ಎಲಿಮಲೆ: ಕೊರೊನಾ ವೈರಸ್ ಹರಡುವ ಮುನ್ನಚ್ಚರಿಕಾ ಕ್ರಮವಾಗಿ ಭಾರತ ಲಾಕ್ ಡೌನ್ ಆಗಿದ್ದು, ಈ ಸಂದರ್ಭ ಗರ್ಭಿಣಿಯನ್ನು ಆಸ್ಪತ್ರೆಯಿಂದ ಮನೆಗೆ ಸಾಗಿಸಲು SKSSF ಎಲಿಮಲೆ ವಿಖಾಯ ಸದಸ್ಯರು ನೆರವಾಗಿದ್ದಾರೆ.
ಕಾವು ಸಮೀಪದ ಮಾಣಿಯಡ್ಕ ರಾಘವ್ ಅವರ ಪತ್ನಿ ಸುಶೀಲ ಎಂಬವರು ಗರ್ಭಿಣಿಯಾಗಿದ್ದು, ಪ್ರಸವ ದಿನಾಂಕ ಆಗಿಲ್ಲ ಎಂದು ಡಾಕ್ಟರುಗಳು ನಿರ್ದೇಶಿಸಿದ ಹಿನ್ನಲೆಯಲ್ಲಿ ಆಸ್ಪತ್ರೆಯಿಂದ ಮನೆಗೆ ಹಿಂದಿರುಗಲು ಬಂದ್ ಹಿನ್ನಲೆ ಕಷ್ಟವಾದ್ದರಿಂದ, ತಾಲೂಕು ವಿಖಾಯ ವಿಂಗ್ ಇದರ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ ಅವರಿಗೆ ವಿಷಯ ತಿಳಿಸಿದ್ದು, ಅವರು ಸುಳ್ಯತಾಲೂಕು ವಿಖಾಯ ವಿಂಗ್ ಕನ್ವಿನರ್ ಆದ ಕಲಂದರ್ ಎಲಿಮಲೆಯವರೊಂದಿಗೆ ಚರ್ಚಿಸಿ ನಂತರ ಎಲಿಮಲೆ SKSSF ವಿಖಾಯ ವಿಂಗ್ ಸದಸ್ಯರಾದ ರಶೀದ್ ಎಲಿಮಲೆಗೆ ವಿಷಯ ತಿಳಿಸಿದ ಕೂಡಲೆ ಸ್ಪಂದಿಸಿ ರೋಗಿಯನ್ನು ಆಸ್ಪತ್ರೆಯಿಂದ ಮನೆಗೆ ಸಾಗಿಸಿದ್ದಾರೆ.
ಅದಲ್ಲದೆ ಕೊರೊನಾ ಭೀತಿಯಿಂದ ಜನರು ಹೆಚ್ಚು ಜಾಗೃತೆ ವಹಿಸುವ ಸಮಯದಲ್ಲಿ ತಮ್ಮ ಕಾರಿನ ಚಾಲಕ ಸೀಟನ್ನು ವಿಶೇಷ ತಂತ್ರಜ್ಞಾನದ ಮೂಲಕ ಹಿಂಬದಿ ಕೂತವರಿಗೆ ತೊಂದರೆಯಾಗದ ರೀತಿಯಲ್ಲಿ ಹೊದಿಕೆ ಮಾಡಿ ಕಾರನ್ನು ಚಲಾಯಿಸಿದ್ದಾರೆ.
ವಿದೇಶಿಯರು ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು ಈ ತಂತ್ರಜ್ಞಾನವನ್ನು ಬಳಸಿದ್ದರು, ಇದರ ವೀಡಿಯೋ ನೋಡಿ ಈ ರೀತಿ ಸಿದ್ದಪಡಿಸಿದ್ದೇವೆ ಎಂದು ಎಲಿಮಲೆ ವಿಖಾಯ ಸದಸ್ಯ ರಶೀದ್ ಅವರು ತಮ್ಮ ಅಭಿಪ್ರಾಯವನ್ನು ವೆಕ್ತಪಡಿಸಿದ್ದಾರೆ.