ಮಡಿಕೇರಿ : ಭಾರತೀಯ ಹವಾಮಾನ ಇಲಾಖೆ ಕಳೆದ ಒಂದು ತಿಂಗಳಿನಿಂದ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡುತ್ತಲೇ ಬಂದಿದೆಯಾದರು ಕೊಡಗು ಜಿಲ್ಲೆಗೆ ಮಾತ್ರ ನಿರೀಕ್ಷಿತ ಮಳೆಯಾಗುತ್ತಿಲ್ಲ.
ಜಿಲ್ಲೆಯಲ್ಲಿ ಬಿಸಿಲಿನ ವಾತಾವರಣ ಕಂಡು ಬಂದಿದ್ದು, ರೈತಾಪಿ ವರ್ಗ ಆತಂಕಗೊಂಡಿದೆ. ಮಳೆ ಬಂದರೂ ಒಮ್ಮೆಲೇ ಬಂದು ಅಪಾಯ ಸೃಷ್ಟಿಸಿ ಮರೆಯಾಗುತ್ತಿದೆ. ನಿರೀಕ್ಷಿತ ಪ್ರಮಾಣದಲ್ಲಿ ಹಾಗೂ ಪ್ರತೀವರ್ಷದಂತೆ ಮಳೆ ಸುರಿಯದ ಕಾರಣ ಈಗ ಕೃಷಿ ಉಳಿಸುವುದೇ ಚಿಂತೆಯಾಗಿದೆ.
ಕಳೆದ ವರ್ಷ ಮಹಾಮಳೆಯಿಂದ ನಲುಗಿದ್ದ ಕೊಡಗಿನಲ್ಲಿ ಜನವರಿ ತಿಂಗಳಿನಿಂದ ಜುಲೈ ಅಂತ್ಯದವರೆಗೆ ದಾಖಲೆಯ 3566.21 ಮಿ.ಮೀ. ಮಳೆಯಾಗಿತ್ತು. ಆದರೆ ಈ ಬಾರಿ ಜನವರಿಯಿಂದ ಇಲ್ಲಿಯವರೆಗೆ ಕೇವಲ 1255.80 ಮಿ.ಮೀ ಮಳೆಯಾಗಿದ್ದು, 80 ರಿಂದ 90 ಇಂಚು ಮಳೆ ಕೊರತೆಯಾಗಿದೆ. ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದ ರೈತರು ನಿರಾಶೆಗೊಂಡಿದ್ದು, ಇರುವಷ್ಟು ನೀರನ್ನು ಬಳಸಿಕೊಂಡು ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ವನ್ಯಜೀವಿಗಳ ದಾಳಿ ಮತ್ತು ಹವಾಗುಣದ ವೈಪರೀತ್ಯದಿಂದ ಬೇಸತ್ತು ಕೊಡಗಿನ ರೈತರು ಕೃಷಿ ಕ್ಷೇತ್ರದಿಂದ ದೂರ ಸರಿಯಲು ಆರಂಭಿಸಿದ್ದಾರೆ. ಇರುವ ಬೆರಳೆಣಿಕೆಯಷ್ಟು ಮಂದಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಸಕಾಲದಲ್ಲಿ ಮಳೆಯಾಗದೆ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಮಳೆಗಾಲದಲ್ಲಿ ನಾಟಿ ಮಾಡುವುದರಿಂದ ತೊಡಗಿ ಕಟಾವುವರೆಗೆ ನಿಗದಿತ ಪ್ರಮಾಣದಲ್ಲಿ ನಿಗದಿತ ಅವಧಿಯಲ್ಲೇ ಮಳೆಯಾದರೆ ಮಾತ್ರವೇ ಕೃಷಿ ಕಾರ್ಯ ಚೆನ್ನಾಗಿ ನಡೆಯುತ್ತದೆ. ಈ ಬಾರಿ ಒಮ್ಮೆಲೇ ಸುರಿವ ಭಾರೀ ಮಳೆ ಹಾಗೂ ಆ ನಂತರ ಬಿಸಿಲು ಕಂಡುಬರುತ್ತಿರುವುದು ಕೃಷಿ ನಿರೀಕ್ಷೆಗಳೆಲ್ಲಾ ತಲೆಗೆಳಗೆ ಮಾಡುತ್ತಿದೆ.
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…
ನಾಡಿನ ಸಮಸ್ತರಿಗೂ ಮಕರ ಸಂಕ್ರಾಂತಿ ಶುಭಾಶಯ. ರೈತರಿಗೂ ಇದು ಸುಗ್ಗಿಯ ಹಬ್ಬ. ಈ…
ಕರಾವಳಿ ಜಿಲ್ಲೆಗಳಲ್ಲಿ ಸಂಜೆ ಹಾಗೂ ರಾತ್ರಿಯ ತನಕವೂ ಪಶ್ಚಿಮದ ಗಾಳಿಯ ಪ್ರಭಾವ ಇರುವುದರಿಂದ…