ಸುಳ್ಯ: ಕೊರೊನಾ ವೈರಸ್ ಸೋಂಕಾದ ವ್ಯಕ್ತಿಗಳು ಹಾಗೂ ಕ್ವಾಂರೇಂಟೈನ್ ನಲ್ಲಿರುವ ಮಂದಿ ಹಾಗೂ ಅವರ ಕುಟುಂಬದ ಮಂದಿ ಸಹಜವಾಗಿಯೇ ಮಾನಸಿಕವಾಗಿ ನೊಂದಿರುತ್ತಾರೆ. ಇಂತಹವರಿಗೆ ಆನ್ ಲೈನ್ ಮೂಲಕ ನೆರವಾಗಲು, ಆಪ್ತಸಮಾಲೋಚನೆ ಮಾಡಲು ತಂಡ ಸಿದ್ಧವಾಗಿದೆ. ಬೆಂಗಳೂರಿನಲ್ಲಿ ಸೋಚರ ಸಂಸ್ಥೆಯ ಮೂಲಕ ರಚನೆಯಾಗಿರುವ ಕೌನ್ಸಿಲಿಂಗ್ ತಂಡವನ್ನು ಸುಳ್ಯದ ಅಕ್ಷರ ದಾಮ್ಲೆ ನಿರ್ವಹಿಸುತ್ತಿದ್ದು, ಸೋಚರ ಸಂಸ್ಥೆ ವ್ಯವಸ್ಥೆ ಮಾಡುತ್ತಿದೆ. ಎಲ್ಲಾ ವೈದ್ಯರು, ಆಪ್ತ ಸಮಾಲೋಚಕರು ಉಚಿತವಾಗಿ ಈಗ ಬಿಡುವು ಮಾಡಿಕೊಂಡು ಸಾರ್ವಜನಿಕ ಸೇವೆ ನಡೆಸುತ್ತಿದ್ದಾರೆ.
ಸೋಚರ ಎಂಬ ಸಂಸ್ಥೆ ಸುಮಾರು 30 ವರ್ಷಗಳಿಂದ ಸಾಮಾಜಿಕ ಸ್ವಾಸ್ಥ್ಯ ಹಾಗೂ ಸಾರ್ವಜನಿಕ ಆರೋಗ್ಯದ ಬಗ್ಗೆ ಕೆಲಸ ಮಾಡುತ್ತಿದೆ. ಇದೀಗ ಈ ಸಂಸ್ತೆ ಸಾರ್ವಜನಿಕ ಕಾಳಜಿಯಿಂದ ಕೊರೊನಾ ಭಯ ನಿವಾರಣೆ ಮಾಡಲು ಹಾಗೂ ಈ ವೈರಸ್ ಸೋಂಕಾಗಿರುವ ವ್ಯಕ್ತಿಗಳ, ಕುಟುಂಬದೊಂದಿಗೆ ಆಪ್ತ ಸಮನಾಲೋಚನೆ ನಡೆಸಿ ಧೈರ್ಯ ತುಂಬುವ ಕಾರ್ಯವನ್ನು ಅನ್ ಲೈನ್ ಮೂಲಕ ಮಾಡುತ್ತಿದೆ. ಇದಕ್ಕೆ ಸುಳ್ಯದ ಅಕ್ಷರ ದಾಮ್ಲೆ ಅವರನ್ನು ಸಂಪರ್ಕಿಸಿ ಅವರ ನೇತೃತ್ವದಲ್ಲಿ ಇದೀಗ ಸಮಾಲೋಚನಾ ಚಟುವಟಿಕೆ ಆರಂಭಿಸಲಾಗಿದೆ.
ಇದೀಗ 3 ವಿಭಾಗದಲ್ಲಿ ಕೆಲಸ ಮಾಡಲಾಗುತ್ತದೆ, ಕೋವಿಡ್-19 ಸೋಂಕಿಗೆ ಒಳಗಾದವರು , ಕೋವಿಡ್-19 ಕ್ವಾರಂಟೇನ್ ನಲ್ಲಿ ಇರುವವರು ಹಾಗೂ ಕುಟುಂಬದ ಸದಸ್ಯರಿಗೆ ಹಾಗೂ ಪ್ರತ್ಯೇಕವಾಗಿ ಹೀಗೆ 3 ವಿಭಾಗದಲ್ಲಿ ಆಪ್ತಸಮಾಲೋಚನೆ ನಡೆಸಲಾಗುತ್ತಿದೆ.
ಯಾವುದೇ ರೀತಿಯ ಸಹಾಯ ಬೇಕಿದ್ದರೆ, ಮಾಹಿತಿ ಬೇಕಿದ್ದರೆ ಈ ಕೆಳಗಿನ ಸಂಪರ್ಕದ ಸಂಖ್ಯೆಗೆ ಕರೆ ಮಾಡಬಹುದು.
ಭಾರತದ ಮೇಲೆ ನೈಋತ್ಯ ಮಾನ್ಸೂನ್ನ ಆರಂಭದ ದಿನಾಂಕಗಳ ಪ್ರಕಾರ ಸಾಮಾನ್ಯವಾಗಿ ಮೇ.21 ಅಥವಾ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 953515649
ಭಾರತವು ಭಯೋತ್ಪಾದನೆಯನ್ನು ಸಹಿಸುವುದಿಲ್ಲ, ಪ್ರತಿಕ್ರಿಯಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮುಂಗಾರು ಅವಧಿಗೂ ಮುನ್ನವೇ ಆರಂಭವಾಗುವ ವರದಿಗಳು ಬರುತ್ತಿವೆ. ಈಗಾಗಲೇ ಹಿಂದುಮಹಾಸಾಗರ ಭಾಗದಿಂದ ಅರಬ್ಬಿ…
ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ಮುಳಿಯದ ಸಂಸ್ಥೆ ಸಹಯೋಗದಲ್ಲಿ ಕೃಷಿ ಅಕಾಡೆಮಿ ರಚನೆ ಮಾಡುವ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490