ಕೈಬರಹವೆಂದರೆ ಬರಿಯ ಅಕ್ಷರವಲ್ಲ…..!

July 6, 2019
1:00 PM
ಮಕ್ಕಳು ಬರೆಯಲು ಸುರು ಮಾಡಿದರೆ  ನಮಗೇನೋ ಖುಷಿ. ಆರಂಭದಲ್ಲೇ ಸುಂದರವಾಗಿ ಬರೆಯ ಬೇಕೆಂದು ಎಲ್ಲರೂ ಬಯಸುತ್ತಾರೆ. ಶಾಲೆ ಶುರುವಾಗಿ ಒಂದೆರಡು ತರಗತಿಗಳು ಪ್ರಾರಂಭವಾಗುತ್ತಿದ್ದಂತೆ ಪುಟಗಟ್ಟಲೆ ಹೋಮ್ ವರ್ಕ್ ಗಳು.  ಇನ್ನೂ ಪೆನ್ಸಿಲ್ ಸರಿಯಾಗಿ ಹಿಡಿಯಲು ಬಾರದ ಕೈಯಲ್ಲಿ ಏನು ತಾನೇ ಬರೆದೀತು? ಮಗುವಿಗೆ ಪೆಟ್ಟು ಸಿಕ್ಕಬಾರದಲ್ಲಾ ಎಂದು ಅಪ್ಪ ಅಮ್ಮ ನೇ ಎಷ್ಟೋ ಬಾರಿ ಮಗುವಿನ ಹೋಮ್ ವರ್ಕ್ಸ್‌ಗಳನ್ನು ಮುಗಿಸಿ ಬಿಟ್ಟು ನಿಟ್ಟುಸಿರು ಬಿಡುತ್ತಾರೆ.  ಮಕ್ಕಳು ಸುಲಭವಾಗಿ ಬರೆದು ಬಿಡುತ್ತಾರಲ್ಲ ಅಂತ ಟೀಚರ್ ಮತ್ತೂ ಜಾಸ್ತಿ ಕೊಡುತ್ತಾರೆ!!!!!
ಕೈ ಬರಹಗಳು ಸುಂದರವಾಗಿಲ್ಲವಾದರೆ ಹಿರಿಯರು ನಗುವುದುಂಟು ಕೋಪಿ ಸರಿಯಾಗಿ ಬರೆಸಲಿಲ್ಲ ಅನ್ನಿಸ್ತದೆ   ಯಾರು ಕನ್ನಡ ಪಾಠ  ಮಾಡಿದ್ದು‌ ನಿನಗೆ  , ಈಗಲೂ ಕಾಲ ಮಿಂಚಿಲ್ಲ , ಕೋಪಿ ಬರಿ ಅಕ್ಷರ ಚೆನ್ನಾಗಿ ಆಗುತ್ತದೆ ಎಂದು ಕಿವಿ ಹಿಂಡಿಸಿಕೊಂಡ ಅನುಭವ ನನಗಿದೆ!
ಸುಂದರವಾದ  ಕೈ ಬರಹ ಒಂದು ಅಮೂಲ್ಯವಾದ ಆಸ್ತಿಯೇ ಸರಿ. ಬರವಣಿಗೆ  ನಮ್ಮಲ್ಲಿ ಒಂದು ರೀತಿಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಯಾವುದೇ ಕೆಲಸಕ್ಕೂ ಮುನ್ನುಗ್ಗಲು ಧೈರ್ಯವಿರುತ್ತದೆ. ಅದರಲ್ಲೂ ಕೈಬರಹ ಸುಂದರವಾಗಿದ್ದರಂತೂ ಸ್ವಲ್ಪ ಹೆಚ್ಚೇ ಮಹತ್ವ. ಇದರ  ಪ್ರಾಮುಖ್ಯತೆ ಪರೀಕ್ಷಾ ಸಂದರ್ಭಗಳಲ್ಲಿ ಮಾತ್ರವಲ್ಲದೆ ಅಟೋಗ್ರಾಫ್  ಪ್ಲೀಸ್ ಎನ್ನುವಲ್ಲಿಗೂ ಅನ್ವಯಿಸುತ್ತದೆ. ಆಕರ್ಷಕ ವಾಗಿ ಬರೆಯುವವರ ಬಳಿ ಎಲ್ಲರೂ ಪುಸ್ತಕಗಳನ್ನು ರಾಶಿ ಹಾಕುವವರೇ.  ಸ್ವಲ್ಪ ‌ಚೆನ್ನಾಗಿ ಚಿತ್ರವನ್ನೂ ‌ಬರೆಯ ಬಲ್ಲರಾದರೆ ಕೇಳುವುದೇ ಬೇಡ.  ಪರೀಕ್ಷೆಗೆ  ತಯಾರಾಗುವುದೋ ಅಟೋಗ್ರಾಪ್ ಬರೆಯಲೋ ಎಂದು ತಲೆ ಕೆರೆದು ಕೊಳ್ಳುವ ಪರಿಸ್ಥಿತಿ. ಯಾರೋ ತಲೆಹರಟೆ ಮಾಡಿದರು ಅಂತ ನಮ್ಮ ಇಡಿ ತರಗತಿಯ ಮಕ್ಕಳ ಅಟೋಗ್ರಾಪ್ ಹೆಡ್ ಮಾಸ್ತರ ಟೇಬಲ್ ನಲ್ಲಿ ಪರೀಕ್ಷೆಗಳು ಮುಗಿಯುವವರೆ  ಪ್ರತಿಷ್ಠಿತ ವಾಗಿತ್ತು.  ರಿಸಲ್ಟ್ ಬಂದ ಮೇಲೆ ನಮ್ಮ ನಮ್ಮ ಕೈ ಸೇರಿದ್ದು. ಈಗ  ಎಲ್ಲರೂ ಹತ್ತಿರವೇ  ಅಂದಿನ ನೆನೆಪಿನ ಹೊತ್ತಗೆಗಳ ಜಾಗದಲ್ಲಿ ಮುಖವಾಣಿ ಬಂದು ಕುಳಿತಿದೆ. ಬೇಕೊ ಬೇಡವೋ ಎಲ್ಲರೂ ಲಭ್ಯರು.
