ಕೇಶವಕೃಪಾ ಉಚಿತ ವೇದ ಯೋಗ ಶಿಬಿರ ಉದ್ಘಾಟನೆ ವೇದಗಳ ಅಧ್ಯಯನದಿಂದ ಬದುಕಿಗೆ ಆಧಾರ- ವಿದ್ವಾನ್ ಗಜಾನನ ಭಟ್

April 22, 2019
4:18 AM

ಸುಳ್ಯ: ವೇದ ಅಂದರೆ ಅದು ಗೊಡ್ಡು ಸಂಪ್ರದಾಯ ಅಲ್ಲ, ವೇದಗಳ ಅಧ್ಯಯನವು ಬದುಕಿಗೆ ಆಸರೆಯನ್ನೂ ಆಧಾರವನ್ನೂ ನೀಡುತ್ತದೆ ಎಂದು ಸಾಗರದ ಗಜಾನನ ಸಂಸ್ಕೃತ ಪಾಠಶಾಲೆಯ ಉಪನ್ಯಾಸಕ ವಿದ್ವಾನ್ ಗಜಾನನ ಭಟ್ಟ ರೇವಣಕಟ್ಟ ಹೇಳಿದ್ದಾರೆ.
ಸುಳ್ಯ ಹಳೆಗೇಟಿನ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ಒಂದು ತಿಂಗಳ ಕಾಲ ನಡೆಯುವ ಶ್ರೀ ಕೇಶವ ಕೃಪಾ ವೇದ-ಯೋಗ-ಕಲಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ದಿಕ್ಸೂಚಿ ಉಪನ್ಯಾಸ ನೀಡಿದರು. ನಮ್ಮಲ್ಲಿ ಶ್ರಮದ ದುಡಿಮೆ, ಪ್ರಯತ್ನಗಳು ಮಾಯವಾಗಿದೆ, ಶ್ರಮದಿಂದ ಬಂದ ಫಲ ಮಾತ್ರ ಶಾಶ್ವತವಾದುದು. ವೇದಗಳ ಅಧ್ಯಯನಕ್ಕೆ ನಿರಂತರ ಶ್ರಮ ಅಗತ್ಯ ಎಂದು ಅವರು ಹೇಳಿದರು. ಹಲವಾರು ಮುಖವಾಡಗಳ ಮೂಟೆ ಮನುಷ್ಯನ ಹೃದಯ ಎಂದು ಬಣ್ಣಿಸಿದ ಅವರು ನಮ್ಮ ಜೀವ ಮತ್ತು ಆತ್ಮ ಎಂಬುದು ಭಗವಂತನ ಪ್ರತಿರೂಪ ಎಂಬ ನಂಬಿಕೆ ಇದೆ. ಆದುದರಿಂದ ಅಂತಹಾ ಜೀವವನ್ನು ಪಡೆದ ಮನುಷ್ಯನಲ್ಲಿ ಭಗವಂತನ ಚೈತನ್ಯವೂ ಬರುವಂತಾಗಬೇಕು ಎಂದರು. ಭಾರತದ ಪರಂಪರೆಯಾದ ವೇದ, ಯೋಗ, ಕಲೆ ಎಲ್ಲವೂ ಬೆಳೆಯಬೇಕು. ಭಾರತೀಯ ಕಲೆಗಳು ಆತ್ಮಕ್ಕೆ ನೆಮ್ಮದಿಯನ್ನು ನೀಡುತ್ತದೆ. ಆದುದರಿಂದ ಕಲೆಗಳ ಉಳಿವು ಅತೀ ಅಗತ್ಯ ಎಂದು ಅವರು ಹೇಳಿದರು.
ಶ್ರೀ ಕೇಶವಕಿರಣ ಛಾತ್ರಾ ನಿವಾಸ ನಿರ್ಮಾಣ ಸಮಿತಿಯ ಅಧ್ಯಕ್ಷ ಶಂಕರ ಭಟ್ ಕೆ. ಪುತ್ತೂರು ಶಿಬಿರವನ್ನು ಉದ್ಘಾಟಿಸಿದರು. ಶಿಕ್ಷಣ ಇಲಾಖೆಯ ರಾಜ್ಯ ಯೋಗ ಸಂಪನ್ಮೂಲ ವ್ಯಕ್ತಿ ಎಂ.ಎಸ್. ನಾಗರಾಜ ರಾವ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕಿ ಗಂಗಮ್ಮ ಕೋಲ್ಚಾರ್ ಮುಖ್ಯ ಅತಿಥಿಯಾಗಿದ್ದರು. ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷ ಗೋಪಾಲಕೃಷ್ಣ ಭಟ್ ವಗೆನಾಡು ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ಸ್ವಾಗತಿಸಿ ಪ್ರಸ್ತಾವನೆಗೈದರು. ಅಭಿರಾಮ್ ಭಟ್ ಮತ್ತು ತಂಡ ಪ್ರಾರ್ಥಿಸಿದರು. ಸುದರ್ಶನ ಭಟ್ ಉಜಿರೆ ವಂದಿಸಿದರು. ಶ್ರೀದೇವಿ ನಾಗರಾಜ ಭಟ್ ಕಾರ್ಯಕ್ರಮ ನಿರೂಪಿಸಿದರು. ರಾಮಚಂದ್ರ ಭಟ್ ಕುಂಬ್ರ, ನಟರಾಜ ಶರ್ಮ ಮತ್ತಿತರರು ಸಹಕರಿಸಿದರು.
ಒಂದು ತಿಂಗಳ ಉಚಿತ ಶಿಬಿರ:
ಏ.21ರಿಂದ ಮೇ.21ರವರೆಗೆ ನಡೆಯುವ ಶಿಬಿರದಲ್ಲಿ ವೇದ ಮತ್ತು ಯೋಗದ ಜೊತೆಗೆ ಕಲಾ ಪ್ರಕಾರಗಳಾದ ಯಕ್ಷಗಾನ, ಕಂಸಾಳೆ, ಜಾದೂ, ಭಜನೆ, ಸಂಗೀತ, ಪೇಪರ್ ಕಟ್ಟಿಂಗ್, ಮಿಮಿಕ್ರಿ ಮೊದಲಾದ ಸೃಜನಶೀಲ ಕಲೆಗಳನ್ನು ಶಿಬಿರಾರ್ಥಿಗಳಿಗೆ ಪರಿಚಯಿಸುವುದರೊಂದಿಗೆ ಭಗವದ್ಗೀತೆ, ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ ಮುಂತಾದ ಶ್ಲೋಕಗಳನ್ನು ಸ್ಫುಟವಾಗಿ ಪಠಿಸುವ ಸಾಂಪ್ರದಾಯಿಕ ವಿಧಾನ, ಸುಭಾಷಿತಗಳು, ಆದರ್ಶ ದಿನಚರಿ ರೂಪಿಸಿಕೊಳ್ಳುವ ಬಗೆ, ನೈತಿಕ ಶಿಕ್ಷಣ, ಮಾನವೀಯ ಮೌಲ್ಯಗಳು ಮುಂತಾದ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಕಲಿಸಲಾಗುತ್ತದೆ. 30 ದಿನಗಳ ಕಾಲ ಸಂಪೂರ್ಣ ಉಚಿತವಾಗಿ ನಡೆಯುವ ಹತ್ತೊಂಭತ್ತನೇ ವರ್ಷದ ವೇದ-ಯೋಗ-ಕಲಾ ಶಿಬಿರದಲ್ಲಿ ರಾಜ್ಯ ಹಾಗೂ ಹೊರರಾಜ್ಯದ ಆಯ್ಕೆಯಾದ 120 ಶಿಬಿರಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಅಶನ, ವಸನ, ವಸತಿ, ಪಠ್ಯಪುಸ್ತಕಗಳು, ವ್ಯಾಸಪೀಠ ಇತ್ಯಾದಿಗಳನ್ನು ನೀಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ತಿಳಿಸಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

