ಸುಳ್ಯ: ದಿನಸಿ ಹಾಗೂ ಅಗತ್ಯ ವಸ್ತು ಖರೀದಿಗೆ ಮಂಗಳವಾರ ಜಿಲ್ಲಾಡಳಿತ ಅವಕಾಶ ನೀಡಿತ್ತು. ಹೀಗಾಗಿ ಸುಳ್ಯ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ದಿನಸಿ ಹಾಗೂ ಅಗತ್ಯ ವಸ್ತು ಖರೀದಿಗೆ ಜನರು ಬಂದಿದ್ದರು. ಸರದಿ ಸಾಲು ಸಂಜೆ 3 ಗಂಟೆಯವರೆಗೂ ಮುಂದುವರಿದಿದೆ. ದಿನಸಿ ಖರೀದಿಗೆ ಗಂಟೆ ಗಟ್ಟಲೆ ಕಾದು ನಿಂತಿದ್ದರು. ಬೆಳಗ್ಗೆ 6 ಗಂಟೆಗೆ ದಿನಸಿ ಅಂಗಡಿ ತೆರೆದಿತ್ತು. ಮಧ್ಯಾಹ್ನ 3 ಗಂಟೆಯವರೆಗೆ ದಿನಸಿ ಖರೀದಿಗೆ ಅವಕಾಶ ನೀಡಿದ್ದರೂ ಇದುವರೆಗೂ ಸರದಿ ಸಾಲು ಹಲವು ಕಡೆಗಳಲ್ಲಿ ಮುಗಿದಿಲ್ಲ.
Advertisement
ಗುತ್ತಿಗಾರಿನಲ್ಲಿ ದಿನಸಿಗೆ ಕ್ಯೂ ನಿಂತವರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಪಂಚಾಯತ್ ವತಿಯಿಂದ ಮಾಡಲಾಯಿತು. ಇದೇ ವೇಳೆ ಸಂಕಷ್ಟದಲ್ಲಿರುವವರಿಗೆ ಅಕ್ಕಿ ವಿತರಣೆ ಮಾಡುವ ಕಾರ್ಯ ನಡೆಯಿತು. ಕಾರ್ಯಪಡೆ ಸದಸ್ಯರು ಹಾಗೂ ಪಂಚಾಯತ್ ಆಡಳಿತ ಮನೆ ಮನೆಗೆ ತೆರಳಿ ಅಕ್ಕಿ ವಿತರಣೆ ಮಾಡಿತು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement