ಬಳ್ಪ: ದೇವರ ವಿವಿಧ ರೂಪಗಳಲ್ಲಿ ಶ್ರೀ ಲಕ್ಷ್ಮಿ ನರಸಿಂಹ ದೇವರು ಒಂದು. ನರಸಿಂಹ ದೇವರು ಸ್ಥಂಭಮೂರ್ತಿಯಾಗಿ ದಿವ್ಯವಾಗಿ ಅವತರಿಸಿರುವರು. ನರಸಿಂಹ ದೇವರ ಉಪಾಸನೆಗೆ ಅಪಾರ ಶಕ್ತಿ ಹಾಗೂ ಅನಂತ ಪ್ರಭೆ ಇದೆ ಎಂದು ಸುಬ್ರಹ್ಮಣ್ಯ ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳು ಹೇಳಿದರು.
ಅವರು ಕೇನ್ಯ ಗ್ರಾಮದ ಲಕ್ಷ್ಮೀ ನರಸಿಂಹ ದೇವರು ಕಾಯಂಬಾಡಿ ಮಠದ ನೂತನ ಆಲಯ ನಿರ್ಮಾಣಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಆಶಿರ್ವಚನ ನೀಡಿದರು. ಸೂರ್ಯನ ಬೆಳಕಿನ ಕಿರಣಗಳಲ್ಲಿ ಸಕಾರಾತ್ಮಕ ಶಕ್ತಿ ಇರುತ್ತವೆ, ಸೂರ್ಯನ ಕಿರಣಗಳು ಭೂಮಿಯ ಮೇಲೆ ಹರಿಯುವ ಸಂದರ್ಭ ಅದು ಶುಭಮುಹೂರ್ತ. ಈ ಕಾಲದಲ್ಲಿ ಜರಗುವ ಎಲ್ಲ ಕಾರ್ಯಗಳು ಯಶಸ್ವಿಯಾಗುತ್ತವೆ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಶ್ರೀ ಸರಸ್ವತಿ ವಿದ್ಯಾಲಯದ ಸಂಚಾಲಕ ಅವಿನಾಶ್ ಕೊಡಂಕೆರಿ,” ಪರಮಾತ್ಮನ ಆರಾಧನೆಯಿಂದ ಭಕ್ತರು ಬದುಕಿನಲ್ಲಿ ಸರಿಯಾದ ಪಥವನ್ನು ಹಿಡಿಯಲು ಸಾಧ್ಯ. ಇದಕ್ಕೆ ಆಲಯಗಳ ಅಗತ್ಯವಿದೆ. ಗ್ರಾಮದ ಸುಭೀಕ್ಷೆ ಹಾಗೂ ಸಮೃದ್ಧ ಆಕಾಂಕ್ಷೆಗೆ ದೇಗುಲಗಳ ನಿರ್ಮಾಣ ಆಗಬೇಕಿದೆ” ಎಂದರು.
ಸತ್ಯನಾರಾಯಣ ಭಟ್ ಕಾಯಂಬಾಡಿ ಪ್ರಸ್ತಾವನೆಗೈದರು. ಉದ್ಯಮಿ ಕೆ.ಅಚ್ಚುತ ಭಟ್ ಸಭಾಧ್ಯಕ್ಷತೆ ವಹಿಸಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಕೆ. ರವೀಂದ್ರ ಶೆಟ್ಟಿ, ನಿವೃತ್ತ ತಹಶೀಲ್ದಾರ್ ಜಿ. ಗೆಜ್ಜೆ ತಮ್ಮಯ್ಯ ಗೌಡ, ಉದ್ಯಮಿ ಸದಾನಂದ ರೈ ಅರ್ಗುಡಿ, ಕಾರ್ಕಳದ ಪ್ರಕೃತಿ ಸ್ಟೋನ್ ಕ್ರಾಪ್ಟ್ ಮಾಲಕ ಪ್ರದೀಪ್ ಪಾಠಕ್, ಬಳ್ಪ ಕುಂಜತ್ತಾಡಿ ಶ್ರೀ ವನದುರ್ಗಾ ದೇವಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಲಕೃಷ್ಣ ರೈ ಬಿರ್ಕಿ, ಕಣ್ಕಲ್ ಬೀಡಿನ ರವಿ ಅಮ್ಮಣ್ಣಾಯ, ಯುವರಾಜ ಕಣ್ಕಲ್ಲು ಮುಖ್ಯ ಅತಿಥಿಗಳಾಗಿದ್ದರು.
ತಂತ್ರಿಗಳಾದ ರವಿಕುಮಾರ ಆಚಾರ್ಯ ಕಾರ್ಕಳ ಅವರ ನೇತೃತ್ವದಲ್ಲಿ ವೈದಿಕ ವಿಧಿವಿಧಾನಗಳು ನಡೆದವು.
ಪ್ರಕಾಶ್ ಭಟ್ ವಂದಿಸಿ ಕೃಷ್ಣ ವೈಲಾಯ ಕಾರ್ಯಕ್ರಮ ನಿರೂಪಿಸಿದರು.
23.12.24ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
22.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
ಒಡಿಶಾ ರಾಜ್ಯ ಸರ್ಕಾರವು ಕೃಷಿಯಲ್ಲಿ ಹೊಸವಿಧಾನಗಳ, ಪರ್ಯಾಯ ಕೃಷಿಯ ಪಾತ್ರವನ್ನು ಪರೋಕ್ಷವಾಗಿ ಕೃಷಿಕರಿಗೆ…
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್…
ಗದಗ ಜಿಲ್ಲೆಯ ಹುಲಕೋಟಿ ಗ್ರಾಮದ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಮಾಡಲಗೇರಿ ಗ್ರಾಮದಲ್ಲಿ…
ಹವಾಮಾನದ ಕಾರಣದಿಂದ ಕೃಷಿ ಹಾನಿ ಉಂಟಾಗಿ ನಷ್ಟವಾದ ಸಂದರ್ಭದಲ್ಲಿ ಅಥವಾ ಬೆಲೆ ಕುಸಿತದಂತಹ…