ಕೊಡಗು: ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮ ಜ.6ರ ಸೋಮವಾರದಂದು 2.30 ರಿಂದ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಭಾಗದಲ್ಲಿ ರಸ್ತೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಿ.ಎ. ಹರೀಶ್, ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಕುಮಾರ್, ತಾಲೂಕು ಪಂಚಾಯತ್ ಸದಸ್ಯರಾದ ನಾಗೇಶ್ ಕುಂದಲ್ಪಾಡಿ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಮಾರ್ ಚೆದ್ಕಾರ್, ಉಪಾಧ್ಯಕ್ಷರಾದ ಸುಂದರ ಬಿಸಿಲುಮನೆ ಹಾಗೂ ಗ್ರಾಮ ಪಂಚಾಯತ್ ಸದಸ್ಯರುಗಳು ಪಾಲ್ಗೊಳ್ಳಲಿದ್ದಾರೆ.ಸಂಪಾಜೆ ಗ್ರಾಮದ ಗ್ರಾಮಸ್ಥರು ಹಾಜರಿರಬೇಕೆಂದು ತಿಳಿಸಿದ್ದಾರೆ.
ಸಂಪಾಜೆ ಗ್ರಾಮ ವ್ಯಾಪ್ತಿಯ ವಿವಿಧ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯ ವಿವರ:
1) ಸಂಪಾಜೆ -ಬೈಲು ಭಾಗದ ರಸ್ತೆ ಡಾಮರೀಕರಣಕ್ಕೆ ಶಂಕುಸ್ಥಾಪನೆ.
2) ಸಂಪಾಜೆ-ಹೊದ್ದೆಟ್ಟಿ ಭಾಗದ ರಸ್ತೆ ಡಾಮರೀಕರಣಕ್ಕೆ ಶಂಕುಸ್ಥಾಪನೆ.
3) ಕಡಂಬಡ್ಕ ರಸ್ತೆ ಕಾಂಕ್ರೀಟ್ ಕಾರಣ
4) ಅರೆಕಲ್ಲು ಪರಿಶಿಷ್ಟ ಪಂಗಡ ಭಾಗದ ರಸ್ತೆ ಕಾಂಕ್ರೀಟ್ ಕರಣ.
5) ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಹತ್ತಿರ ರಸ್ತೆ.
6) ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ರಸ್ತೆ.
7) ಸಂಪಾಜೆ-ಕುಂಠಿಕಾನ ರಸ್ತೆ ಕಾಂಕ್ರೀಟ್.
8) ಸಂಪಾಜೆ-ಅಂಬಟೆಕಜೆ ಭಾಗದ ರಸ್ತೆ.
9) ಸಂಪಾಜೆ-ಚೆಡಾವು-ಮಂಗಳಪಾರೆ ರಸ್ತೆ ಡಾಮರೀಕರಣ.
10) ಚೆಡಾವು-ಮುಂಡಡ್ಕ ರಸ್ತೆ ಡಾಮರೀಕರಣ.
11) ಕೊಯನಾಡು-ಗುಡ್ಡೆಗದ್ದೆ ರಸ್ತೆ ಡಾಮರೀಕರಣ.
12) ಕೊಯನಾಡು-ಬೈಲು ರಸ್ತೆ ಡಾಮರೀಕರಣ.
13)ಕೊಯನಾಡು -ಕಲ್ಲಾಳ ರಸ್ತೆ ಡಾಮರೀಕರಣ.
14) ಕೊಯನಾಡು-ಕಲಾಯಿ ಧಾಮೋದರ ಮನೆ ಭಾಗದ ಗುಡ್ಡೆಗದ್ದೆ ರಸ್ತೆ.
15) ಕೊಯನಾಡು-ಬೈಲು ಭಾಗದ ಕುಡಿಯುವ ನೀರಿನ ನಳ್ಳಿ ನೀರು ಸಂಪರ್ಕಕ್ಕೆ ಪೈಪ್ ಲೈನ್ ಅಳವಡಿಕೆ.
16) ಸಂಪಾಜೆ-ಅಂಬಟೆಕಜೆ ಭಾಗದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ.
17) ಸಂಪಾಜೆ-ಅರೆಕಲ್ಲು ಭಾಗದಲ್ಲಿ ಕುಡಿಯುವ ನೀರಿಗೆ ಟ್ಯಾಂಕ್ ನಿರ್ಮಾಣ.
18) ಸಂಪಾಜೆ-ಕುವೇಕಾಡು ಭಾಗದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆ.
19) ಸಂಪಾಜೆ- ಕುಂಬಾಡಿ ರಸ್ತೆಯಲ್ಲಿ ಬರುವ ಮರಿಕೆ ಭಾಗದಲ್ಲಿ ತಡೆಗೋಡೆ ಶಂಕುಸ್ಥಾಪನೆ.
20) ಸಂಪಾಜೆ-ಚೆಡಾವು ಬಾಳೆಹಿತ್ಲು ಭಾಗದಲ್ಲಿ ಸಂಪರ್ಕ ರಸ್ತೆ.
21) ಅರೆಕಲ್ಲು ರಸ್ತೆಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಶಂಕುಸ್ಥಾಪನೆ.
22) ಸಂಪಾಜೆ ಬೈಲು ಭಾಗದ ಗದ್ದೆ ಬೇಸಾಯಕ್ಕೆ ನೀರಿನ ಕಾಲುವೆ ನಿರ್ಮಾಣ.
23) ಸಂಪಾಜೆ ಕೊಲ್ಲೂರು ಕಟ್ಟದ ಹತ್ತಿರ ತಡೆಗೋಡೆ ನಿರ್ಮಾಣ.
24) ಕೊಯನಾಡು ರಬ್ಬರ್ ಎಸ್ಟೇಟ್ ಭಾಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ.
25) ಕೊಯನಾಡು ಮುತ್ತು ಮಾರಿಯಮ್ಮ ದೇವಸ್ಥಾನದ ಬಳಿ ತಡೆಗೋಡೆ ನಿರ್ಮಾಣ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…