಯರ್) ತರಬೇತಿ ಶಿಬಿರವು ಕೆ.ವಿ.ಜಿ.ಪಾಲಿಟೆಕ್ನಿಕ್‍ನಲ್ಲಿ ನಡೆಯಿತು.
ಪಾಲಿಟೆಕ್ನಿಕ್ ಪ್ರಾಂಶುಪಾಲ ಬಾಲಕೃಷ್ಣ ಗೌಡ ಬೊಳ್ಳೂರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಪೃಕೃತಿ ವಿಕೋಪಗಳ ಸಂಧರ್ಭದಲ್ಲಿ ಜನರನ್ನು ರಕ್ಷಿಸುವ ಜೊತೆಗೆ ಸ್ವಯಂರಕ್ಷಣೆಯನ್ನೂ ಮಾಡಿಕೊಳ್ಳುವ ಚಾಕಚಕ್ಯತೆಯನ್ನುಇಂತಹ ಶಿಬಿರಗಳಲ್ಲಿ ಕಲಿಯಲು ಸಾಧ್ಯಎಂದು ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿದ ಉಪಪ್ರಾಂಶುಪಾಲ ಜಯಪ್ರಕಾಶ್ ಕೆ ಮಾತನಾಡಿ ಇಲ್ಲಿತರಬೇತಿ ಪಡೆದ 30 ಜನರ ತಂಡ ಸಮಾಜದಲ್ಲಿ ಇತರರಿಗೂ ಈ ತರಬೇತಿಯನ್ನು ನೀಡುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಭಾರತೀಯರೆಡ್‍ಕ್ರಾಸ್ ಸಂಸ್ಥೆಯ ದ.ಕ ಜಿಲ್ಲಾ ಘಟಕದ ಸರ್ವ್‍ತರಬೇತಿ ಸಂಚಾಲಕ ಸಚೇತ್ ಸುವರ್ಣ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಎನ್ನೆಸ್ಸೆಸ್ ಘಟಕದ ಕಾರ್ಯಕ್ರಮಾಧಿಕಾರಿ ಸುನಿಲ್ ಕುಮಾರ್‍ಎನ್.ಪಿ, ತರಬೇತುದಾರರಾದ ಅಶ್ವಿನ್‍ಕುಮಾರ್ ಮತ್ತು ಗ್ಲೋರಿಯಾ ರೋಡ್ರಿಗಸ್ ಉಪಸ್ಥಿತರಿದ್ದರು.
ಪಾಲಿಟೆಕ್ನಿಕ್ ಎನ್ನೆಸ್ಸೆಸ್‍ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಸ್ವಾಗತಿಸಿ ನೆಹರೂ ಮೆಮೋರಿಯಲ್ ಕಾಲೇಜಿನ ರೆಡ್‍ಕ್ರಾಸ್ ಕಾರ್ಯಕ್ರಮಾಧಿಕಾರಿ ಡಾ.ಅನುರಾಧಾ ಕುರುಂಜಿ ವಂದಿಸಿದರು .
ಉದ್ಘಾಟನಾ ಸಮಾರಂಭದ ನಂತರ ಸಚೇತ್ ಸುವರ್ಣ ತಂಡದವರಿಂದ ವಿವಿಧ ಸಂದರ್ಭಗಳಲ್ಲಿ ಅಂದರೆ ಹೃದಯಾಘಾತ, ಅಪಸ್ಮಾರ, ರಸ್ತೆಅಪಘಾತ, ನಾಯಿ ಕಡಿತ, ಹಾವು ಕಡಿತ, ಇತ್ಯಾದಿ ಸಂದರ್ಭದಲ್ಲಿನ ಡೆಸುವ ಪ್ರಥಮ ಚಿಕಿತ್ಸೆಹಾಗೂ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಜನರನ್ನುರಕ್ಷಿಸುವ ಬಗ್ಗೆ ಎರಡು ದಿನಗಳ ಪ್ರಾಯೋಗಿಕ ತರಬೇತಿ ನಡೆಯಿತು.ಕೆವಿಜಿ ಪಾಲಿಟೆಕ್ನಿಕ್ ಮತ್ತು ನೆಹರೂ ಮೆಮೋರಿಯಲ್‍ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ತರಬೇತಿಯಲ್ಲಿ ಭಾಗವಹಿಸಿದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…