ಕೊರೊನಾ‌ ಲಾಕ್ಡೌನ್ | ಮೇ.11 ರಿಂದ ಬೆಳ್ಳಾರೆಯಲ್ಲಿ ಲಾಕ್ಡೌನ್ ಕಟ್ಟುನಿಟ್ಟು | 2 ಗಂಟೆ ನಂತರ ಅಂಗಡಿಗಳು ಬಂದ್ | ಮಾಸ್ಕ್ ಇಲ್ಲದಿದ್ದರೆ ದಂಡ |

May 10, 2020
10:27 PM

ಬೆಳ್ಳಾರೆ: ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೇ 11 ರಿಂದ ಮುಂದಿನ ಆದೇಶದವರೆಗೆ ಲಾಕ್ಡೌನ್   ಕಟ್ಟುನಿಟ್ಟಾಗಿ  ಜಾರಿಯಲ್ಲಿರುತ್ತದೆ.

Advertisement
Advertisement
Advertisement

ಗ್ರಾಮ ಪಂಚಾಯತ್ ಹೊರಡಿಸಿರುವ ಕಟ್ಟುನಿಟ್ಟಿನ ಕ್ರಮಗಳು ಹೀಗಿವೆ…

Advertisement
  • ಮುಂದಿನ ಆದೇಶ ದವರೆಗೆ ಗ್ರಾ.ಪಂ ವ್ಯಾಪ್ತಿಯಲ್ಲಿ ವ್ಯಾಪಾರ ನಡೆಸಲು ಬೆಳಗ್ಗೆ6 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ಅವಕಾಶವಿರುತ್ತದೆ.
  • ವ್ಯಾಪಾರದ ಸಂದರ್ಭದಲ್ಲಿ ಅಲ್ಲದೆ ಗ್ರಾ.ಪಂ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತದ್ದು,ಇಲ್ಲವಾದಲ್ಲಿ ರೂ 100 ದಂಡವನ್ನು ಕಟ್ಟಬೇಕಾಗುತ್ತದೆ
  • ಯಾವುದೇ ಸಂದರ್ಭದಲ್ಲೂ ಅಂತರ ವನ್ನು ಕಾಪಾಡಿಕೊಳ್ಳಬೇಕಾದುದು ನಮ್ಮ ಆದ್ಯ ಕರ್ತವ್ಯವಾಗಿದೆ
  • 2 ಗಂಟೆಯ ಬಳಿಕ ಯಾವುದೇ ಅಂಗಡಿ ಗಳನ್ನು ತೆರೆಯುವಂತಿಲ್ಲ. ಅಂತಹದು ಕಂಡು ಬಂದಲ್ಲಿ ಕಠಿಣ ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ
  • ಪಂಚಾಯತ್ ವ್ಯಾಪ್ತಿಯಲ್ಲಿ ಮುಂದಿನ ಆದೇಶದವರೆಗೂ 3 ಕಡೆ ಚೆಕ್ ಪೋಸ್ಟ್ ಗಳಿರುತ್ತವೆ. ( ಜ್ಞಾನ ಗಂಗಾ ಶಾಲಾ ಬಳಿ, ಬೆಳ್ಳಾರೆ ಯ ಮಾಸ್ತಿಕಟ್ಟೆ ದ್ವಾರದ ಬಳಿ ,ಕೆ ಪಿ ಎಸ್ ಶಾಲಾ ಬಳಿ ಬೆಳ್ಳಾರೆ)
  • ಚೆಕ್ ಪೋಸ್ಟ್ ಬಳಿ ಪೋಲಿಸರು ,ಆಶಾ ಕಾರ್ಯ ಕರ್ತೆಯರು ,ಪಂಚಾಯತ್ ಸಿಬ್ಬಂದಿ /ಪಂಚಾಯತ್ ನಿಂದ ನೇಮಕ ಗೊಂಡ ಸ್ವಯಂ ಸೇವಕರು ಇರುತ್ತಾರೆ.
  •  ಚೆಕ್ ಪೋಸ್ಟ್ ಬಳಿ ಮೇಲೆ ತಿಳಿಸಿದ ಅಧಿಕಾರಿಗಳು ಅಲ್ಲದೆ ಸ್ವಯಂ ಸೇವಕರೊಂದಿಗೆ ಅವರ ನಿಯಮಕ್ಕೆ ಅನುಸಾರವಾಗಿ ಸಾರ್ವಜನಿಕರು ಸಹಕರಿಸಲಿದ್ದಾರೆ.
  • ಪ್ರತಿ ಚೆಕ್ ಪೋಸ್ಟ್ ಬಳಿ ಟೆಂಪರೇಚರ್ ಟೆಸ್ಟಿಂಗ್ ಇರುತ್ತದೆ
  •  ಸಾರ್ವಜನಿಕ ರು ಸಂಚರಿಸುವಾಗ ಸಂಚಾರಿ ನಿಯಮ ಕಡ್ಡಾಯವಾಗಿ ಪಾಲಿಸುವಂತದ್ದು ಅದರೊಂದಿಗೆ ಮಾಸ್ಕ್ ಕೂಡ ಕಡ್ಡಾಯ ವಾಗಿರುತ್ತದೆ. ಇಲ್ಲವಾದಲ್ಲಿ ದಂಡ ತೆರಬೇಕಾಗುತ್ತದೆ.
  •  ಅನಗತ್ಯ ಓಡಾಡಕ್ಕೆ ,ಸೋಶಿಯಲ್ ಡಿಸ್ಟೆನ್ಸ್ ಮೈಂಟೈನ್ ಮಾಡಿಲ್ಲದಿದ್ದರೂ ದಂಡ ತೆರಬೇಕಾಗುತ್ತದೆ .
  • ಅಂಗಡಿ ಮಾಲಿಕರು ತಮ್ಮ ಅಂಗಡಿ ಮುಂದೆ ಗ್ರಾಹಕರನ್ನು ಸೋಶಿಯಲ್ ಡಿಸ್ಟೆನ್ಸ್ ಪಾಲಿಸುವಂತೆ ನೋಡಿಕೊಳ್ಳಬೇಕು ಇಲ್ಲವಾದಲ್ಲಿ ಮೊದಲನೆ ಬಾರಿ 100 ರೂ ದಂಡ ವಿದಿಸಲಾಗುವುದು ಮುಂದುವರಿದರೆ ಗರಿಷ್ಠ 1000 ರೂ ದಂಡ ವಿಧಿಸಲಾಗುವುದು .
  • ಅಂಗಡಿಯವರು MRP ದರಕ್ಕಿಂತ ಹೆಚ್ಚು ಮಾರಾಟ ಮಾಡುವುದು ಕಂಡುಬಂದಲ್ಲಿ ಅಥವಾ ಸಾರ್ವಜನಿಕ ವಾಗಿ ದರಪಟ್ಟಿ ಅಳವಡಿಸದಿದ್ದರೆ ಮೊದಲನೆ ಬಾರಿ 100  ರೂ ದಂಡ .ದಂಡ ಮುಂದುವರಿದರೆ ಗರಿಷ್ಠ 1000 ರೂ ದಂಡ ದಿನಕ್ಕೆ ವಿಧಿಸಲಾಗುವುದು.
  • ವ್ಯಾಪಾರ ಮಾಡುವವರನ್ನು ಬಿಟ್ಟು ಬೇರೆ ಯಾವ ವ್ಯಕ್ತಿ ಅಂಗಡಿಗಳಲ್ಲಿ ಕೂರಬಾರದು ಅದಕ್ಕೂ ದಂಡ ವಿಧಿಸಲಾಗುವುದು. ಜನರು ಸೋಶಿಯಲ್ ಡಿಸ್ಟೆನ್ಸ್ ಕಾಯ್ದುಕೊಳ್ಳದೆ ಗುಂಪಾಗಿ ನಿಂತರೆ ಅವರಿಗೆ ಕನಿಷ್ಟ 100 ರೂ ದಂಡ ಪ್ರತಿ ಸಲ ವಿಧಿಸಲಾಗುವುದು.

ಇದರ ಕುರಿತು ಯಾವುದೇ ಗೊಂದಲಗಳಿದ್ದಲ್ಲಿ ನೇರವಾಗಿ ಈ ಕೆಳಗಿನ ನಂಬರನ್ನು ಸಂಪರ್ಕಿಸಬಹುದು ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಂಜಯ ಕೆ.ಆರ್.ತಿಳಿಸಿದ್ದಾರೆ.

ಆಂಜನೇಯ ರೆಡ್ಡಿ
ಠಾಣಾಧಿಕಾರಿ ,ಬೆಳ್ಳಾರೆ ಪೋಲಿಸ್ ಠಾಣೆ
ಮೊ :- 9535556173

Advertisement

ಧನಂಜಯ ಕೆ ಆರ್
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬೆಳ್ಳಾರೆ ಗ್ರಾ.ಪಂ

ಮೊ : +917760381009

Advertisement

ಶಕುಂತಲಾ ನಾಗರಾಜ್
ಅಧ್ಯಕ್ಷೆ ,ಬೆಳ್ಳಾರೆ ಗ್ರಾ.ಪಂ
ಮೊ :- +91872247665

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |
November 23, 2024
12:23 PM
by: ಸಾಯಿಶೇಖರ್ ಕರಿಕಳ
ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ
November 23, 2024
6:21 AM
by: The Rural Mirror ಸುದ್ದಿಜಾಲ
ಕೃಷಿ ಭೂಮಿ ಉಳಿಸಿಕೊಳ್ಳಲು- ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಒಲವು ಬೆಳೆಸಿ | ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ
November 23, 2024
6:12 AM
by: The Rural Mirror ಸುದ್ದಿಜಾಲ
ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ
November 23, 2024
6:06 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror