ಕೊಡಗು, ಮಲೆನಾಡು ಹಾಗೂ ಕರಾವಳಿ ತೀರಗಳಲ್ಲಿ ಭಾರೀ ಮಳೆ ನಿರೀಕ್ಷೆ ಮಾಡಲಾಗಿತ್ತು. ಇದೀಗ ಮಳೆಯ ತೀವ್ರತೆ ಕಡಿಮೆಯಾಗಿದ್ದು ಕೊಡಗಿನಲ್ಲಿ ರೆಡ್ ಅಲರ್ಟ್ ಬದಲಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕೇರಳದಲ್ಲಿ ಇನ್ನೂ ಮಳೆ ಮುಂದುವರಿದಿದೆ. ಇಂದು ಕೇರಳದ ಕೆಲವು ಕಡೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂಬಯಿಯಲ್ಲೂ ಧಾರಾಕಾರ ಮಳೆ ಸುರಿಯುತ್ತಿದೆ. ಇದೇ ಸಂದರ್ಭ RED Alert , ORANGE Alert ಕೇಳುತ್ತೇವೆ. ಇದೆರಡೇ ಅಲ್ಲ YELLOW Alert ಕೂಡಾ ಇದೆ. ಇದೆಲ್ಲಾ ಏನು ? ಯಾವಾಗ ಘೋಷಣೆ ಮಾಡುತ್ತಾರೆ ?
Advertisement Advertisement Advertisement
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಮುಂಗಾರು ಚುರುಕು ಗೊಂಡಿದ್ದು, ದಟ್ಟವಾಗಿ ಕವಿದ ಮಂಜಿನೊಂದಿಗೆ ಹದವಾಗಿ ಮಳೆಯಾಗುತ್ತಿದೆ. ಮತ್ತೊಂದೆಡೆ ಶುಕ್ರವಾರವಷ್ಟೇ ರೆಡ್ ಅಲರ್ಟ್ ಘೋಷಿಸಿದ್ದ ಹವಾಮಾನ ಇಲಾಖೆ ಮಳೆಯ ಪ್ರಮಾಣ ತಗ್ಗಬಹುದೆಂದು ಆರೆಂಜ್ ಅಲರ್ಟ್ ಘೋಷಿಸಿ 115 ರಿಂದ 204 ಮಿ.ಮೀ ನಷ್ಟು ಮಳೆಯಾಗಬಹುದೆಂದು ತಿಳಿಸಿದೆ.ಜಿಲ್ಲೆಯ ಜನತೆ ಹಾಗೂ ಪ್ರವಾಸಿಗರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಹವಾಮಾನ ಇಲಾಖೆಯ ನಿರೀಕ್ಷೆಯಂತೆ ಜಿಲ್ಲೆಯ ಯಾವುದೇ ಭಾಗದಲ್ಲಿ ಭಾರೀ ಮಳೆಯಾಗಿಲ್ಲ. ಹೀಗಿದ್ದೂ ದಿನಪೂರ್ತಿ ಹದವಾಗಿ ಸುರಿಯುತ್ತಿದ್ದ ಮಳೆ ಸಂಜೆಯ ವೇಳೆಗೆ ಒಂದಷ್ಟು ಚುರುಕಾಗಿತ್ತು. ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿ ಮತ್ತು ಭಾಗಮಂಡಲ, ತಲಕಾವೇರಿ ವ್ಯಾಪ್ತಿಯಲ್ಲಿ ಕಳೆದ ಒಂದು ದಿನದ ಅವಧಿಯಲ್ಲಿ ಸರಾಸರಿ 2 ರಿಂದ 3 ಇಂಚಿನಷ್ಟು ಮಳೆಯಾಗಿದೆ. ನದಿ ಪಾತ್ರದ ನಾಪೋಕ್ಲು, ಮೂರ್ನಾಡು, ಸಿದ್ದಾಪುರ ವಿಭಾಗಗಳಲ್ಲು ಸಾಧಾರಣ ಮಳೆಯಾಗುತ್ತಿರುವ ಬಗ್ಗೆ ವರದಿಯಾಗಿದೆ.
