ಸುಳ್ಯ: ಕೊರೋನಾ ಭೀತಿಯಿಂದಾಗಿ ಇಡೀ ಜಗತ್ತು ಲಾಕ್ ಡೌನಿನಲ್ಲಿರುವ ಸಂದರ್ಭದಲ್ಲಿ ಎಸ್.ಎಸ್ ಎಫ್, ಎಸ್.ವೈ.ಎಸ್ ನ ತಂಡ ಸೋಮವಾರದಂದು ಸುಳ್ಯದಿಂದ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ತುರ್ತಾಗಿ ತಲುಪಿಸಬೇಕಾಗಿದ್ದ ರಕ್ತ ಸಂಬಂಧಿತವಾದ ರೋಗದಿಂದ ಬಳಲುತ್ತಿದ್ದ ಸೌಜನ್ಯಾ ಎಂಬವರನ್ನು ಸುಳ್ಯದ ಎಸ್.ಎಸ್.ಎಫ್, ಎಸ್. ವೈ.ಎಸ್ ತುರ್ತು ಸೇವಾ ತಂಡವು ತಲುಪಿಸಿದ್ದಾರೆ.
ಗೂನಡ್ಕ ಶಾಖೆಯ ಹಾರಿಸ್ ರವರ ವಾಹನದಲ್ಲಿ ವೈದ್ಯಾಧಿಕಾರಿಯವರ ವಿಶೇಷ ಅನುಮತಿಯನ್ನು ಪಡೆದು ಪ್ರತ್ಯೇಕ ಪಾಸ್ ವ್ಯವಸ್ಥೆಯನ್ನು ಮಾಡಿ ಸುಳ್ಯದಿಂದ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ರೋಗಿಯನ್ನು ತಲುಪಿಸುವಲ್ಲಿ ತಂಡವು ಯಶಸ್ವಿಯಾಗಿದೆ. ಹಾರಿಸ್ ಗೂನಡ್ಕರವರ ಜೊತೆ ದ.ಕ ಜಿಲ್ಲಾ ಈಸ್ಟ್ ಝೋನ್ ಬ್ಲಡ್ ಸೈಬೋ ಉಸ್ತುವಾರಿಯಾಗಿರುವ ಸಿದ್ದೀಖ್ ಗೂನಡ್ಕ ನೆರವಾದರು. ವಿಶೇಷ ಅನುಮತಿ ಹಾಗೂ ಪಾಸ್ ವ್ಯವಸ್ಥೆ ಮಾಡಿಕೊಡಲು ಸುಳ್ಯ ನಗರ ಪಂಚಾಯತ್ ಸದಸ್ಯರಾದ ಉಮರ್ ಕೆ.ಎಸ್ ರವರು ಸಹಕಾರವನ್ನು ನೀಡಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel