ಎಣ್ಮೂರು: ಸುಳ್ಯ ತಾಲೂಕಿನ ಎಣ್ಮೂರು ಗ್ರಾಮಪಂಚಾಯತ್ ವ್ಯಾಪ್ತಿಯ ಮುರುಳ್ಯ ಗ್ರಾಮದ ಕುಕ್ಕಟ್ಟೆ ಕಾಲೋನಿಯಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿಗಾಗಿ ಕಾಲನಿ ಜನರು ಸಂಕಷ್ಟ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ನೀರಿರುವ ಮನೆಗಳಿಗೆ ಹೋಗಿ ನೀರು ತರೋಣವೆಂದರೆ ಕೊರೊನಾ ವೈರಸ್ ಭೀತಿಯ ಜೊತೆಗೆ ಕರ್ಪೂ ಹೆದರಿಕೆ. ಸಮಸ್ಯೆ ಪರಿಹಾರಕ್ಕೆ ಕಳೆದ ಕೆಲವು ದಿನಗಳಿಂದ ಪಂಚಾಯತ್ ವತಿಯಿಂದ ಸತತ ಪ್ರಯತ್ನ ನಡೆಯುತ್ತಿದೆ.
ಊರಿಡೀ ಕೊರೊನಾ ವೈರಸ್ ಹರಡುವ ಭೀತಿ ಇದ್ದರೆ ಮುರುಳ್ಯ ಗ್ರಾಮದ ಕುಕ್ಕಟ್ಟೆ ಕಾಲೋನಿ ಜನರಿಗೆ ಕುಡಿಯುವ ನೀರಿನ ಚಿಂತೆ. ಬೇರೆ ಕಡೆಯಿಂದ ನಿರು ತರಲು ಕೊರೊನಾ ಲಾಕ್ಡೌನ್ ಭೀತಿ. ಕಾಲೋನಿಯಲ್ಲಿ ಸುಮಾರು 10 ಕುಟುಂಬದ 35 ಸದಸ್ಯರನ್ನು ಒಳಗೊಂಡಿರುವ ಪಂಚಾಯತ್ ಸದಸ್ಯರೂ ಇರುವ ಸಣ್ಣ ಕಾಲೋನಿಯಾಗಿದೆ. ಕಾಲೋನಿ ಜನರಿಗೆ ಪಂಚಾಯತ್ ಒದಗಿಸುತ್ತಿರುವ ನಲ್ಲಿ ನೀರಿನ ಸಂಪರ್ಕವೇ ನೀರಿನ ಮೂಲವಾಗಿರುತ್ತದೆ. ನಲ್ಲಿ ನೀರಿನ ಸೌಲಭ್ಶ ಕೆಟ್ಟು ಹೋಗಿರುವ ಬಗ್ಗೆ ಸಂಭಂಧಪಟ್ಟ ಪಂಚಾಯತ್ ಪ್ರತಿನಿದಿಗಳ ಹಾಗೂ ಅಭಿವೃಧ್ಧಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇಲ್ಲಿನ ಬೋರ್ ವೆಲ್ ಮೋಟರ್ ಕೆಟ್ಟು ಹೋಗಿದ್ದು ಪಂಪ್ ದುರಸ್ತಿಯಾಗಿ ಕೊಳವೆ ಬಾವಿಗೆ ಇಳಿಸಿದರೂ ನೀರು ಬರುತ್ತಿಲ್ಲ. ಇದೇ ಸಂದರ್ಭ ಲಾಕ್ಢೌನ್ ಎದುರಾಯಿತು. ನೀರು ವ್ಯವಸ್ಥೆ ಕೂಡಾ ಬಂದ್ ಆಯಿತು. ರಿಪೇರಿಗೆ ಯಾರೊಬ್ಬರೂ ಬರುತ್ತಿಲ್ಲ. ಪೊಲೀಸ್ ಅನುಮತಿ ಪಡೆದು ಕೆಲಸ ಮಾಡಬೇಕಿದೆ. ಹಿರಿಯ ಅಧಿಕಾರಿಗಳು ಈ ಬಗ್ಗೆ ವ್ಯವಸ್ಥೆ ಮಾಡಬೇಕಿದೆ. ಇಲ್ಲಿ ಶೀಘ್ರ ವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಕೊಡದೇ ಇದ್ದರೆ ಕಾಲೋನಿ ಜನರು ಕಲುಶಿತ ಕೈ ಪಂಪು ಬೊರ್ ವೆಲ್ ನೀರು ಕುಡಿದು ಹೊಸದೊಂದು ರೋಗಕ್ಕೆ ತುತ್ತಾಗಬೇಕಿದೆ ಎನ್ನುವ ಭೀತಿ ಕಾಲನಿ ವಾಸಿಗಳಲ್ಲಿದೆ.
ಈ ನಡುವೆ ನೂತನ ಕೊಳವೆಬಾವಿ ತೋಡಲಾಗಿದೆ. ಇದೀಗ ಹೊಸದಾದ ಪಂಪ್ ಅಳವಡಿಕೆಗೆ ಚಿಂತನೆ ನಡೆದಿದೆ. ಆದರೆ ಲಾಕ್ಡೌನ್ ಆಗಿರುವ ಕಾರಣ ಎಲ್ಲವೂ ನಿಂತಿದೆ. ಆದರೆ ಕಾಲನಿ ಜನರು ಮಾತ್ರಾ ಕುಡಿಯುವ ನೀರಿಗೆ ಪರದಾಟ ನಡೆಸಬೇಕಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗ್ರಾಪಂ ಉಪಾಧ್ಯಕ್ಷ ಕರುಣಾಕರ ಹುದೇರಿ, ಈ ಸಮಸ್ಯೆ ಗಮನಕ್ಕೆ ಬಂದಿದೆ. ತಕ್ಷಣವೇ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.ಮಂಗಳವಾರವೇ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಪಂಚಾಯತ್ ಮಟ್ಟದಲ್ಲಿ ತುರ್ತು ಸೇವೆ ಮಾಡಲು ಅಧಿಕಾರಿ ಮಟ್ಟದಿಂದ ಅನುಮತಿ ಹಾಗೂ ಪಾಸ್ ವ್ಯವಸ್ಥೆ ಅಗತ್ಯವಾಗಿದೆ ಎಂದು ಕರುಣಾಕರ ಹುದೇರಿ ಹೇಳುತ್ತಾರೆ.
ಕೋವಿಡ್-19 ಈಗ ನಮ್ಮ ಜೀವನದ ಭಾಗ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್…
ದಕ್ಷಿಣಕನ್ನಡ, ಉಡುಪಿ, ಮಡಿಕೇರಿ ಸೇರಿದಂತೆ ಕೊಡಗು ಜಿಲ್ಲೆಯ ಬಹುತೇಕ ಕಡೆ ಧಾರಾಕಾರ ಮಳೆಯಾಗುತ್ತಿದೆ.…
ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮುಂದಿನ 2 ಅಥವಾ 3…
ಕಳೆದ 16 ವರ್ಷಗಳ ದಾಖಲೆಗಳ ಪ್ರಕಾರ ನಿಗದಿತ ದಿನಕ್ಕಿಂತ ಮೊದಲೇ ಈ ಬಾರಿ…
ಉತ್ತಮ ಮಳೆಗೆ ಅರಣ್ಯ ಪ್ರದೇಶವೆಲ್ಲ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ, ಮಳೆ ಹನಿಗಳಿಗೆ ಮೈಯೊಡ್ಡಿದ…
ರಾಜ್ಯದ ಅಡಿಕೆ ಬೆಳೆ ಅತ್ಯಂತ ಉತ್ಕೃಷ್ಟ ಗುಣಮಟ್ಟದ್ದಾಗಿದ್ದು, ಇದರಲ್ಲಿ ಯಾವುದೇ ರಾಸಾಯನಿಕ ಇಲ್ಲ.…