ಹಾರಂಗಿ ಅಣೆಕಟ್ಟೆಯಿಂದ 1000 ಕ್ಯೂಸೆಕ್ ನೀರು ನಾಲೆಗೆ:
ದನಕರುಗಳಿಗೆ ಕುಡಿಯಲು ಹಾಗೂ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಹಿನ್ನೆಲೆಯಲ್ಲಿ ಸರಕಾರದ ಆದೇಶದನ್ವಯ ಹಾರಂಗಿ ಅಣೆಕಟ್ಟೆಯಿಂದ ಮುಖ್ಯ ನಾಲೆಯ ಮೂಲಕ ಜು.21 ರಿಂದ 1000 ಕ್ಯೂಸೆಕ್ ನೀರನ್ನು ಹರಿಬಿಡಲಾಗುವುದು ಎಂದು ಕಾವೇರಿ ನೀರಾವರಿ ನಿಗಮದ ಪ್ರಕಟಣೆ ತಿಳಿಸಿದೆ. ಜನರಿಗೆ, ದನಕರುಗಳಿಗೆ ಕುಡಿಯಲು ಹಾಗೂ ಕೆರೆಕಟ್ಟೆಗಳು ತುಂಬಲು ಮಾತ್ರ ನೀರನ್ನು ಮುಖ್ಯ ನಾಲೆಗೆ ಬಿಡುವಂತೆ ಅಧಿಕಾರಿಗಳು ಸೂಚಿಸಿದ್ದು, ಹಾರಂಗಿ ನಾಲೆಗಳ ನೀರನ್ನು ಅವಲಂಬಿಸಿ ಬೆಳೆ ಬೆಳೆದು ಹಾನಿಯಾದಲ್ಲಿ ಅದಕ್ಕೆ ಸರಕಾರ ಜವಾಬ್ದಾರಿಯಲ್ಲ ಎಂದು ಕಾವೇರಿ ನೀರಾವರಿ ನಿಗಮದ ಕುಶಾಲನಗರ ವೃತ್ತದ ಸೂಪರಿಂಟೆಂಡೆಂಟ್ ಇಂಜಿನಿಯರ್ ಸ್ಪಷ್ಟಪಡಿಸಿದ್ದಾರೆ.
ಹಾರಂಗಿ ಅಣೆಕಟ್ಟೆಯಲ್ಲಿ ಕಳೆದ ಸಾಲಿಗಿಂತ ಶೇ.90 ರಷ್ಟು ನೀರಿನ ಕೊರತೆಯಿದ್ದು, ಸರಕಾರದ ಆದೇಶದಂತೆ ಇಂದು ಮುಖ್ಯ ನಾಲೆಗೆ ನೀರನ್ನು ಹರಿಬಿಡಲಾಗುತ್ತಿದ
ಹಾರಂಗಿ ನೀರಿನ ಮಟ್ಟ :
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2823.27 ಅಡಿಗಳು, ಕಳೆದ ವರ್ಷ ಇದೇ ದಿನ 2856.50 ಅಡಿ.
ಇಂದಿನ ನೀರಿನ ಒಳಹರಿವು 2280 ಕ್ಯೂಸೆಕ್, ಹೊರ ಹರಿವು ನದಿಗೆ 30 ಕ್ಯೂಸೆಕ್- ನಾಲೆಗೆ 20 ಕ್ಯೂಸೆಕ್. ಕಳೆದ ವರ್ಷ ಇದೇ ದಿನ ನದಿ ಒಳಹರಿವು 12868.
ಕೇರಳದ ವಿವಿದೆಡೆ ಭಾರೀ ಮಳೆ:
ಕೇರಳದ ವಿವಿದೆಡೆ ಇಂದೂ ಮಳೆ ಸುರಿಯುತ್ತಿದ್ದ ಜು.21 ರಂದು ಕೆಲ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.ಕಣ್ಣೂರು, ಕಾಸರಗೋಡು, ಕೋಝಿಕ್ಕೋಡ್, ಮಲಪ್ಪುರಂ, ಪಾಲಕ್ಕಾಡ್ ಹಾಗೂ ವಯನಾಡ್ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾದರೆ ಉತ್ತರ ಕೇರಳದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.
ಹವಾಮಾನ ಇಲಾಖೆ ಹೀಗೆ ಹೇಳುತ್ತದೆ :
ಜುಲೈ 21 ರಂದು ಕೇರಳದ ಕೆಲವು ಕಡೆ ಭಾರಿ ಪ್ರಮಾಣದ ಮಳೆಯಾಗುತ್ತದೆ. ಉತ್ತರ ಕೊಂಕಣದ ಕರಾವಳಿ ಮತ್ತು ದಕ್ಷಿಣ ಒಳನಾಡು ಕರ್ನಾಟಕ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ದಕ್ಷಿಣ ಕೊಂಕಣ ಮತ್ತು ಗೋವಾಗಳಲ್ಲಿ ಪ್ರತ್ಯೇಕ ಸ್ಥಳಗಳು ಮತ್ತು ಭಾರೀ ಮಳೆಯಾಗಲಿದೆ. ಉತ್ತರ ಒಳನಾಡು ಕರ್ನಾಟಕ, ತಮಿಳುನಾಡು, ಪುದುಚೇರಿ ಮತ್ತು ತೆಲಂಗಾಣ, ಮಧ್ಯ ಮಹಾರಾಷ್ಟ್ರ, ಗುಜರಾತ್ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ, ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಮತ್ತು ಮೇಘಾಲಯ. ಬಿಹಾರ, ಜಾರ್ಖಂಡ್, ಒಡಿಶಾ ಪ್ರದೇಶಗಳಲ್ಲಿ ಮಿಂಚಿನೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ.
ಜುಲೈ 22 ರಂದು ಕೇರಳದ ವಿವಿದೆಡೆ ಕರಾವಳಿ ಮತ್ತು ದಕ್ಷಿಣ ಕರ್ನಾಟಕದಲ್ಲೂ ಉತ್ತಮ ಮಳೆಯಾಗುತ್ತದೆ.
ಜುಲೈ 23 ರಂದು ಕೂಡಾ ಕೇರಳದ ಕೆಲವು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಮತ್ತು ದಕ್ಷಿಣದ ಪ್ರತ್ಯೇಕ ಸ್ಥಳಗಳಲ್ಲಿ ಕರ್ನಾಟಕ ಮತ್ತು ಉತ್ತರಾಖಂಡ ಮತ್ತು ಉತ್ತರ ಪ್ರದೇಶ, ಪೂರ್ವ ರಾಜಸ್ಥಾನದ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗಲಿದೆ.
ಹವಾಮಾನ ಇಲಾಖೆ YELLOW, ORANGE, RED ಅಲರ್ಟ್ ಘೋಷಣೆ ಮಾಡುತ್ತದೆ. ಇದೇನು ?
ಹಳದಿ ಹವಾಮಾನ ಎಚ್ಚರಿಕೆ – YELLOW : ಇದು ಅಪಾಯದ ಎಚ್ಚರಿಕೆ: ಈ ಹವಾಮಾನ ಎಚ್ಚರಿಕೆಗಳ ಹಿಂದೆ, ಆ ಪ್ರದೇಶದಲ್ಲಿ ಇರುವ ಮಂದಿಗೆ ಅಪಾಯ ತಿಳಿಸುವುದು ಮತ್ತು ತಡೆಗಟ್ಟಲು ಅವರಿಗೆ ಅವಕಾಶ ನೀಡುವುದು. ಈ ಪರಿಸ್ಥಿತಿ ಜನರಿಗೆ ಭಯ ಉಂಟು ಮಾಡದ ಸ್ಥಿತಿ. ತೀವ್ರ ಎಚ್ಚರಿಕೆಯ ಹವಾಮಾನ ಸ್ಥಿತಿ ಎಂದು ತಿಳಿಸುವುದು.