ಯಾವುದೇ ವಿಷಯವನ್ನು ಸ್ಪಷ್ಟವಾಗಿ ಇನ್ನೊಬ್ಬರಿಗೆ ಅರ್ಥವಾಗುವಂತೆ ಬರೆಯು ವುದೂ ಒಂದು ಕಲೆ.  ಅಕ್ಷರ ಕೆಲವೊಂದು ಬಾರಿ ಚೆನ್ನಾಗಿ ಇರದಿದ್ದರೂ ಓದುಗರಿಗೆ ತಿಳಿಯುವಂತೆ ಬರೆಯಬಲ್ಲರು. ಶಬ್ದಗಳ ನಡುವೆ ಅಗತ್ಯವಾದ ಅಂತರವನ್ನು ನಿಭಾಯಿಸಲು ಸಮರ್ಥರಾದರೆ , ಬರಹಗಳು ಸುಂದರವಾಗಿಲ್ಲವಾದರೂ ಓದುವಂತಿರುತ್ತದೆ.
 ಕೈಬರಹಗಳು ನಮ್ಮ ಮನಸ್ಥಿತಿ ಗೆ ಹಿಡಿದ ಕನ್ನಡಿಯಂತೆ. ಬರೆಯುವ ಶೈಲಿಯಿಂದಲೇ ಜನರ ಮನೋಧರ್ಮವನ್ನು ಅರಿಯುವ ಸಾಮರ್ಥ್ಯ ಹೊಂದಿರುವವರಿರುತ್ತಾರೆ. ಇಂದು  ಅಧ್ಯಯನ ಕ್ಷೇತ್ರದಲ್ಲಿ ಬೇಡಿಕೆಯಲ್ಲಿರುವ ಶಾಖೆಯಾಗಿದೆ. ಬರಹ ಬರಹಕ್ಕೇ ಸೀಮಿತ ವಾಗಿರದೆ ಮನಸನು ಪ್ರತಿಬಿಂಬಿಸುವ ಕನ್ನಡಿಯಾಗಿದೆ.
Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ನಿಮಗಿದು ಗೊತ್ತೇ? : ಆರೋಗ್ಯಕ್ಕಾಗಿ ಭೂ ವಿದ್ಯುತ್ ಆಯಸ್ಕಾಂತದ ಮಹತ್ವ… : ಅರ್ಥಿಂಗ್/ಗ್ರೌಂಡಿಂಗ್ ಹಾಗೂ ಆರೋಗ್ಯ!
April 29, 2024
3:30 PM
by: The Rural Mirror ಸುದ್ದಿಜಾಲ
ದಿಢೀರಾಗಿ ಬೆಳೆಯುವುದು , ಫಸಲು ನೀಡುವುದು ಅವಸರವೇ ಅಪಘಾತಕ್ಕೆ ಕಾರಣ | ಬೇಗ ಫಸಲು ಬಂದ ಸಸ್ಯ ಬೇಗನೇ ಸಾಯುತ್ತದೆ |
April 28, 2024
9:26 PM
by: ಪ್ರಬಂಧ ಅಂಬುತೀರ್ಥ
ಹೊಸ ಬೆಳೆ | ರೈತರು ಚಿಂತನೆ ಮಾಡಬೇಕಾದ್ದೇನು…? ಕರಾವಳಿ, ಮಲೆನಾಡಿನಲ್ಲಿ ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ ಅಗತ್ಯವಿದೆ” |
April 24, 2024
2:57 PM
by: ಪ್ರಬಂಧ ಅಂಬುತೀರ್ಥ
ಚುನಾವಣೆ ಹಾಗೂ “ನೀತಿ” ಸಂಹಿತೆ ಮತ್ತು ಜಗಳ…! |
April 18, 2024
3:00 PM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror