ಮಡಿಕೇರಿ : ಕಣ್ ಸನ್ನೆಯ ವೀಡಿಯೋ ವೈರಲ್ ಆಗಿ ದೇಶದ ಎಲ್ಲೆಡೆ ಪ್ರಸಿದ್ಧವಾದ ಕೇರಳದ ಯುವನಟಿ ಪ್ರಿಯಾ ವಾರಿಯರ್ ಕೊಡಗಿನ ನಿಸರ್ಗಧಾಮಕ್ಕೆ ಭೇಟಿ ನೀಡಿದರು.
ನೆರೆಪ್ರವಾಹದ ಗುಂಗಿನಿಂದ ಪ್ರವಾಸಿಗರನ್ನು ಹೊರತರಲು ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ನವರು ಎನ್.ಟಿ.ಸಿ ಗೆ ಭೇಟಿ ನೀಡಲೆಂದು ಆಹ್ವಾನಿಸಿದ ಹಿನ್ನಲೆ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಗೆ ಭೇಟಿ ಕೊಟ್ಟ ಪ್ರಿಯಾ ವಾರಿಯರ್, ಕೊಡಗಿನ ಜನತೆ ಒಗ್ಗಟ್ಟಿನಿಂದ ಇರಬೇಕು. ಕೊಡಗಿನ ಜನತೆ ಸತತ ಎರಡನೇ ಭಾರಿ ಪ್ರವಾಹವನ್ನು ಎದಿರಿಸುತ್ತಿದ್ದು, ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಸಹಾಯ ಮಾಡುವುದರ ಮೂಲಕ ಒಗ್ಗಟ್ಟಿನಿಂದಿರಬೇಕು ಎಂದರು.
ಕೊಡಗಿಗೆ ಮೂರನೇ ಭಾರಿ ಭೇಟಿ ಮಾಡುತ್ತಿರುವ ಅವರು, ಕೊಡಗಿನಲ್ಲಿ ರಮಣೀಯವಾದ ಹಾಗೂ ಅದ್ಭುತವಾದ ಪ್ರವಾಸಿ ತಾಣಗಳಿವೆ. ಪ್ರವಾಹದ ಗುಂಗಿನಲ್ಲಿರುವ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕೊಡಗಿಗೆ ಆಗಮಿಸಿ ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಎಂದರು. ಕೊಡಗಿನ ಜನತೆ ಪ್ರವಾಸಿಗರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿರುವುದು ತುಂಬಾ ಸಂತೋಷವಾಗುತ್ತಿದೆ. “ವಿಸಿಟ್ ಟು ಸೇಫ್ ಆಂಡ್ ಪೀಸ್ ಕೂರ್ಗ್” ಎಂದು ಪ್ರಿಯಾ ವಾರಿಯರ್ ಪ್ರವಾಸಿಗರಿಗೆ ಕರೆ ನೀಡಿದರು.
ಮುಂದೆ ಬಿಡುಗಡೆಯಾಗಲಿರುವ ಚಿತ್ರದ ಬಗ್ಗೆ ಮಾತನಾಡಿದ ಅವರು, ಹಿಂದಿ, ತೆಲುಗು, ಹಾಗು ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಮಾಡುತ್ತಲಿದ್ದೇನೆ. ‘ಅಡಾರ್ ಲವ್’ ಮಲಯಾಳಂ ಚಿತ್ರಕ್ಕೆ ನೀಡಿದ ಬೆಂಬಲವನ್ನು ನನ್ನ ಮುಂದಿನ ಸಿನಿಮಾಗಳಿಗೂ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದರು.
ಈ ಸಂದರ್ಭ ಪ್ರಿಯಾ ವಾರಿಯರ್ ಅಭಿಮಾನಿಗಳು ನಟಿಯೊಡನೆ ಸೆಲ್ಫಿ ತೆಗೆದುಕೊಂಡು ಆನಂದಿಸಿದರು. ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತೊಮ್ಮೆ ಕಣ್ ಸನ್ನೆಯನ್ನು ಮಾಡಿ ಸಾರ್ವಜನಿಕರಿಗೆ ಮನೋರಂಜನೆ ನೀಡಿದರು.
ನಿಸರ್ಗಧಾಮ ಟೂರಿಸ್ಟ್ ಸೆಂಟರ್ ನ ಸ್ಪೈಸಸ್ ಮಳಿಗೆ, ಬಟ್ಟೆ ಮಳಿಗೆ, ಹಾಗೂ ಫ್ಯಾನ್ಸಿ ಮಳಿಗೆಗಳಿಗೆ ಭೇಟಿ ಶಾಪಿಂಗ್ ಮಾಡಿದರು.ಈ ಸಂದರ್ಭ ಪ್ರಿಯಾ ವಾರಿಯರ್ ಸ್ನೇಹಿತರು ಇದ್ದರು.
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…
ಕರ್ನಾಟಕದ ಹಲವೆಡೆ ಕಾಫಿ ನವೋದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸಿ, ಸ್ವ ಸಹಾಯ ಗುಂಪುಗಳ ಸುಮಾರು…
ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ. …