ಕಿತ್ತಳೆ ಹವಾಮಾನ ಎಚ್ಚರಿಕೆ – ORANGE : ಇದು ಸಿದ್ಧರಾಗಿ ಎನ್ನುವ ಸೂಚನೆ : ಹವಾಮಾನ ಎಚ್ಚರಿಕೆಗಳಲ್ಲಿ ಈ ವಿಭಾಗವು ಸಿದ್ಧರಾಗಿರುವ ಸೂಚನೆ. ಈ ಅಲರ್ಟ್ ಘೊಷಣೆ ಮಾಡಿರುವ ಪ್ರದೇಶಗಳ ಮೇಲೆ ನಿಗಾ ಇಡಬೇಕಾಗುತ್ತದೆ. ಸರ್ವಸನ್ನದ್ಧ ಸ್ಥಿತಿಯಲ್ಲಿ ಆಡಳಿತವು ಇದ್ದರೆ ಆ ಪ್ರದೇಶಗಳಲ್ಲಿನ ಎಲ್ಲರೂ ನಿರೀಕ್ಷಿತ ಪರಿಸ್ಥಿತಿಗಳಿಗೆ ಸೂಕ್ತ ರೀತಿಯಲ್ಲಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬೇಕು ಎಂದು ಸೂಚಿಸುತ್ತದೆ.
ಕೆಂಪು ಹವಾಮಾನ ಎಚ್ಚರಿಕೆ – RED: ಇದು ಗಂಭೀರ ಪರಿಸ್ಥಿತಿಯ ಎಚ್ಚರಿಕೆ: ಈ ಮಾದರಿಯ ಹವಾಮಾನ ಎಚ್ಚರಿಕೆಯಲ್ಲಿ ಭಾರಿ ಮಳೆ ಅಥವಾ ಹವಾಮಾನದ ವ್ಯತ್ಯಾಸ ಇರುತ್ತದೆ. ಆ ಪ್ರದೇಶದ ಮಂದಿ ಸ್ಥಳಾಂತರದವರೆಗೂ ಕಾರ್ಯಚಟುವಟಿಕೆಯಾಗಬೇಕು. ಈ ಸ್ಥಿತಿಯಲ್ಲಿ ಕುಟುಂಬಗಳನ್ನು ತಾತ್ಕಾಲಿಕವಾಗಿ ಅಪಾಯದ ವಲಯದಿಂದ ಸ್ಥಳಾಂತರಿಸುವ ಮೂಲಕ ಅಥವಾ ಹವಾಮಾನ ಪರಿಸ್ಥಿತಿಗಳ ಪರಿಣಾಮಗಳನ್ನು ತಗ್ಗಿಸುವ ಗುರಿಯನ್ನು ಹೊಂದಿರುವ ಇತರ ನಿರ್ದಿಷ್ಟ ಕ್ರಮಗಳು ಆಗಬೇಕು. ಕೆಂಪು ಹವಾಮಾನ ಎಚ್ಚರಿಕೆಯ ಸಂದರ್ಭದಲ್ಲಿ ಸಾರ್ವಜನಿಕ ಸಾರಿಗೆ, ರಸ್ತೆ ಮುಚ್ಚುವಿಕೆ ಮತ್ತು ಶಾಲೆ-ಕಾಲೇಜುಗಳಿಗೆ ರಜೆ ನೀಡಬೇಕಾಗಿದೆ.
ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…
ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?