Team the rural mirror

ಇದನ್ನೂ ಓದಿ

“ಮಹಿಳೆಯರಿಗೆ ಶಕ್ತಿ ನೀಡಿದರೆ ಕೃಷಿ ಬಲವಾಗುತ್ತದೆ..!” | ವಿಶ್ವದ ಗಮನ ಸೆಳೆಯುತ್ತಿದೆ ಇನ್‌ಕ್ಲೂಸಿವ್‌ ಅಗ್ರಿಕಲ್ಚರ್‌ ಮಾದರಿ
March 31, 2026
6:31 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಆಮದು ಎಂಬ ‘ಮಾಯಾಜಾಲ’: ನಡೆಯುತ್ತಿದೆಯೇ ಬೆಳೆಗಾರರ ಮೇಲೆ ಸೈಕಲಾಜಿಕಲ್ ಅಟ್ಯಾಕ್…!?
March 23, 2026
8:55 PM
by: ಅರುಣ್‌ ಕುಮಾರ್ ಕಾಂಚೋಡು
ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆ | ಮೌನದ ಹಿಂದೆ ಅಡಗಿರುವ ದರ ಚಲನೆಯ ಸಂಕೇತಗಳು
March 22, 2026
6:19 AM
by: ಅರುಣ್‌ ಕುಮಾರ್ ಕಾಂಚೋಡು
₹5 ಕೂಲಿಯಿಂದ ₹15 ಕೋಟಿ ಕೃಷಿ ಉದ್ಯಮದವರೆಗೆ…! ಈಗ ಆಕ್ಸ್‌ಫರ್ಡ್‌ AI ಸಮ್ಮೇಳನದಲ್ಲಿ ಭಾರತೀಯ ರೈತನ ಭಾಷಣ..!
March 20, 2026
8:42 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror